ವಿದ್ಯಾಗಿರಿ: ಆಳ್ವಾಸ್ ಕಾಲೇಜಿನ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿ ಸಿರಿ) ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಸಂಗೀತ ಸ್ಪರ್ಧೆ ‘ನಾದ ಲಹರಿ’ಯಲ್ಲಿ ಆಳ್ವಾಸ್ ಕಾಲೇಜು ಸಮಗ್ರ ಚಾಂಪಿಯನ್ ಪ್ರಶಸ್ತಿ ಪಡೆಯಿತು. ಒಟ್ಟು 41 ಅಂಕ ಪಡೆದ ಆಳ್ವಾಸ್ ಸಮಗ್ರ ಪ್ರಶಸ್ತಿ ಪಡೆದರೆ, 9 ಅಂಕ ಪಡೆದ ಕೊಣಾಜೆ ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ರನ್ನರ್ ಅಪ್ ಪ್ರಶಸ್ತಿ ಪಡೆಯಿತು.
ವಿವಿಧ ಸ್ಪರ್ಧೆಗಳ ವಿವರ: ಭಾರತೀಯ ಸಮೂಹ ಸಂಗೀತ: ಆಳ್ವಾಸ್ ಕಾಲೇಜು ಮೂಡುಬಿದಿರೆ-1, ಎಸ್ಡಿಪಿಟಿ ಪ್ರಥಮ ದರ್ಜೆ ಕಾಲೇಜು ಕಟೀಲ್ -2, ವಿಶ್ವವಿದ್ಯಾಲಯ ಕಾಲೇಜು ಕೊಣಾಜೆ-3. ಶಾಸ್ತ್ರೀಯ ಪರಿಕರ(ಏಕವ್ಯಕ್ತಿ- ತಾಳವಾದ್ಯೇತರ): ಆಳ್ವಾಸ್ ಕಾಲೇಜು ಮೂಡುಬಿದಿರೆ- 1, ವಿಶ್ವವಿದ್ಯಾಲಯ ಕಾಲೇಜು ಕೊಣಾಜೆ-2, ಪೂರ್ಣ ಪ್ರಜ್ಞ ಕಾಲೇಜು ಉಡುಪಿ-3. ಶಾಸ್ತ್ರೀಯ ಗಾಯನ(ಏಕ ವ್ಯಕ್ತಿ): ವಿಶ್ವವಿದ್ಯಾಲಯ ಕಾಲೇಜು, ಹಂಪನಕಟ್ಟೆ -1, ಆಳ್ವಾಸ್ ಕಾಲೇಜು ಮೂಡುಬಿದಿರೆ-2, ವಿಶ್ವವಿದ್ಯಾಲಯ ಕಾಲೇಜು ಕೊಣಾಜೆ-3. ಲಘು ಗಾಯನ(ಏಕ ವ್ಯಕ್ತಿ): ಆಳ್ವಾಸ್ ಕಾಲೇಜು ಮೂಡುಬಿದಿರೆ-1, ವಿಶ್ವವಿದ್ಯಾಲಯ ಕಾಲೇಜು, ಹಂಪನಕಟ್ಟೆ -2, ವಿಶ್ವವಿದ್ಯಾಲಯ ಕಾಲೇಜು ಕೊಣಾಜೆ-3.
ಪಾಶ್ಚಾತ್ಯ ಸಮೂಹ ಗಾಯನ: ಆಳ್ವಾಸ್ ಕಾಲೇಜು ಮೂಡುಬಿದಿರೆ-1, ಪೂರ್ಣಪ್ರಜ್ಞ ಕಾಲೇಜು ಉಡುಪಿ- 2, ಕೆನರಾ ಕಾಲೇಜು ಮಂಗಳೂರು-3. ಜಾನಪದ ವಾದ್ಯವೃಂದ: ಆಳ್ವಾಸ್ ಕಾಲೇಜು ಮೂಡುಬಿದಿರೆ- 1, ಕೆನರಾ ಕಾಲೇಜು – 2. ಪಾಶ್ಚಾತ್ಯ ವಾದ್ಯ ಪರಿಕರ (ಏಕವ್ಯಕ್ತಿ): ಆಳ್ವಾಸ್ ಕಾಲೇಜು ಮೂಡುಬಿದಿರೆ- 1 ಪಾಶ್ಚಾತ್ಯ ಗಾಯನ (ಏಕವ್ಯಕ್ತಿ): ಆಳ್ವಾಸ್ ಕಾಲೇಜು ಮೂಡುಬಿದಿರೆ -1, ಪೂರ್ಣಪ್ರಜ್ಞ ಕಾಲೇಜು ಉಡುಪಿ -2, ಕೆನರಾ ಕಾಲೇಜು ಮಂಗಳೂರು -3. ಶಾಸ್ತ್ರೀಯ ವಾದ್ಯ ಪರಿಕರ (ಏಕವ್ಯಕ್ತಿ): ಗೋವಿಂದ ದಾಸ್ ಕಾಲೇಜು ಸುರತ್ಕಲ್- 1, ಆಳ್ವಾಸ್ ಕಾಲೇಜು ಮೂಡುಬಿದಿರೆ -2, ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ-3.