ಮೂಡುಬಿದಿರೆ: ಮಂಗಳೂರು ವಿವಿ ಅಂತರ ಕಾಲೇಜು ಥ್ರೋಬಾಲ್ ಪಂದ್ಯಾಟದಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು 20ನೇ ಬಾರಿಗೆ ಚಾಂಪಿಯನ್ಸ್ ಆಗಿ ಹೊರಹೊಮ್ಮಿತು. ಉಡುಪಿ ವಲಯ ಮಟ್ಟದಲ್ಲಿ ಅಜ್ಜರಕಾಡು ಪ್ರಥಮ ದರ್ಜೆ ಕಾಲೇಜಿನ ವಿರುದ್ಧ ನೇರ ಸೆಟ್ಗಳಿಂದ ಗೆದ್ದು ಅಂತರ ವಲಯ ಮಟ್ಟಕ್ಕೆ ಆಯ್ಕೆಯಾಗಿತ್ತು. ಐಕಳದ ಪೋಂಪೈ ಕಾಲೇಜಿನಲ್ಲಿ ನಡೆದ ಅಂತಿಮ ಹಂತದ ಹಣಾಹಣಿಯಲ್ಲಿ ಮಂಗಳೂರಿನ ಸಂತ ಅಲೋಷಿಯಸ್ ಡೀಮ್ಡ್ ಟುಬಿ ವಿವಿ ವಿರುದ್ಧ 25-13, 25-19 ಸೆಟ್ಗಳ ಅಂತರದಲ್ಲಿ ಸೋಲಿಸಿ ವಿಜೇತ ತಂಡವಾಗಿ ಹೊರಹೊಮ್ಮಿತು. ವಿಜೇತ ತಂಡವನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.
