ಪ್ರತಿಷ್ಠಿತ ಜಾತೀಯ ಸಂಘಟನೆಗಳಲ್ಲೊಂದಾದ ಬಾಂಬೆ ಬಂಟ್ಸ್ ಅಸೋಸಿಯೇಷನ್ ಮುಂಬಯಿ ಇದರ 40 ನೇ ವಾರ್ಷಿಕ ಮಹಾಸಭೆಯು ಜೂಯಿ ನಗರದ ಬಂಟ್ಸ್ ಸೆಂಟರ್ ನ ಶಶಿಕಲಾ ಮನಮೋಹನ್ ಶೆಟ್ಟಿ ಕಾಂಪ್ಲೆಕ್ಸ್ ನ ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಗೃಹದಲ್ಲಿ ಅಸೋಸಿಯೇಷನ್ ನ ಅಧ್ಯಕ್ಷ ಸಿ.ಎ ಸುರೇಂದ್ರ ಕೆ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಪ್ರಾರ್ಥನೆಯೊಂದಿಗೆ ಮಹಾಸಭೆಗೆ ಚಾಲನೆ ನೀಡಲಾಯಿತು. ಗೌರವ ಪ್ರಧಾನ ಕಾರ್ಯದರ್ಶಿ ಐಕಳ ಕಿಶೋರ್ ಶೆಟ್ಟಿ ಅವರು ಗತ ಸಾಲಿನ ಮತ್ತು ವಾರ್ಷಿಕ ವರದಿ ವಾಚಿಸಿದರು. ಗೌರವ ಕೋಶಾಧಿಕಾರಿ ವಿಶ್ವನಾಥ್ ಎಸ್. ಶೆಟ್ಟಿ ಅವರು ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ವೇದಿಕೆಯಲ್ಲಿ ಬಾಂಬೆ ಬಂಟ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಡಿ.ಕೆ. ಶೆಟ್ಟಿ, ಗೌರವ ಪ್ರದಾನ ಕಾರ್ಯದರ್ಶಿ ವಿಶ್ವನಾಥ್ ಶೆಟ್ಟಿ, ಜತೆ ಕಾರ್ಯದರ್ಶಿ ಗುಣಕರ್ ಡಿ. ಶೆಟ್ಟಿ, ಜತೆ ಕೋಶಾಧಿಕಾರಿ ಸಿಎ ದಿವಾಕರ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ತೇಜಾಕ್ಷಿ ಎಸ್. ಶೆಟ್ಟಿ, ಯುವ ವಿಭಾಗದ ಕಾರ್ಯಧ್ಯಕ್ಷೆ ದೃಶ್ಯಾ ಕೆ. ಶೆಟ್ಟಿ ಅವರು ಉಪಸ್ಥಿತರಿದ್ದರು.
ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಸಿಎ ಸುರೇಂದ್ರ ಕೆ. ಶೆಟ್ಟಿ ಅವರು ಮಾತನಾಡಿ, ಬಾಂಬೆ ಬಂಟ್ಸ್ ಅಸೋಸಿಯೇಷನ್ ಕಳೆದ ನಾಲ್ಕು ದಶಕಗಳಿಂದ ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆ ಅಪಾರವಾಗಿದೆ. ಮಾಜಿ ಅಧ್ಯಕ್ಷರು, ಟ್ರಸ್ಟಿಗಳು, ದಾನಿಗಳ ಸಹಾಯ, ಸಹಕಾರದಿಂದ ಸಂಸ್ಥೆಯು ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಸಂಸ್ಥೆಯ ಅಧಾರ ಸ್ತಂಭಗಳಂತಿರುವ ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಇತರ ಉಪಸಮಿತಿಗಳು ಮಾಡುತ್ತಿರುವ ಸೇವೆ ಅಪಾರವಾಗಿದೆ. ಶಿಕ್ಷಣ ಸಮಿತಿಯ ಕಾರ್ಯಧ್ಯಕ್ಷ ನ್ಯಾಯವಾದಿ ರತ್ನಾಕರ್ ವಿ. ಶೆಟ್ಟಿ, ಸಮಿತಿಯ ಕಾರ್ಯದರ್ಶಿ ಶ್ರೀಧರ ಕೆ. ಶೆಟ್ಟಿ ಅವರ ತಂಡದ ಪರಿಶ್ರಮವನ್ನು ಮರೆಯುವಂತಿಲ್ಲ. ಸಂಸ್ಥೆಯ ಉನ್ನತ ಶಿಕ್ಷಣ ಸಮಿತಿಯ ಶೈಕ್ಷಣಿಕ ಸಂಕುಲದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ನಡೆಯುತ್ತಿದ್ದು ಪ್ರತೀ ವರ್ಷ ಉತ್ತಮ ಫಲಿತಾಂಶ ಲಭಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಸಂಸ್ಥೆಯ ಕ್ಯಾಟರಿಂಗ್ ಸಮಿತಿಯ ಕಾರ್ಯಧಕ್ಷ ಶ್ಯಾಮ್ ಎನ್ ಶೆಟ್ಟಿ, ಕಟ್ಟಡ ಸಮಿತಿಯ ಕಾರ್ಯಧ್ಯಕ್ಷ ಸದಾನಂದ ಶೆಟ್ಟಿ ಹಾಗೂ ಇನ್ನಿತರ ಉಪಸಮಿತಿಗಳ ಕಾರ್ಯಧ್ಯಕ್ಷರ ಸೇವೆಯನ್ನು ಮರೆಯುವಂತಿಲ್ಲ. ಅಸೋಸಿಯೇಷನ್ ಮುಖವಾಣಿ ಪತ್ರಪುಷ್ಪ ಸಮಿತಿಯು ಸಂಸ್ಥೆಯ ಸಮಾಜಪರ ಸೇವೆಗಳನ್ನು ಸಮಾಜ ಬಾಂಧವರ ಮನೆ ಮನಗಳಿಗೆ ತಲುಪಿಸುವಲ್ಲಿ ಮಹತ್ತರ ಸಾಧನೆ ಮಾಡುತ್ತಿದೆ. ಸಂಸ್ಥೆಯ ಪ್ರತಿಯೊಂದು ಉಪಸಮಿತಿಗಳ ಯೋಗದಾನ ಸಂಸ್ಥೆಯ ಅಭಿವೃದ್ಧಿಗೆ ಅಪಾರವಾಗಿದೆ. ದಾನಿಗಳ ಸಹಾಯ ಸಹಕಾರದಿಂದ ಅಸೋಸಿಯೇಷನ್ ಸಮಾಜದ ಅಶಕ್ತರ ಕಣ್ಣೀರನ್ನು ಒರೆಸುವ ಕಾಯಕದಲ್ಲಿ ತೊಡಗಿದ್ದು, ಭವಿಷ್ಯದಲ್ಲೂ ಸಂಸ್ಥೆಯ ಸಮಾಜಪರ, ಶೈಕ್ಷಣಿಕ ಸೇವಾಕಾರ್ಯಗಳಿಗೆ ಎಲ್ಲರ ಸಹಾಯ, ಸಹಕಾರ ಸದಾ ಇರಲಿ ಎಂದು ನುಡಿದು ಶುಭ ಹಾರೈಸಿದರು.
ಮಹಾಸಭೆಯಲ್ಲಿ ಉಪಸ್ಥಿತರಿದ್ದ ಬಾಂಬೆ ಬಂಟ್ಸ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷರಾದ ಎನ್ ಸಿ ಶೆಟ್ಟಿ, ನ್ಯಾಯವಾದಿ ಪ್ರಕಾಶ್ ಎಲ್ ಶೆಟ್ಟಿ, ಜಯರಾಮ್ ಮಲ್ಲಿ, ಶೇಖರ್ ಶೆಟ್ಟಿ ಹಾಗೂ ಮೋರ್ಲ ರತ್ನಾಕರ್ ಕೆ ಶೆಟ್ಟಿ ಮೊದಲಾದವರು ಮಾತನಾಡಿ ಬಾಂಬೆ ಬಂಟ್ಸ್ ಅಸೋಸಿಯೇಷನ್ ನ ಸಿದ್ಧಿ ಸಾಧನೆಗಳನ್ನು ವಿವರಿಸಿ ಸಲಹೆ ಸೂಚನೆಗಳನ್ನು ನೀಡಿದರು. ಐಕಳ ಕಿಶೋರ್ ಶೆಟ್ಟಿಯವರು ವಂದಿಸಿದರು. ಅಧ್ಯಕ್ಷ ಸಿಎ ಸುರೇಂದ್ರ ಕೆ ಶೆಟ್ಟಿಯವರು ಸಭೆಯ ಕಾರ್ಯಕಲಾಪಗಳನ್ನು ನಡೆಸಿಕೊಟ್ಟರು. ಸಂಘದ ಪದಾಧಿಕಾರಿಗಳು, ವಿವಿಧ ಉಪಸಮಿತಿಗಳ ಕಾರ್ಯಧ್ಯಕ್ಷರು, ಮಾಜಿ ಅಧ್ಯಕ್ಷರುಗಳು, ಟ್ರಸ್ಟಿಗಳು ಉಪಸ್ಥಿತರಿದ್ದರು.