ಪುಣೆ ತುಳುಕೂಟದ ವತಿಯಿಂದ ವಾರ್ಷಿಕ ದಸರಾ ಪ್ರಯುಕ್ತ ದುರ್ಗಾ ಪೂಜೆ ತೆನೆ ಹಬ್ಬ ಹಾಗೂ ದಾಂಡಿಯಾ ರಾಸ್ ಧಾರ್ಮಿಕ ಕಾರ್ಯಕ್ರಮವು ಅ 19 ರಂದು, ಪುಣೆಯ ಕರ್ವೆ ನಗರದ ಹೋಟೆಲ್ ರತ್ನಾ ಅರ್ಚಿಡ್ ಬ್ಯಾಂಕ್ವೆಟ್ ಹಾಲ್ ನಲ್ಲಿ ವಿವಿದ ಧಾರ್ಮಿಕ ಪೂಜಾ ಕಾರ್ಯಕ್ರಮಗಳೊಂದಿಗೆ ಜರಗಿತು. ಪುಣೆ ತುಳುಕೂಟದ ಅಧ್ಯಕ್ಷ ಮೋಹನ ಶೆಟ್ಟಿ ಎಣ್ಣೆಹೊಳೆ ಯವರ ಅಧ್ಯಕ್ಷತೆಯಲ್ಲಿ, ಮಹಿಳಾ ವಿಭಾಗದ ಅಧ್ಯಕ್ಷೆ ಸುಜಾತಾ ಡಿ.ಶೆಟ್ಟಿ ಮತ್ತು ತುಳುಕೂಟದ ಪದಾದಿಕಾರಿಗಳು ಮತ್ತು ಪುಣೆಯ ವಿವಿದ ಸಂಘ ಸಂಸ್ಥೆಗಳ ಗಣ್ಯರ ಉಪಸ್ಥಿತಿಯಲ್ಲಿ ಜರಗಿದ ಈ ನವರಾತ್ರಿಯ ಉತ್ಸವದ ಧಾರ್ಮಿಕ ಕಾರ್ಯಕ್ರಮದ ಪೂಜಾ ಕಾರ್ಯವು ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮೀ ದೇವಸ್ಥಾನದ ಪ್ರಧಾನ ಅರ್ಚಕರಾದ ಹರೀಶ್ ಭಟ್ ರವರ ಪೌರೋಹಿತ್ಯದಲ್ಲಿ ದುರ್ಗಾ ಪೂಜೆ ನೆರವೇರಿತು, ಪೂಜಾ ವಿದಿ ವಿಧಾನಗಳನ್ನು ಮದಂಗಲ್ ಆನಂದ್ ಭಟ್ ದಂಪತಿಗಳು ನೆರವೇರಿಸಿದರು .
ಪುಣೆಯ ಶ್ರೀ ಗುರುದೇವ ಚಿಣ್ಣರ ಬಳಗದ ಮಕ್ಕಳಿಂದ, ಪುಟಾಣಿಗಳಿಂದ ಭಜನೆ ಮತ್ತು, ತುಳುಕೂಟ ಪುಣೆಯ ಎಲ್ಲಾ ಸದಸ್ಯ, ಸದಸ್ಯೆಯರಿಂದ ಭಜನಾ ಕಾರ್ಯಕ್ರಮ ಜರಗಿತು. ನಂತರ ಮಹಾಮಂಗಳಾರತಿ ನೆರವೇರಿತು ,ತುಳುಕೂಟದ ಮಹಿಳಾ ವಿಭಾಗದ ಮುತ್ತದೈದೆಯರು ತೆನೆಗೆ ಹಾಲೆರೆದು ಪೂಜೆ ಸಲ್ಲಿಸಿದರು. ಸೇರಿದ ಭಕ್ತರಿಗೆ ತೆನೆ ವಿತರಿಸಲಾಯಿತು. ಸೇರಿದ ಗಣ್ಯರು ಭಕ್ತರು ದೇವಿಗೆ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು .
