ಪೊಳಲಿಯಲ್ಲಿರುವ ಶ್ರೀ ರಾಮಕೃಷ್ಣ ತಪೋವನದ ವತಿಯಿಂದ ಪಲ್ಲಿಪಾಡಿ ಎಂಬಲ್ಲಿ ಸುಮಾರು 6 ಎಕರೆ ಜಮೀನಿನಲ್ಲಿ ರೂ.75 ಕೋಟಿ ವೆಚ್ಚದಲ್ಲಿ ಆಧುನಿಕ ಮತ್ತು ಗುರುಕುಲ ಮಾದರಿಯ ಹೈಟೆಕ್ ಶಿಕ್ಷಣಕ್ಕೆ ಒತ್ತುನೀಡುವ ನಿಟ್ಟಿನಲ್ಲಿ “ರಾಮಕೃಷ್ಣ ವಿದ್ಯಾದೇಗುಲ” ಎಂಬ ಹೊಸ ಶಿಕ್ಷಣ ಸಂಸ್ಥೆ ಪ್ರಾರಂಭಕ್ಕೆ ಜೂನ್ 16 ರಂದು ಆದಿತ್ಯವಾರ ಬೆಳಿಗ್ಗೆ 8.30 ಗಂಟೆಗೆ ಭೂಮಿ ಪೂಜೆ ನಡೆಯಲಿದೆ ಎಂದು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿ ತಿಳಿಸಿದ್ದಾರೆ.
