ವಿದ್ಯಾಭ್ಯಾಸ ಮೆಕ್ಯಾನಿಕಲ್ ಎಂಜಿನಿಯರಿಂಗ್. ವೃತ್ತಿಯಲ್ಲಿ ಬೆಂಗಳೂರಿನ ಪ್ರತಿಷ್ಠಿತ ಟೊಯೊಟಾ ಕಂಪನೆಯಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರ್. ಆದರೆ ತುಡಿತ ಕರಾವಳಿಯ ಗಂಡು ಕಲೆ ಖ್ಯಾತಿಯ ಯಕ್ಷಗಾನದಲ್ಲಿ ಸುಸ್ಥಿರತೆ. ಇದಕ್ಕಾಗಿ ವಿಭಿನ್ನ ರೀತಿಯಲ್ಲಿ ಪ್ರಯತ್ನಿಸುತ್ತಿರುವವರು ಬೆಂಗಳೂರು ಬಂಟರ ಸಂಘದ ಮಾಜಿ ಕೋಶಾಧಿಕಾರಿ ಬಾರ್ಕೂರು ದೀಪಕ್ ಶೆಟ್ಟಿ. ಯಕ್ಷಗಾನ ಕ್ಷೇತ್ರದ ಆರ್ಥಿಕ ಸ್ಥಿತಿಗತಿಗಳ ಮೌಲ್ಯೀಕರಣ ಎನ್ನುವ ವಿಷಯದ ಕುರಿತು ಇವರು ಮಂಡಿಸಿದ ಮಹಾಪ್ರಬಂಧಕ್ಕೆ ಡಾ| ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿ.ವಿ. ಪಿ.ಎಚ್ಡಿ ಪದವಿ ನೀಡಿದೆ. ಇದಕ್ಕಾಗಿ ಯಕ್ಷಗಾನದ ಇತಿಹಾಸ, ಪೌರಾಣಿಕೆ ಹಿನ್ನಲೆ, ರೂಪಾಂತರವನ್ನು ಅಭ್ಯಸಿಸಿ ಪ್ರಬಂಧದಲ್ಲಿ ಮಂಡಿಸಿದ್ದಾರೆ. ಹತ್ತಾರು ಹಿರಿಯ ಕಲಾವಿದರನ್ನು ಸಂದರ್ಶಿಸಿ, ಕ್ಷೇತ್ರದಲ್ಲಿ ಆಳವಾದ ಅಧ್ಯಯನ ನಡೆಸಿದ್ದಾರೆ. ಸುಮಾರು 3 ತಲೆಮಾರಿನ ಅನುಭವವನ್ನು ಸಂಗ್ರಹಿಸಿದ್ದಾರೆ.ಮುಖ್ಯ ಉದ್ದೇಶ: ಆರ್ಥಿಕವಾಗಿ ಸದೃಢವಿದ್ದಾಗ ಕಲಾವಿದರು ಉಳಿಯುತ್ತಾರೆ. ಕಲಾ ಪ್ರಕಾರ ಉಳಿಯುತ್ತದೆ. ಯಕ್ಷಗಾನ ಕ್ಷೇತ್ರದಲ್ಲಿ ಆರ್ಥಿಕ ಸುಸ್ಥಿರತೆ ಕಾಪಾಡುವ ಮುಖ್ಯ ಉದ್ದೇಶದಿಂದ ವಿಚಾರ ಮಂಡಿಸಿದ್ದಾರೆ. ಈ ಸುಸ್ಥಿರತೆಯಲ್ಲಿ ಕಲಾವಿದರು, ಮೇಳದ ಯಜಮಾನರು, ಸಂಘಟಕರು, ಪ್ರೇಕ್ಷಕರು ಹಾಗೂ ಪ್ರಾಮುಖ್ಯವಾಗಿ ಸರಕಾರದ ಪಾತ್ರವನ್ನು ಒತ್ತಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದೀಕ್ಷಾ ಕನ್ವೆನ್ಷನ್ ಹಾಲ್ ಹೊಂದಿರುವ ಶ್ರೀಯುತರು ಯುವ ಉದ್ಯಮಿಯಾಗಿ, ಸಮಾಜ ಸೇವಕರಾಗಿಯೂ ಗುರುತಿಸಿಕೊಂಡಿರುರುವ ಬಾರ್ಕೂರು ದೀಪಕ್ ಶೆಟ್ಟಿಯವರಿಗೆ ಸಮಸ್ತ ಬಂಟ ಸಮಾಜದ ಪರವಾಗಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಶುಭ ಹಾರೈಸುತ್ತದೆ.