ಪ್ರಸಾದ ವಿತರಣೆಯ ನಂತರ ಸೇರಿದ ಮಕ್ಕಳು ಮಹಿಳೆಯರು ಪುರುಷರು ದಾಂಡಿಯಾ ರಾಸ್ ನೃತ್ಯ ದಲ್ಲಿ ಪಾಲ್ಗೊಂಡರು. ನಂತರ ಪ್ರಸಾದ ರೂಪದಲ್ಲಿ ತುಳುನಾಡ ಶೈಲಿಯ ಅನ್ನ ಸಂತರ್ಪಣೆ ಜರಗಿತು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಗಣೇಶ್ ಹೆಗ್ಡೆ, ತುಳುಕೂಟದ ನೂತನ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು, ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಪ್ರಭಾಕರ್ ಶೆಟ್ಟಿ, ಪಿಂಪ್ರಿ ಚಿಂಚ್ವಾಡ್ ಹೋಟೆಲ್ ಅಸೋಸಿಯೇಷನ್ ನ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು, ಪುಣೆ ಬಂಟರ ಸಂಘದ ಉಪಾಧ್ಯಕ್ಷ ಚಂದ್ರಹಾಸ್ ಶೆಟ್ಟಿ, ಬಂಟ್ಸ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ನಾರಾಯಣ ಶೆಟ್ಟಿ, ಪಿಂಪ್ರಿ ಚಿಂಚ್ವಾಡ್ ತುಳು ಸಂಘದ ಅಧ್ಯಕ್ಷ ಹರೀಶ್ ಶೆಟ್ಟಿ ಕುರ್ಕಾಲ್, ಪಿಂಪ್ರಿಚಿಂಚ್ವಾಡ್ ಬಂಟರ ಸಂಘದ ಮಾಜ್ಜಿ ಅಧ್ಯಕ್ಷ ಮಹೇಶ್ ಶೆಟ್ಟಿ ಕಟ್ಟಿಂಗೇರಿ, ಶ್ರೀ ಅಯ್ಯಪ್ಪ ಸ್ವಾಮೀ ಸೇವಾ ಸಂಘದ ವಿಶ್ವಸ್ತ ಮಂಡಳಿಯ ಅಧ್ಯಕ್ಷ ಸುಭಾಶ್ ಶೆಟ್ಟಿ, ಮಾಜಿ ಅಧ್ಯಕ್ಷ ಶೇಖರ್ ಪೂಜಾರಿ, ಪುಣೆ ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಶೆಟ್ಟ , ತುಳುಕೂಟದ ಸ್ಥಾಪಕಾಧ್ಯಕ್ಷ ಜಯ ಶೆಟ್ಟಿ , ಪುಣೆ ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಸುಲತಾ ಎಸ್.ಶೆಟ್ಟಿ , ಪುಣೆ ಬಂಟ್ಸ್ ಅಸೋಸಿಯೇಷನ್ ನ ಮಹಿಳಾ ವಿಭಾಗದ ಅಧ್ಯಕ್ಷೆ ಉಷಾ ಯು .ಶೆಟ್ಟಿ, ಬಂಟರ ಸಂಘ ಪುಣೆ ದಕ್ಷಿಣ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಯಶೋದಾ ಶೆಟ್ಟಿ , ಉತ್ತರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷೆ ಪ್ರಮಿಳಾ ಶೆಟ್ಟಿ ಮತ್ತು ವಿವಿದ ಸಂಘ ಸಂಸ್ಥೆಗಳ ಗಣ್ಯರನ್ನು ತುಳುಕೂಟದ ಅಧ್ಯಕ್ಷ ಮೋಹನ್ ಶೆಟ್ಟಿ ಎಣ್ಣೆಹೊಳೆ ಮತ್ತು ಮಹಿಳಾ ವಿಭಾಗದ ಅಧ್ಯಕ್ಷೆ ಸುಜಾತ ಡಿ. ಶೆಟ್ಟಿ ಯವರು ತೆನೆಯೊಂದಿಗೆ ,ಪುಷ್ಪ ಗುಚ್ಛ ನೀಡಿ ಗೌರವಿಸಿದರು. ದಸರಾ ಪೂಜೆಯ ಶ್ರೀ ದೇವಿಯ ಅಲಂಕೃತ ಮಂಟಪವನ್ನು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು ,ಮತ್ತು ದಿನೇಶ್ ಶೆಟ್ಟಿ ಕಳತ್ತೂರುರವರು ಪ್ರಾಯೋಜಿಸಿದರು .,ಚಂದ್ರಹಾಸ್ ಶೆಟ್ಟಿ ಯವರು ಈ ಧಾರ್ಮಿಕ ಕಾರ್ಯಕ್ರಮದ ಸಂಪೂರ್ಣ ವ್ಯವಸ್ಥೆಗೆ ಸಹಕರಿಸಿದರು .
ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ತುಳು ಕನ್ನಡ ಭಾಂದವರು ಸಕುಟುಂಬಕರಾಗಿ ಆಗಮಿಸಿ,ಪೂಜೆಯಲ್ಲಿ ಪಾಲ್ಗೊಂಡು ಶ್ರೀ ದುರ್ಗಾ ದೇವಿಯ ಪ್ರಸಾದ ಸ್ವೀಕರಿಸಿ ದೇವಿಯ ಕೃಪೆಗೆ ಪಾತ್ರರಾದರು. ಪುಣೆ ತುಳುಕೂಟದ ಅಧ್ಯಕ್ಷ ಮೋಹನ್ ಶೆಟ್ಟಿ ಎಣ್ಣೆಹೊಳೆ ,ಕಾರ್ಯದರ್ಶಿ ಸಂತೋಷ್ ಶೆಟ್ಟಿ ಎಣ್ಣೆಹೊಳೆ ,ಕೋಶಾಧಿಕಾರಿ ದಿವಾಕರ ಶೆಟ್ಟಿ ಮಾಣಿಬೆಟ್ಟು, ಮಹಿಳಾ ವಿಭಾಗದ ಅಧ್ಯಕ್ಷೆ ಸುಜಾತಾ ಡಿ.ಶೆಟ್ಟಿ ,ಯುವ ವಿಭಾಗದ ಅಧ್ಯಕ್ಷ ಅಭಿಜಿತ್ ಶೆಟ್ಟಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು .ಸಂತೋಷ್ ಶೆಟ್ಟಿ ಎಣ್ಣೆಹೊಳೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು .
ವರದಿ- ಹರೀಶ್ ಮೂಡಬಿದ್ರಿ ,ಪುಣೆ