ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಪುಣೆ ಇದರ ವತಿಯಿಂದ ಗುರು ಪೂರ್ಣಿಮೆಯ ಆಚರಣೆಯು, ಒಡಿಯೂರು ಸಂಸ್ಥಾನದ ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಜಿಯವರ ಶುಭಾಶಿರ್ವಾದದೊಂದಿಗೆ ಜುಲೈ 3 ರಂದು ಪುಣೆ ಶ್ರೀ ಗುರುದೇವ ಸೇವಾ ಬಳಗದ ಗೌರವ ಕಾರ್ಯದರ್ಶಿ ನಗ್ರಿಗುತ್ತು ರೋಹಿತ್ ಶೆಟ್ಟಿ ದಂಪತಿಗಳ ಅಯೋಜಕತ್ವದಲ್ಲಿ ಪುಣೆಯ ಬಾಣೇರ್ ನಲ್ಲಿಯ ಫಿಲಿವಿಲದಲ್ಲಿ ವಿವಿದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ. ಜರಗಿತು.
ಗುರು ಪೂರ್ಣಿಮೆಯ ಅಂಗವಾಗಿ ಪುಣೆಯ ಖ್ಯಾತ ಪುರೋಹಿತರಾದ ಕಾತ್ರಜ್ ಹರೀಶ್ ಭಟ್ ಮತ್ತು ತಂಡದವರ ನೇತೃತ್ವದಲ್ಲಿ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಹಾಗೂ ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಸದಸ್ಯೆಯರು ಹಾಗೂ ಬಳಗದ ಸದಸ್ಯರಿಂದ ಭಜನಾ ಮಂಡಳಿಯ ಗುರುಗಳಾದ ಶ್ರೀ ದಾಮೋದರ ಬಂಗೇರರವರ ಮುಂದಾಳತ್ವದಲ್ಲಿ ಭಜನೆ ನಡೆಯಿತು.
ಶ್ರೀ ರೋಹಿತ್ ಶೆಟ್ಟಿ ಶ್ರೀಮತಿ ಸ್ನೇಹಲತಾ ಅರ್.ಶೆಟ್ಟಿ ದಂಪತಿಗಳು ಗಣಹೋಮ, ಸತ್ಯನಾರಾಯಣ ಪೂಜೆಗೆ ಕುಳಿತು ಪೂಜಾ ವಿಧಿ ವಿಧಾನ ನೆರವೆರಿಸಿದರು. ನಂತರ ಮಹಾ ಮಂಗಳಾರತಿ ನೆರವೇರಿತು. ರೋಹಿತ್ ಶೆಟ್ಟಿ ದಂಪತಿಗಳು, ಪುಣೆ ಬಳಗದ ಅಧ್ಯಕ್ಷ ಪ್ರಭಾಕರ ಶೆಟ್ಟಿ ದಂಪತಿಗಳು, ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಪಿ .ಶೆಟ್ಟಿ ದಂಪತಿಗಳು, ಅತಿಥಿ ಗಣ್ಯರು ಮತ್ತು ಬಳಗದ ಸದಸ್ಯರು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಸದಸ್ಯರು ಆರತಿ ಬೆಳಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುಣೆ ಬಳಗದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿಯವರು ನಮ್ಮ ಹಿಂದೂ ಸನಾತನ ಧರ್ಮ ಸಂಸ್ಕ್ರತಿಯಲ್ಲಿ ಪುರಾತನ ಕಾಲದಿಂದಲೂ ಗುರುವಿಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ, ಗುರುವಿನ ಪ್ರೇರಣೆಯಂತೆ ಬಹಳಷ್ಟು ಲೋಕ ಕಲ್ಯಾಣ ಕಾರ್ಯಗಳು ನಡೆದಿವೆ. ಅಧ್ಯಾತ್ಮಿಕ ಮತ್ತು ಶೈಕ್ಷಣಿಕ ಗುರುಗಳ ಸ್ಮರಣೆ ನಿತ್ಯ ಇದ್ದರೂ ಈ ದಿನ ಗುರು ಸೂತ್ರದ ಪ್ರಭಾವ ಬಹಳಷ್ಟು ಇರುತ್ತದೆ. ಮಾನವ ಜನ್ಮದಲ್ಲಿ ಬದುಕನ್ನು ಕಟ್ಟಲು ಗುರುವಿನ ಪಾತ್ರ ಪ್ರಮುಖವಾದುದು, ಗುರು ನಮನವನ್ನು ಪೂಜನಿಯವಾಗಿ ಮಾಡಿದರೆ ನಮ್ಮ ಜೀವನದಲ್ಲಿ ಒಳಿತು ಆಗುತ್ತದೆ, ಒಡಿಯೂರು ಶ್ರೀ ಗಳ ಶುಭಾಶಿರ್ವಾದದೊಂದಿಗೆ ನಾವು ಗುರು ಪೂರ್ಣಿಮೆಯ ಆಚರಣೆಯನ್ನು ಬಹಳ ಶ್ರದ್ದಾ ಭಕ್ತಿಯಿಂದ ಆಚರಿಸಿದ್ದೇವೆ. ಜೀವನದ ನಿಜವಾದ ಮಾರ್ಗವನ್ನು ಸನ್ಮಾರ್ಗವನ್ನು ನಮಗೆ ತೋರಿಸುವ ಗುರು ದೇವರಿಗೆ ಸಮಾನ, ಅಜ್ಞಾನವನ್ನು ದೂರಮಾಡಿ ಸುಜ್ಞಾನದ ಬೆಳಕನ್ನು ನೀಡಿ ಜೀವನ ಮಾರ್ಗವನ್ನು ತೋರಿಸುವ ಗುರುವಿಗೆ ನಮ್ಮ ನಮನವನ್ನು ಸಲ್ಲಿಸುತ್ತೇವೆ, ಪ್ರತಿಯೊಬ್ಬ ವ್ಯಕ್ತಿಗೂ ಗುರು ಇದ್ದೇ ಇರುತ್ತಾರೆ, ನಮ್ಮ ಜೀವನದ ಸಾರ್ಥಕತೆಗೆ ಉತ್ತಮ ಸಂಸ್ಕಾರ, ಸತ್ಯ ಧರ್ಮ, ಶಾಂತಿ ಸ್ನೇಹಮಯ ಜೀವನ ಸಾಧ್ಯವಾಗಬೇಕಾದರೆ ಗುರು ಆಜ್ಞೆ, ಪ್ರೇರಣೆಯಂತೆ ನಡೆಯುವುದು ನಮ್ಮ ಕರ್ತವ್ಯ. ಜ್ಞಾನವೆಂಬ ಬೆಳಕನ್ನು ನೀಡುವ ಮಹಾನ್ ಶಕ್ತಿಯೇ ಗುರು. ಗುರುವಿನ ಸ್ಮರಣೆ ನಿತ್ಯವೂ ನಮ್ಮ ಜೀವನದಲ್ಲಿ ಇರಲಿ. ಗುರು ಸತ್ಸಂಗದಿಂದ ಜೀವನ ಶಾಂತಿ ದೊರಕುತ್ತದೆ. ನಮ್ಮ ಬಳಗದ ಮುಖಾಂತರ ನಡೆಯುವ ಗುರು ಪೂರ್ಣಿಮೆ ಆಚರಣೆಯನ್ನು ಈ ಬಾರಿ ನಮ್ಮ ಬಳಗದ ಕಾರ್ಯದರ್ಶಿ ರೋಹಿತ್ ಶೆಟ್ಟಿಯವರು ಬಹಳ ಶ್ರದ್ದಾ ಭಕ್ತಿಯಿಂದ ಹೋಮ ಪೂಜಾ ಕೈಂಕರ್ಯದ ಮೂಲಕ ಆಯೋಜಿಸಿದ್ದಾರೆ, ಹಾಗೆಯೇ ಬಳಗದ ಮತ್ತು ಕೇಂದ್ರದ ಸದಸ್ಯರು ವಿವಿದ ಕ್ಷೇತ್ರದ ಗಣ್ಯರು ಆಗಮಿಸಿದ್ದಾರೆ. ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಪುಣೆ ಶ್ರೀ ಗುರುದೇವ ಬಳಗದ ಭಜನಾ ಮಂಡಳಿಯ ಗುರು ದಾಮೋದರ ಬಂಗೇರ, ಸರೋಜಿನಿ ಬಂಗೇರ ದಂಪತಿಗಳನ್ನು, ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಭಜನಾ ಮಂಡಳಿಯ ಸದಸ್ಯರನ್ನು ರೋಹಿತ್ ಶೆಟ್ಟಿ ದಂಪತಿಗಳು ಪಲಪುಷ್ಪ ಕಾಣಿಕೆಯನ್ನು ನೀಡಿ ಸತ್ಕರಿಸಿದರು.
