ಬ್ರಹ್ಮಾವರ: ನ, 26:- ಭಾರತ ದೇಶ ಕಂಡ ಅತ್ಯಂತ ಉತ್ಕೃಷ್ಟವಾದ ದಿನ. ಯಾಕೆಂದರೆ ಅಂದು ದೇಶದ ಸಂವಿಧಾನ ರಚನಾ ಸಮಿತಿಯು ದೇಶಕ್ಕೆ ಅತಿದೊಡ್ಡ ಸಂವಿಧಾನವನ್ನು ನೀಡಲ್ಪಟ್ಟ ದಿನ. ಆದರೆ ದೇಶಕ್ಕೆ ಅರ್ಪಣೆಯಾದದ್ದು ಜನವರಿ 26, 1950 ರಂದು ರಚನಾ ದಿನವನ್ನು ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಸಾಂಪ್ರದಾಯಿಕವಾಗಿ ಆಚರಿಸಲಾಯಿತು.
ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಪ್ರಾಸ್ತಾವಿಕ ಮಾತುಗಳೊಂದಿಗೆ, ಸಂವಿಧಾನದ ಪೀಠಿಕೆಯನ್ನು ವಾಚಿಸಿದರು. ಸಮಾಜ ವಿಜ್ಞಾನ ಶಿಕ್ಷಕರಾದ ಶ್ರೀ ಪ್ರಸನ್ನ ಶೆಟ್ಟಿಯವರು ಸಂವಿಧಾನದ ಪ್ರಾಮುಖ್ಯತೆಯನ್ನು ಅತ್ಯಂತ ಗೌರವದಿಂದ ವಿದ್ಯಾರ್ಥಿಗಳಿಗೆ ತಿಳಿಸಿದರು. ವಿಭಾಗೀಯ ಮುಖ್ಯಸ್ಥರಾದ ಸೆಬಾಸ್ಟಿಯನ್ ಪಿ ಎಮ್ರವರು ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.