ಸಮಾಜಕ್ಕೆ ಅರ್ಪಣೆಯಾಗುವ ಸೇವಾ ಕಾರ್ಯ ಪ್ರಶಂಸನೀಯ-ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು
ಪುಣೆ :ಪುಣೆ ಬಂಟರ ಸಂಘದ ಎಡಬಲ ಶಕ್ತಿಗಳಾಗಿ ಕಾರ್ಯ ಗೈಯುತಿರುವ ಉತ್ತರ ವಲಯ ಮತ್ತು ದಕ್ಷಿಣ ವಲಯ ಸಮಿತಿಗಳು ಸಂದರ್ಭಕ್ಕನುಗುಣವಾಗಿ ಉತ್ತಮ ಸಮಾಜ ಸೇವಾ ಕಾರ್ಯ ಮಾಡುತಿವೆ. ಇಂದು ಉತ್ತರ ವಲಯದ ಸಮಿತಿಯ ವತಿಯಿಂದ ರಕ್ತ ದಾನ ಮತ್ತು ಉಚಿತ ಅರೋಗ್ಯ ತಪಾಸಣೆಯ ಸೇವಾ ಕಾರ್ಯ ನಡೆಯುತಿದೆ. ಅರೋಗ್ಯ ತಪಾಸಣೆ ಜೊತೆಯಲ್ಲಿ ಮಣಿಪಾಲ್ ಆಸ್ಪತ್ರೆಯ ವೈದ್ಯರುಗಳು ಹೃದಯ ಸಂಬಂದಿತ ಆರೋಗ್ಯದ ಬಗ್ಗೆ ತಿಳುವಳಿಕೆಯ ವಿಚಾರ ಗೋಷ್ಠಿ ಕೂಡ ನಡೆಸಿಕೊಟ್ಟಿದ್ದಾರೆ. ಈಗಿನ ಕಾಲ ಘಟ್ಟದಲ್ಲಿ ಸಮಾಜ ಮುಖಿಯಾದ ಇಂತಹ ಸೇವಾ ಕಾರ್ಯಗಳು ಎಲ್ಲಾ ರೀತಿಯಲ್ಲೂ ಅಭಿನಂದನೀಯ ಮತ್ತು ಪ್ರಶಂಶೆಗೆ ಪಾತ್ರವಾಗಿರುವಂತಹದು ಉತ್ತರ ವಲಯದ ಈ ಕಾರ್ಯಕ್ರಮಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ನುಡಿದರು.
ಪುಣೆ ಬಂಟರ ಸಂಘದ ಉತ್ತರ ವಲಯ ಪ್ರಾದೇಶಿಕ ಸಮಿತಿ ವತಿಯಿಂದ ಸಂಘದ ಸಮಾಜ ಸೇವಾ ಕಾರ್ಯ ದಂಗವಾಗಿ ರಕ್ತದಾನ ಮತ್ತು ಉಚಿತ ಅರೋಗ್ಯ ತಪಾಸಣಾ ಶಿಬಿರವು ಅ 2 ರಂದು ಪುಣೆ ಗಣೇಶ್ ನಗರದ ಕನ್ನಡ ಸಂಘದ ಡಾ ಶ್ಯಾಮ್ ರಾವ್ ಕಲ್ಮಾಡಿ ಹೈಸ್ಕೂಲ್ ನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು ಈ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಸಂತೋಷ್ ಶೆಟ್ಟಿ ಯವರು ತಮ್ಮ ಉದ್ಯಮದ ಜೊತೆಯಲ್ಲಿ ಉತ್ತಮ ಸಮಾಜ ಸೇವಾ ವಿಚಾರಗಳನ್ನು ಮುಂದಿಟ್ಟುಕೊಂಡು , ಮಾನವ ಧರ್ಮವನ್ನು ಅರಿತು ತಮ್ಮಿಂದ ಸಮಾಜಕ್ಕೆ ಏನಾದರು ಕೊಡುಗೆ ಸಲ್ಲಬೇಕು ಎಂಬ ಸಂಕಲ್ಪವನ್ನುಸಮಿತಿಯವರು ಮಾಡಿಕೊಂಡಿದ್ದಾರೆ. ಇವರ ಎಲ್ಲಾ ಸೇವಾ ಕಾರ್ಯಗಳಿಗೂ ನಮ್ಮ ಸಂಪೂರ್ಣ ಬೆಂಬಲವಿದೆ. ಮುಂದೆಯೂ ಉತ್ತಮೋತ್ತಮ ಕಾರ್ಯಕ್ರಮಗಳು ನಡೆಯುತಿರಲಿ ಎಂದರು. ಪುಣೆ ಬಂಟರ ಸಂಘದ ಉತ್ತರ ವಲಯ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗಣೇಶ್ ಪೂಂಜಾ ರವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಿಂಪ್ರಿಯ ವೈ.