ಆರ್.ಬಿ.ಐ ಮಾಜಿ ನಿರ್ದೇಶಕರಾಗಿರುವ ಸಹಕಾರ ರತ್ನ ಡಾ| ಅಗರಿ ನವೀನ್ ಭಂಡಾರಿಯವರು ಬೆಂಗಳೂರಿನ ಅನ್ವೇಷಣೆ ಅಕಾಡೆಮಿಯವರು ನೀಡುವ ಸಮಾಜಶ್ರೀ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸಮಾಜ ಸೇವೆ, ಸಹಕಾರ, ಧಾರ್ಮಿಕ, ರಾಜಕೀಯ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಅಭೂತಪೂರ್ವವಾದ ಸೇವೆಯನ್ನು ಮಾಡುತ್ತಿರುವ ನವೀನ್ ಭಂಡಾರಿಯವರ ಸಮಾಜ ಸೇವಾ ಕ್ಷೇತ್ರದ ಅವಿರತ ಸಾಧನೆಗಾಗಿ ಸಮಾಜಶ್ರೀ ರಾಜ್ಯ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.