ಸುರತ್ಕಲ್ ಬಂಟರ ಸಂಘದ ಆಶ್ತಯದಲ್ಲಿ ನಡೆಯುವ ಯಕ್ಷಸಿರಿಯ ಯಕ್ಷ ಶಿಕ್ಷಣದ ಯಕ್ಷ ಗುರುಗಳಾದ ರಾಕೇಶ್ ರೈ ಅಡ್ಕ ಅವರಿಗೆ ಗುರುವಂದನೆ ಕಾರ್ಯಕ್ರಮ ಬಂಟರ ಭವನದಲ್ಲಿ ನಡೆಯಿತು. ಮತ್ತೋರ್ವ ಗುರುಗಳಾದ ವಿದ್ಯಾಭೂಷಣ್ ಅವರಿಗೂ ಗುರುನಮನಗಳನ್ನು ಸಲ್ಲಿಸಲಾಯಿತು. ವಿದ್ಯಾರ್ಥಿಗಳು ಗುರುಗಳ ಆಶೀರ್ವಾದ ಪಡೆದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷರಾದ ಬಾಳ ಜಗನ್ನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ ಶುಭ ಹಾರೈಸಿದರು.

ಮಹಿಳಾ ವೇದಿಕೆಯ ಅಧ್ಯಕ್ಷೆ ಸರೋಜ ಟಿ ಶೆಟ್ಟಿ, ಯಕ್ಷಸಿರಿ ಸಂಘಟಕಿ ಕವಿತಾ ಪಿ ಶೆಟ್ಟಿ, ಬಂಟರ ಸಂಘ ಹಾಗೂ ಮಹಿಳಾ ವೇದಿಕೆಯ ಪದಾಧಿಕಾರಿಗಳು, ಪೋಷಕರು ಈ ಸಂಧರ್ಭ ಉಪಸ್ಥಿತರಿದ್ದರು.