ಆರ್ಥಿಕವಾಗಿ ಹಿಂದುಳಿದ ಬಂಟ ಯುವತಿಯ ವಿವಾಹಕ್ಕಾಗಿ ಬೆಂಗಳೂರು ಬಂಟರ ಸಂಘದಿಂದ ನೀಡುವ ಕರಿಮಣಿ ಕಾರ್ಯಕ್ರಮ ಅಡಿಯಲ್ಲಿ ಹೊಸೂರು ಗ್ರಾಮಕ್ಕೆ ತೆರಳಿ ಸಾಗರ ಬಂಟರ ಸಂಘದ ಮುಖಾಂತರ ಸುಮಾರು 50000 ಮೌಲ್ಯದ ಕರಿಮಣಿಯನ್ನು ವಿತರಿಸಲಾಯಿತು. ಸಾಗರ ಬಂಟರ ಸಂಘದ ಪದಾಧಿಕಾರಿಗಳು ಮನೆಯ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ ಕೇವಲ ಒಂದು ಗಂಟೆಯಲ್ಲಿ 16000 ರೂಪಾಯಿಗಳ ಸಹಾಯ ಧನವನ್ನು ಯುವತಿಯ ಮದುವೆಗಾಗಿ ಸಹಾಯ ಮಾಡಿದರು.
ಈ ಸಂಧರ್ಭದಲ್ಲಿ ದಾನಿಗಳಾದ ಸಾಗರ ಬಂಟರ ಸಂಘದ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಸದಾನಂದ ಶೆಟ್ಟಿ, ಶ್ರೀನಿವಾಸ್ ಶೆಟ್ಟಿ, ಸುರೇಶ್ ಶೆಟ್ಟಿ ನಿಸ್ರಾಣಿ, ಪ್ರಭಾಕರ್ ಶೆಟ್ಟಿ ಕಾಂಟ್ರಾಕ್ಟರ್, ಸತೀಶ್ ಶೆಟ್ಟಿ, ರಮೇಶ್ ಹೆಗ್ಡೆ, ಅಣ್ಣಪ್ಪ ಶೆಟ್ಟಿ, ಶ್ರೀಧರ್ ಶೆಟ್ಟಿ, ರಘುಪತಿ ಶೆಟ್ಟಿ, ಪ್ರಕಾಶ್ ಶೆಟ್ಟಿ, ನಾಗರಾಜ್ ಶೆಟ್ಟಿ, ಪ್ರತಾಪ್ ಶೆಟ್ಟಿ ಎಲ್ಲರೂ ತಮ್ಮ ಸ್ವಂತ ದುಡಿಮೆಯ ಪಾಲನ್ನು ಮದುವೆಗಾಗಿ ನೀಡಿ ಮಾನವೀಯತೆ ಮೆರೆದರು.