ಕನ್ನಡ ಸಂಘ ಸಾಂತಾಕ್ರೂಜ್ ತನ್ನ 67 ನೇ ವಾರ್ಷಿಕೋತ್ಸವವು ಮಾರ್ಚ್ 29 ರಂದು ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿನ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ನಡೆಯಿತು. ಸಂಘದ ಅಧ್ಯಕ್ಷೆ ಸುಜಾತ ಆರ್. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭವನ್ನು ಬಾಬಾ’ಸ್ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ, ಬಂಟರ ಸಂಘ ಮುಂಬಯಿ ಇದರ ಉಪಾಧ್ಯಕ್ಷ ಮಹೇಶ್ ಎಸ್. ಶೆಟ್ಟಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಿಲ್ಲವರ ಅಸೋಸಿಯೇಷನ್ ಮುಂಬೈ ಅಧ್ಯಕ್ಷ ಹರೀಶ್ ಜಿ. ಅಮೀನ್, ಬಂಟರ ಸಂಘ ಮುಂಬಯಿಯ ಪೊವಾಯಿ ಎಜುಕೇಶನ್ ಸಮಿತಿ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಜವಾಬ್ ಅಧ್ಯಕ್ಷ ರಾಜೇಶ್ ಬಿ. ಶೆಟ್ಟಿ, ಪ್ರಸಿದ್ಧ ಜ್ಯೋತಿಷಿ, ವಾಸ್ತುತಜ್ಞ ಅಶೋಕ್ ಪುರೋಹಿತ್ ಗೌರವ ಅತಿಥಿಗಳಾಗಿ ಆಗಮಿಸಿದ್ದು, ಸಂಘವು ವಾರ್ಷಿಕವಾಗಿ ಕೊಡ ಮಾಡುವ ಸಾಧಕ ಸನ್ಮಾನಗಳನ್ನು ಪ್ರಧಾನಿಸಿ ಸಂಘವು ಅರ್ಹ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ಕೊಡ ಮಾಡುವ ಶೈಕ್ಷಣಿಕ ಆರ್ಥಿಕ ನೆರವು, ಆರೋಗ್ಯ ನಿಧಿ ವಿತರಿಸಿ ವಿದ್ಯಾರ್ಥಿಗಳ ದತ್ತು ಸ್ವೀಕಾರಗೈದರು.ಇದೇ ಸಂದರ್ಭದಲ್ಲಿ ಸಂಘದ ಮಹಾದಾನಿ, ಚೀನಾದ ಮಕಾವುನಲ್ಲಿ ನಡೆಯಲಿರುವ ಎಂ.ಡಿ.ಆರ್.ಟಿ ಗ್ಲೋಬಲ್ ಕಾನ್ಫರೆನ್ಸ್ ನ ಸ್ಪೀಕರ್ ಆಗಿ ಆಯ್ಕೆಯಗಿರುವ ಬಂಟರ ಸಂಘ ಮುಂಬಯಿಯ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್. ಕೆ ಶೆಟ್ಟಿ ಅವರನ್ನು ಗ್ಲೋಬಲ್ ಸಾಧಕ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಡಾ| ಆರ್. ಕೆ ಶೆಟ್ಟಿ ಸನ್ಮಾನಕ್ಕೆ ಆಭಾರ ಮನ್ನಿಸಿ ಬಿರುದು ನೀಡಿ ಗೌರವಿಸಿದ ಕನ್ನಡ ಸಂಘದ ಋಣ ಪೂರೈಸಲು ಸದಾ ಸಿದ್ಧನಿದ್ದೇನೆ. ಎಲ್. ವಿ ಅಮೀನ್ ಈ ಸಂಘವನ್ನು ಬೆಳೆಸಿ ಪರಿಸರದ ಜನರಿಗೆ ಸಹಾಯವಾಗುತ್ತಾ ಪ್ರಸಿದ್ಧಿಸಿದ್ದು, ಸದ್ಯ ಸುಜಾತ ಶೆಟ್ಟಿ ತಮ್ಮ ಸಾರಥ್ಯದಲ್ಲಿ ಮುನ್ನಡೆಸುತ್ತಿದ್ದಾರೆ. ಈ ಸಂಘವು ಮುಂದೆಯೂ ಎತ್ತರಕ್ಕೆ ಬೆಳೆಯಲಿ ಎಂದರು.
