ಗ್ಲೋಬಲ್ ಮೀಡಿಯಾದ 2024 ರ ತುಳುನಾಡು ಪಂಚಾಂಗ ಕ್ಯಾಲೆಂಡರ್ನ್ನು ಹುಬ್ಬಳ್ಳಿಯ ಬಂಟರ ಸಂಘದ ಆವರಣದಲ್ಲಿ ಭಾವಿಪರ್ಯಾಯ ಪುತ್ತಿಗೆ ಮಠದ ಪರಮ ಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಬಿಡುಗಡೆ
ಮಾಡಿದರು. ಕರ್ನಾಟಕ ರಾಜ್ಯದ ತುಳುನಾಡು ಎಂದು ಕರೆಯಲ್ಪಡುವ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯ ಪ್ರಮುಖ ಯಾತ್ರಾ ಕೇಂದ್ರವಾಗಿದ್ದು ಅನೇಕ ಇತಿಹಾಸ ಪ್ರಸಿದ್ಧ ಪೌರಾಣಿಕ ಶ್ರದ್ಧಾಕೇಂದ್ರಗಳಾಗಿವೆ.
2024ರ ಕ್ಯಾಲೆಂಡರನ್ನು ಶಿವನ ದೇವಸ್ಥಾನಗಳಾದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕರ್ಜೆ, ಉಡುಪಿ, ಶ್ರೀ ನರಹರಿ ಪರ್ವತ ಸದಾಶಿವ ದೇವಸ್ಥಾನ, ಪಾಣೆಮಂಗಳೂರು, ಬಂಟ್ವಾಳ, ಶ್ರೀ ಆದಿನಾಥೇಶ್ವರ ದೇವಸ್ಥಾನ, ಅದ್ಯಪಾಡಿ, ಮಂಗಳೂರು, ಮಹತೋಭಾರ ಕೋಟೆಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಬಾರಕೂರು, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಬಳಂಜ, ಬೆಳ್ತಂಗಡಿ, ಶ್ರೀ ಶರಭೇಶ್ವರ ದೇವರು ಶ್ರೀ ಶರವು ಮಹಾಗಣಪತಿ ದೇವಸ್ಥಾನ, ಮಂಗಳೂರು, ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನ, ಕುಂಡಾವು, ಬಂಟ್ವಾಳ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕುಕ್ಕೆಹಳ್ಳಿ, ಉಡುಪಿ, ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ, ಉಡುಪಿ, ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನ, ತಣ್ಣೀರುಪಂತ, ಬೆಳ್ತಂಗಡಿ, ಮಹತೋಭಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ, ಕೋಟೇಶ್ವರ, ಕುಂದಾಪುರ, ಶ್ರೀ ಶಿಶಿಲೇಶ್ವರ ದೇವಸ್ಥಾನ, ಶಿಶಿಲ, ಬೆಳ್ತಂಗಡಿ ಇವುಗಳ ಮೂಲ ವಿಗ್ರಹದ ಅಲಂಕಾರವುಳ್ಳ ನೈಜ ಚಿತ್ರಣವನ್ನು ಹೊಂದಿದೆ. ಈ ವಿಶೇಷ ಕ್ಯಾಲೆಂಡರ್ಗಳಿಗೆ ರಾಜ್ಯ ಹಾಗೂ ವಿದೇಶಗಳಲ್ಲಿ ಬೇಡಿಕೆ ಇದೆ.
ಬಿಡುಗಡೆಯ ಸಂದರ್ಭದಲ್ಲಿ ಪುತ್ತಿಗೆ ಮಠದ ಕಿರಿಯ ಸ್ವಾಮೀಜಿ ಪರಮ ಪೂಜ್ಯ ಶ್ರೀ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು, ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಸುಗ್ಗಿ ಸುಧಾಕರ ಶೆಟ್ಟಿ, ಕಾರ್ಯದರ್ಶಿ ಶ್ರೀ ಸತೀಶ ಡಿ. ಶೆಟ್ಟಿ, ಉಪಾಧ್ಯಕ್ಷರುಗಳಾದ ಶ್ರೀ ಶಾಂತಾರಾಮ ಶೆಟ್ಟಿ, ಶ್ರೀ ಪ್ರದೀಪ ಪಕ್ಕಳ, ಜೊತೆ ಕಾರ್ಯದರ್ಶಿಯಾದ ಶ್ರೀ ರಾಜೇಂದ್ರ ವಿ. ಶೆಟ್ಟಿ, ಗ್ಲೋಬಲ್ ಮೀಡಿಯಾದ ಶ್ರೀ ಸತೀಶ ಎಂ. ರಾವ್, ದಿನೇಶ ಶೆಟ್ಟಿ ಮತ್ತು ಸಂಘದ ಎಲ್ಲ ಸದಸ್ಯರು ಉಪಸ್ಥಿತರಿದ್ದರು.