ಗುರು ಪೂರ್ಣಿಮೆ ಆಚರಣೆಯ ಈ ಸಂದರ್ಭದಲ್ಲಿ ಪುಣೆಯ ಪ್ರಮುಖರಾದ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು, ಪ್ರ.ಕಾರ್ಯದರ್ಶಿ ಅಜಿತ್ ಹೆಗ್ಡೆ, ರಾಮಕೃಷ್ಣ ಶೆಟ್ಟಿ, ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಗಣೇಶ್ ಹೆಗ್ಡೆ, ಪಿಂಪ್ರಿ ಚಿಂಚ್ವಾಡ್ ಹೋಟೆಲ್ ಅಸೋಸಿಯೇಷನ್ ನ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಶ್ರೀ ಅರ್ಜುನಾಪುರ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸಾಯಿ ಫ್ಯಾಷನ್ ನಾರಾಯಣ ಶೆಟ್ಟಿ ದಂಪತಿಗಳು, ಪುಣೆ ಬಂಟ್ಸ್ ಅಸೋಸಿಯೇಷನ್ ಪ್ರಮುಖರಾದ ಸತೀಶ್ ರೈ ಕಲ್ಲಂಗಳ ಗುತ್ತು, ದಿನೇಶ್ ಶೆಟ್ಟಿ ಪೆಲತ್ತೂರು ಮೇಲ್ಮನೆ, ಅರವಿಂದ್ ರೈ, ಬಾಲಕೃಷ್ಣ ಶೆಟ್ಟಿ, ಮಹಿಳಾ ಅಧ್ಯಕ್ಷೆ ಉಷಾ ಯು .ಶೆಟ್ಟಿ, ಸುಧಾ ಎನ್.ಶೆಟ್ಟಿ, ದೀಪಾ ಎ ರೈ, ಪುಣೆ ಬಂಟರ ಸಂಘದ ಯುವ ವಿಭಾಗದ ಅಧ್ಯಕ್ಷ ಉದಯ ಶೆಟ್ಟಿ, ಪ್ರಮುಖರಾದ ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ ಮುಂಬಯಿ, ಶ್ಯಾಮ್ ಸುಂದರ್ ಭಟ್ ಪುಣೆ, ಬಳಗದ ಪ್ರಮುಖರಾದ ಉಷಾಕುಮಾರ್ ಶೆಟ್ಟಿ, ರಂಜಿತ್ ಶೆಟ್ಟಿ, ಅಜಿತ್ ಶೆಟ್ಟಿ, ಸುರೇಶ್ ಶೆಟ್ಟಿ, ಸುಭಾಷ್ ಶೆಟ್ಟಿ, ಸದಾಶಿವ ಶೆಟ್ಟಿ, ಸಚಿನ್ ಎಂ .ಶೆಟ್ಟಿ, ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಪ್ರಮುಖರಾದ ಶೋಭಾ ಯು .ಶೆಟ್ಟಿ, ವೀಣಾ ಪಿ ಶೆಟ್ಟಿ, ಪ್ರೇಮ ಎಸ್.ಶೆಟ್ಟಿ, ಪುಷ್ಪ ಪೂಜಾರಿ, ಸರೋಜಿನಿ ಡಿ ಬಂಗೇರ, ಲಲಿತಾ ಪೂಜಾರಿ, ಸುಜಾತ ಎ .ಶೆಟ್ಟಿ, ಶ್ವೇತಾ ಎಚ್ .ಮೂಡಬಿದ್ರಿ, ಅಮಿತಾ ಪಿ .ಪೂಜಾರಿ, ಸಂದ್ಯಾ ಶೆಟ್ಟಿ, ನಯನ ಶೆಟ್ಟಿ ಹಾಗೂ ಪದಾಧಿಕಾರಿಗಳು ಮತ್ತು ಹೆಚ್ಚಿನ ಸಂಖ್ಯೆಯ ಗುರು ಭಕ್ತರು ಉಪಸ್ತಿತರಿದ್ದು ಗುರು ಕೃಪೆಗೆ ಪಾತ್ರರಾದರು. ಮಂಗಳಾರತಿ ನಂತರ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.
ಚಿತ್ರ ವರದಿ : ಹರೀಶ್ ಮೂಡಬಿದ್ರಿ