ಬ್ರಹ್ಮಾವರ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನಲ್ಲಿ ನವೆಂಬರ್ 2 ರಂದು ಚಿಣ್ಣರ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಜಿ ಎಮ್ ಛತ್ರಛಾಯದಲ್ಲಿ ಪ್ರಿ ನರ್ಸರಿಯಿಂದ ಎರಡನೇ ತರಗತಿಯವರೆಗಿನ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಅತ್ಯಂತ ಆಸಕ್ತಿಯಿಂದ ಪಾಲ್ಗೊಂಡು ಕ್ರೀಡಾಸ್ಫೂರ್ತಿಯನ್ನು ಮೆರೆದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬೆಂಗಳೂರಿನಲ್ಲಿ ಕಾರ್ಯಕ್ರಮ ಅರಿವಿನ ವಿಶ್ಲೇಷಕ ವೃತ್ತಿಯನ್ನು ನಿರ್ವಹಿಸುತ್ತಿರುವ ಜಿ ಎಮ್ ನ ಹಳೆ ವಿಧ್ಯಾರ್ಥಿ ಮನೋಜ್ ಯು ಆಗಮಿಸಿದ್ದರು. ಅವರು ಜ್ಯೋತಿಯನ್ನು ಬೆಳಗಿಸಿ ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡಿ ಮಾತನಾಡಿ, ಮಕ್ಕಳು ಬಾಲ್ಯದಲ್ಲಿ ಕೋಣೆಯ ಒಳಗೆ ಕುಳಿತು ಮೊಬೈಲ್ ನೋಡುವುದನ್ನು ಬಿಟ್ಟು ಹೊರಗಡೆ ಆಟ ಆಡುವುದಕ್ಕೆ ಸಮಯವನ್ನು ಮೀಸಲಿಡಬೇಕು. ಪೋಷಕರು ಮಕ್ಕಳು ಬಾಲ್ಯವನ್ನು ಸವಿಯಲು ಕಲಿಕೆಯ ಜೊತೆಗೆ ಕ್ರೀಡೆಗಳಲ್ಲಿ ತೊಡಗಿಸಲು ಉತ್ತೇಜಿಸಬೇಕೆಂದರು.
ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಶಾಲಾ ಧ್ವಜವನ್ನು ಅರಳಿಸಿ ಮಾತನಾಡಿ ಮಕ್ಕಳು ಜೀವನದ ಪಾಠಗಳನ್ನು ತರಗತಿಯ ಹೊರಗೆ ಕಲಿಯುತ್ತಾರೆ. ಕ್ರೀಡೆಗಳಿಂದ ಸಾಮಾಜಿಕ, ನೈತಿಕ ಮೌಲ್ಯಗಳ ಕಲಿಕೆಯಾಗುತ್ತದೆ ಜೊತೆಗೆ ಶಾರೀರಿಕ, ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಎಲ್ಲಾ ಪುಟಾಣಿ ಮಕ್ಕಳಿಗೆ ಶುಭಹಾರೈಸಿ, ತಮ್ಮ ಮಕ್ಕಳನ್ನು ಪ್ರೋತ್ಸಾಹಿಸಲು ಆಗಮಿಸಿದ ಪೋಷಕರಿಗೆ ಅಭಿನಂದನೆ ಸಲ್ಲಿಸಿದರು. ನಂತರ ವಿದ್ಯಾರ್ಥಿಗಳ ಜೀವನದಲ್ಲಿ ಅಂಕಗಳ ಜೊತೆಗೆ ಸ್ಪೋರ್ಟ್ಸ್ ಕೂಡ ತುಂಬಾ ಮುಖ್ಯ. ಜಿ ಎಮ್ ಸಂಸ್ಥೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಹಲವಾರು ಚಟುವಟಿಕೆಗಳನ್ನು ಆಯೋಜಿಸಿಕೊಂಡು ಬರುತ್ತಿದೆ, ಇದಕ್ಕೆ ಪೆÇೀಷಕರು ನಿರಂತ ಪ್ರೋತ್ಸಾಹಿಸ ಬೇಕೆಂದರು. ಪೆÇೀಷಕರಿಗೆ ಚುಟುಕು ಮನೋರಂಜನ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತ ಪುಟಾಣಿ ಕ್ರೀಡಾಳುಗಳಿಗೆ ಬಹುಮಾನ ವಿತರಿಸಲಾಯಿತು.
ಕ್ರೀಡಾಕೂಟದಲ್ಲಿ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಪ್ರೀತಿ, ಪೋಷಕರು, ಶಿಕ್ಷಕರ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.