ಪುಣೆ ಬಂಟರ ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಹಾಗೂ ಓಣಿಮಜಲು ದಿವಂಗತ ಜಗನ್ನಾಥ್ ಶೆಟ್ಟಿಯವರ ಸೊಸೆ ಶ್ರೀಮತಿ ಜಯಂತಿ ಜೆ. ಶೆಟ್ಟಿ ಮತ್ತು ಉನ್ನತ ಅಲಂಕೃತ ಅಧಿಕಾರಿ ಮತ್ತು ನಿವೃತ್ತ ಸಿ.ಅರ್.ಪಿ.ಎಫ್ ಪೋಲಿಸ್ ಮಹಾನೀರಿಕ್ಷಕ ಶ್ರೀ ಜಯಾನಂದ ಶೆಟ್ಟಿ ಇವರ ವೈವಾಹಿಕ ಜೀವನದ ಸುವರ್ಣ ಮಹೋತ್ಸವ ಕಾರ್ಯಕ್ರಮವು ಪುಣೆ ಬಂಟರ ಭವನದಲ್ಲಿ ಜರಗಿತು. ಈ ಸಂದರ್ಭದಲ್ಲಿ ಜಯಾನಂದ ಶೆಟ್ಟಿ ಹಾಗೂ ಜಯಂತಿ ಶೆಟ್ಟಿ ದಂಪತಿಗಳನ್ನು ಪುಣೆ ಬಂಟರ ಸಂಘದ ವತಿಯಿಂದ ಶಾಲು, ಸ್ಮರಣಿಕೆ ನೀಡಿ ಹೂಹಾರ ಹಾಕಿ ಶುಭಾಶಯ ಕೋರಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ, ಪುಣೆ ಕರ್ನಾಟಕ ಸಂಘದ ಅಧ್ಯಕ್ಷ ಕುಶಾಲ್ ಹೆಗ್ಡೆ, ಪುಣೆ ತುಳುಕೂಟ ಅಧ್ಯಕ್ಷ ದಿನೇಶ್ ಎ ಶೆಟ್ಟಿ, ಪುಣೆ ಗುರುದೇವ ಸೇವಾ ಬಳಗದ ಅಧ್ಯಕ್ಷ ಪ್ರಭಾಕರ್ ಶೆಟ್ಟಿ, ಮಹಿಳಾ ಕಾರ್ಯಾಧ್ಯಕ್ಷೆ ಸುಲತಾ ಎಸ್.ಶೆಟ್ಟಿ ಮತ್ತು ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಹರೀಶ್ ಮೂಡಬಿದ್ರಿ