ಎಲ್. ವಿ ಅಮೀನ್ ಮಾತನಾಡಿ, ಸಂಘಕ್ಕೆ 67 ವರ್ಷಗಳು ಹೇಗೆ ಕಳೆಯಿತು ಎಂದು ಗೊತ್ತೇ ಆಗಲಿಲ್ಲ. ಹಿರಿಯರು ಮುಂಬೈಗೆ ಆಗಮಿಸಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲು ಈ ಸಂಘ ಕಟ್ಟಿದ್ದಾರೆ. ವಿದ್ಯೆಗಾಗಿ ದಾನಿಗಳಲ್ಲಿ ಹಣ ಸಂಗ್ರಹಿಸಲು ತುಂಬಾ ಕಷ್ಟಪಟ್ಟಿದ್ದು ನಾನು ಕಣ್ಣಾರೆ ಕಂಡಿದ್ದೇನೆ. ಇಂದು ಅವರ ದೂರ ದೂರದೃಷ್ಟಿತ್ವ ಕನಸು ಪೂರ್ಣವಾಗಿದೆ. ಆರ್. ಕೆ. ಶೆಟ್ಟಿ ಅವರು ವಿಶ್ವದಲ್ಲಿ ಗುರುತಿಸಿಕೊಂಡಿದ್ದು, ಇಂದು ನಮ್ಮ ಸಂಸ್ಥೆ ಅವರನ್ನು ಗ್ಲೋಬಲ್ ಸಾಧಕ ರತ್ನ ಪ್ರಶಸ್ತಿ ನೀಡಿ ಗುರುತಿಸಿದ್ದು, ನಮ್ಮ ಸಂಘದ ಭಾಗ್ಯ. ನಮ್ಮ ಸಂಘದಲ್ಲಿ ಮಹಿಳೆಯರು ಜಾಸ್ತಿ ಸಂಖ್ಯೆಯಲ್ಲಿದ್ದು, ಅವರು ಸಂಘಕ್ಕೆ ಬಂದ ನಂತರ ನಮ್ಮ ಸಂಘ ತುಂಬಾ ಬೆಳೆದಿದೆ. ಇಂದು ಮಹಿಳೆ ಮನೆಗೆ ಮಾತ್ರ ಸೀಮಿತವಾಗದೆ ಮನೆ ಮಕ್ಕಳಿಗೆ ಜವಾಬ್ದಾರಿಯುತರಾಗಿಸಿ ಸಮಾಜದ ಏಳಿಗೆಗಾಗಿ ದುಡಿಯುತ್ತಿರುವುದು ಸ್ತುತ್ಯಾರ್ಹ ಎಂದರು.
ಇದೇ ಸಂಧರ್ಭದಲ್ಲಿ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹ ಪ್ರಾಧ್ಯಪಕಿ ಕಾಡಾ| ಪೂರ್ಣಿಮಾ ಸುಧಾಕರ್ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಿದರು. ಸಂಘದ ಉಪಾಧ್ಯಕ್ಷ ಭುಜಂಗ ಆರ್. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಜಯ ವಿ. ಪೂಜಾರಿ, ಗೌರವ ಕೋಶಾಧಿಕಾರಿ ಸುಧಾಕರ್ ಉಚ್ಚಿಲ್, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ವನಿತಾ ವೈ ನೋಂಡಾ, ಕಾರ್ಯದರ್ಶಿ ಲಕ್ಷ್ಮೀ ಎನ್. ಕೋಟ್ಯಾನ್, ವಿದ್ಯಾ, ಉಪಸಮಿತಿ ಕಾರ್ಯಾಧ್ಯಕ್ಷ ವಿಜಯಕುಮಾರ್ ಕೆ ಕೋಟ್ಯಾನ್, ಕಾರ್ಯದರ್ಶಿ ಶಕೀಲಾ ಪಿ. ಶೆಟ್ಟಿ, ಸಲಹೆಗಾರ ಭೋಜ ಎನ್. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದು, ಜೊತೆ ಕಾರ್ಯದರ್ಶಿ ಚಂದ್ರಹಾಸ ಜೆ. ಕೋಟ್ಯಾನ್, ಜೊತೆ ಕೋಶಾಧಿಕಾರಿ ಬನ್ನಂಜೆ ರವೀಂದ್ರ ಅಮೀನ್, ಸಲಹೆಗಾರ ಬಿ.ಆರ್ ಪೂಂಜ ಸೇರಿದಂತೆ ಕಾರ್ಯಕಾರಿ ಸಮಿತಿ ಮತ್ತು ಅನೇಕ ಸದಸ್ಯರು ಹಾಜರಿದ್ದರು.
