ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯದ 2022-23ನೇ ಸಾಲಿನ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಕಾಲೇಜು ಪಾರಮ್ಯ ಮೆರೆದಿದೆ. ಪದವಿ, ಸ್ನಾತಕೋತ್ತರ, ಶಿಕ್ಷಣ (ಬಿಇಡಿ) ಹಾಗೂ ದೈಹಿಕ ಶಿಕ್ಷಣ (ಬಿಪಿಇಡಿ) ವಿಭಾಗಗಳಲ್ಲಿ ಕಾಲೇಜಿಗೆ ಒಟ್ಟು 24 ರ್ಯಾಂಕ್ ಲಭಿಸಿವೆ. ಪದವಿ ರ್ಯಾಂಕ್ ಗಳು: ಬಿಎಸ್ಸಿ ಫುಡ್, ನ್ಯೂಟ್ರಿಷನ್ಆ್ಯಂಡ್ ಡಯಟಿಕ್ಸ್ ವಿಭಾಗದಲ್ಲಿ ದ್ಯುತಿರಾವ್ (1ನೇ ರ್ಯಾಂಕ್), ರಚನಾ (3ನೇ ರ್ಯಾಂಕ್), ಅರ್ಪಿತಾ (7ನೇ ರ್ಯಾಂಕ್), ಬಿಎಸ್ಸಿ ವಿಭಾಗದಲ್ಲಿ ನಿರೀಕ್ಷಾ (8ನೇ ರ್ಯಾಂಕ್), ಬಿಎಸ್ಸಿ ಫ್ಯಾಶನ್ ಡಿಸೈನಿಂಗ್ ವಿಭಾಗದಲ್ಲಿ ರಮ್ಯಾ (2ನೇರ್ಯಾಂಕ್), ಬಿಕಾಂ. ವಿಭಾಗದಲ್ಲಿ ಗ್ರೀಷ್ಮಾ (1ನೇ ರ್ಯಾಂಕ್), ಬಿಎ – ಎಚ್ಆರ್ಡಿ ವಿಭಾಗದಲ್ಲಿ ಸ್ವಾತಿ ನಾಯಕ್ (2ನೇ ರ್ಯಾಂಕ್) ಪಡೆದಿದ್ದಾರೆ.ಬಿಬಿಎ ವಿಭಾಗದಲ್ಲಿ ಸಂಪಾ ದಾಸ್ (6ನೇ ರ್ಯಾಂಕ್), ಎಂ. ಸೌಮ್ಯ (7ನೇ ರ್ಯಾಂಕ್), ಭೂಮಿಕಾ ಬಿಎಚ್ (8ನೇ ರ್ಯಾಂಕ್), ಬಿಎಸ್ಡಬ್ಲೂ ವಿಭಾಗದಲ್ಲಿ ಐಶ್ವರ್ಯಎಸ್ (3ನೇರ್ಯಾಂಕ್), ಬಿಸಿಎ ವಿಭಾಗದಲ್ಲಿ ಪೃಥ್ವಿ (5ನೇ ರ್ಯಾಂಕ್) ಬಿಎ ವಿಭಾಗದಲ್ಲಿ ಶ್ರೀಲಕ್ಷೀ (4ನೇ ರ್ಯಾಂಕ್) ಸ್ನಾತಕೋತ್ತರ ರ್ಯಾಂಕ್: ಎಂಎ ಇಂಗ್ಲಿಷ್ ವಿಭಾಗದಲ್ಲಿ ಅಫ್ರಾ ಮೊಹಮದ್ಇರ್ಫಾನ್ (1ನೇ ರ್ಯಾಂಕ್), ಎಂಎಸ್ಸಿ ಮನಶಾಸ್ತ್ರ ವಿಭಾಗದಲ್ಲಿ ಅನುಶ್ರೀ (1ನೇ ರ್ಯಾಂಕ್), ಎಂಎಸ್ಸಿ ಆನ್ವಯಿಕ ರಸಾಯನಶಾಸ್ತ್ರ ಆಶ್ರಯ್ (1ನೇ ರ್ಯಾಂಕ್), ಎಂಎಸ್ಸಿ ಆಹಾರ ವಿಜ್ಞಾನದಲ್ಲಿ ಯಶಸ್ವಿ (1ನೇ ರ್ಯಾಂಕ್) ಪಡೆದಿದ್ದಾರೆ.
ಬಿಪಿಇಡಿ ಹಾಗೂ ಎಂಪಿಇಡಿ: ಎಂಪಿಇಡಿ ವಿಭಾಗದಲ್ಲಿ ಶಾಲಿನಿ ಕೆ (1ನೇ ರ್ಯಾಂಕ್), ಬಿಪಿಇಡಿ ವಿಭಾಗದಲ್ಲಿ ದಿವ್ಯಾ (1ನೇ ರ್ಯಾಂಕ್), ಮನೀಷಾ (2ನೇ ರ್ಯಾಂಕ್), ತನುಜಾ (3ನೇ ರ್ಯಾಂಕ್) ಪಡೆದಿದ್ದಾರೆ. ಬಿಇಡಿ: 2023ನೇ ಸಾಲಿನಲ್ಲಿ ರಿಯೋನಾ (2ನೇ ರ್ಯಾಂಕ್), ಸೊನಿಯಾ (3ನೇ ರ್ಯಾಂಕ್), 2024ನೇ ಸಾಲಿನ ಪರೀಕ್ಷೆಯಲ್ಲಿ ಭವ್ಯಶ್ರೀ (6ನೇ ರ್ಯಾಂಕ್) ಗಳಿಸಿದ್ದಾರೆ. ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಆಳ್ವಾಸ್ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಡಾ. ಶಂಕರ ಮೂರ್ತಿ, ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಮಧು ಇದ್ದರು.