ಮಡ್ಗಾವ್ ರೈಲ್ವೇ ಸ್ಟೇಷನ್ ಸಮೀಪ ಲಕ್ಷ್ಮೀ ಎಂಪಾಯರ್ ಹೊಟೇಲ್ ಸಭಾಂಗಣದಲ್ಲಿ ಜನವರಿ 19 ರಂದು ದಿನ ಪೂರ್ತಿ ನಡೆಯಲಿರುವ ಗೋವಾ ಬಂಟರ ಸಂಘದ ರಜತ ಮಹೋತ್ಸವದ ವಿವಿಧ ಕಾರ್ಯಕ್ರಮಗಳು ಸಂಘದ ಅಧ್ಯಕ್ಷರಾದ ಕಾವಡಿ ಸದಾಶಿವ ಶೆಟ್ಟಿಯವರ ಘನ ಅಧ್ಯಕ್ಷತೆಯಲ್ಲಿ ಜರುಗಲಿದ್ದು, ಪರಿಸರದ ಸಮಾಜ ಬಾಂಧವರನ್ನು ಆತ್ಮೀಯವಾಗಿ ಆಮಂತ್ರಿಸಿದ್ದಾರೆ.ಜೆ.ಡಿ.ಎಸ್ ನ ರಾಜ್ಯ ಉಪಾಧ್ಯಕ್ಷರು, ಮೈಸೂರಿನ ಜ್ಞಾನಸರೋವರ ರೆಸಿಡೆನ್ಸಿಯಲ್ ಸ್ಕೂಲ್ ನ ಛೇರ್ಮನ್ ಸುಧಾಕರ ಶೆಟ್ಟಿಯವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಯು.ಎ.ಇ ಬಂಟರ ಸಂಘದ ಅಧ್ಯಕ್ಷ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಡಾ| ಗಣನಾಥ ಶೆಟ್ಟಿ ಎಕ್ಕಾರ್ ಅವರು ಸಾಂದರ್ಭಿಕ ಭಾಷಣ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಿಐಡಿ ಖ್ಯಾತಿಯ ದಯಾನಂದ ಶೆಟ್ಟಿ, ಉದ್ಯಮಿ, ಕಲಾವಿದ ಹರೀಶ್ ವಾಸು ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕೋಶಾಧಿಕಾರಿ ಉಳ್ತೂರು ಮೋಹನದಾಸ ಶೆಟ್ಟಿ, ಪತ್ರಕರ್ತ, ವಾಗ್ಮಿ ಶ್ರೀಕಾಂತ ಶೆಟ್ಟಿ ಕಾರ್ಕಳ ಮೊದಲಾದ ಗಣ್ಯರು ಉಪಸ್ಥಿತರಿದ್ದು ಸಭೆಯ ಶೋಭೆಯನ್ನು ಹೆಚ್ಚಿಸಲಿದ್ದಾರೆ.ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕೊಡವೂರು ನೃತ್ಯ ನಿಕೇತನ ಕಲಾವಿದರಿಂದ ನೃತ್ಯರೂಪಕಗಳ ಪ್ರಸ್ತುತಿ, ಸಭಾ ಕಾರ್ಯಕ್ರಮ, ಅತಿಥಿಗಳ ಭಾಷಣ, ಅಧ್ಯಕ್ಷರ ಭಾಷಣ, ವಂದನಾರ್ಪಣೆ ಬಳಿಕ ಮಂಗಳೂರಿನ ಲಕುಮಿ ಕಿಶೋರ್ ಡಿ ಶೆಟ್ಟಿ ಸಾರಥ್ಯದ ಬಹುಪ್ರಶಂಸೆ ಪಡೆದ ಶನೀಶ್ವರ ಮಹಾತ್ಮೆ ನಾಟಕ ಪ್ರದರ್ಶನವಾಗಲಿದೆ. ಸಮಾಜ ಬಾಂಧವರೆಲ್ಲರೂ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.