ಮುಂಬಯಿಯ ಚಿಣ್ಣರಬಿಂಬ ಸಂಸ್ಥೆಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಸಂಸ್ಥೆಯ ರೂವಾರಿ, ಮುಂಬಯಿಯ ಮಾಜಿ ಪೊಲೀಸ್ ಅಧಿಕಾರಿ ಪ್ರಕಾಶ್ ಭಂಡಾರಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಪ್ರಶಸ್ತಿ ಸ್ವೀಕರಿಸಿದರು.
ವಾಣಿಜ್ಯ ನಗರಿ ಮುಂಬಯಿಯಲ್ಲಿ ಕನ್ನಡ – ತುಳು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಚಿಣ್ಣರ ಬಿಂಬ ತಂಡದ ಸದಸ್ಯರು ಶ್ರಮ ವಹಿಸುತ್ತಿದ್ದಾರೆ. ಸಾಮಾಜಿಕವಾಗಿ, ಸಾಂಸ್ಕೃತಿವಾಗಿ ಅನೇಕ ಮೈಲುಗಲ್ಲುಗಳನ್ನು ದಾಟಿ ಮುಂದುವರೆಯುತ್ತಿರುವ ಈ ಸಂಸ್ಥೆ ನಮ್ಮ ಮೌಲ್ಯಧಾರಿತ ಹಳೆಯ ಸಂಪ್ರದಾಯ, ಆಚಾರ ವಿಚಾರಗಳನ್ನು ಮಕ್ಕಳಿಗೆ ಮನದಟ್ಟು ಮಾಡುವ ವಿಷಯದಲ್ಲಿ ಹಲವು ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ.
ವೃತ್ತಿಯಲ್ಲಿ ಪೊಲೀಸ್ ಅಧಿಕಾರಿಯಾಗಿದ್ದಾಗಲೇ ಪ್ರವೃತ್ತಿಯಲ್ಲಿ ಕಲಾಪೋಷಕರಾಗಿ ಗುರುತಿಸಿಕೊಂಡಿರುವ ಪ್ರಕಾಶ್ ಭಂಡಾರಿ ಅವರ ಪತ್ನಿ ರೇಣುಕಾ ಭಂಡಾರಿ, ಪುತ್ರಿಯರಾದ ಪೂಜಾ ಭಂಡಾರಿ, ನೇಹ ಭಂಡಾರಿ ಚಿಣ್ಣರ ಬಿಂಬದಲ್ಲಿ ಸಕ್ರಿಯರಾಗಿದ್ದಾರೆ. ವಿಜಯ್ ಕುಮಾರ್ ಶೆಟ್ಟಿ, ಸುರೇಂದ್ರ ಕುಮಾರ್ ಹೆಗ್ಡೆ, ಭಾಸ್ಕರ್ ಶೆಟ್ಟಿ, ವಿನೋಧಿನಿ ಹೆಗ್ಡೆ, ಸತೀಶ್ ಸಾಲಿಯಾನ್ ಮತ್ತಿತರರ ಸಂಪೂರ್ಣ ಸಹಕಾರ ಚಿಣ್ಣರ ಬಿಂಬಕ್ಕಿದೆ.