ಸಿ .ಎಂ ಹಾಸ್ಪಿಟಲ್ ನ ರಕ್ತ ವರ್ಗಾವಣೆ ಅಧಿಕಾರಿ ಡಾ ಶಂಕರ್ ಮಸಳಗಿ ಗೌರವ ಅತಿಥಿಯಾಗಿ ಪುಣೆ ಬಂಟರ ಸಂಘದ ಪ್ರ. ಕಾರ್ಯದರ್ಶಿ ಅಜಿತ್ ಹೆಗ್ಡೆ ಯವರು ಉಪಸ್ಥಿತರಿದ್ದು, ವೇದಿಕೆಯಲ್ಲಿ ಮಣಿಪಾಲ್ ಆಸ್ಪತ್ರೆಯ ಹೃದಯ ಚಿಕಿತ್ಸೆ ತಜ್ಞ ವೈದ್ಯರಾದ ಅಕ್ಷಯ್ ಕುಮಾರ್ ಮತ್ತು ಸುಶೀಲ್ ಕುಮಾರ್, ಪುಣೆ ಬಂಟರ ಸಂಘದ ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು, ಕಲ್ಪವೃಕ್ಷ ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ,, ಮಹಿಳಾ ಅಧ್ಯಕ್ಷೆ ಸುಲತಾ ಎಸ್ .ಶೆಟ್ಟಿ, ಪುಣೆ ತುಳುಕೂಟದ ಅಧ್ಯಕ್ಷ ಮೋಹನ್ ಶೆಟ್ಟಿ ಎಣ್ಣೆಹೊಳೆ, ಬಂಟರ ಸಂಘ ದಕ್ಷಿಣ ವಲಯ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಶೆಟ್ಟಿ, ಉತ್ತರ ವಲಯ ಪ್ರಾದೇಶಿಕ ಸಮಿತಿಯ ಮಹಿಳಾ ವಿಬಾಗದ ಉಪ ಕಾರ್ಯಾಧ್ಯಕ್ಷೆ ರೇಣುಕಾ ಡಿ.ಶೆಟ್ಟಿ ಉಪಸ್ಥಿತರಿದ್ದರು .
ಸಂತೋಷ್ ಶೆಟ್ಟಿ ಮತ್ತು ಗಣ್ಯರು ದೀಪ ಪ್ರಜ್ವಲಿಸಿ ಈ ಅರೋಗ್ಯ ಶಿಬಿರವನ್ನು ಉದ್ಘಾಟಿಸಿದರು , ಗಣೇಶ್ ಪೂಂಜಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿ ಗಣ್ಯರನ್ನು ಉತ್ತರ ವಲಯ ಸಮಿತಿಯ ಪದಾಧಿಕಾರಿಗಳು ಪುಷ್ಪ ಗುಚ್ಛ ನೀಡಿ ಗೌರವಿಸಿದರು, ಡಾ ಶಂಕರ್ ಮಸಳಗಿ, ಡಾ .ಅಕ್ಷಯ್ ಕುಮಾರ್, ಡಾ .ಸುಶೀಲ್ ಕುಮಾರ್ ರವರನ್ನು ಶಾಲು, ಪುಷ್ಪಗುಚ್ಛ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ವಿವಿದ ಸಂಘ ಸಂಸ್ಥೆಗಳ ಅಧ್ಯಕ್ಷರುಗಳನ್ನು. ಪದಾಧಿಕಾರಿಗಳನ್ನು, ವಿಶೇಷ ಅಮಂತ್ರಿತರನ್ನು, ದಾನಿಗಳನ್ನು, ಮತ್ತು ರಕ್ತ ಸಂಗ್ರಹ ಸಿಬ್ಬಂದಿ ವರ್ಗದವರನ್ನು ಗಣೇಶ್ ಪೂಂಜಾ ಮತ್ತು ಸಮಿತಿ ಸದಸ್ಯರು ಪುಷ್ಪಗುಚ್ಛ ನೀಡಿ ಗೌರವಿಸಿದರು. ಮಣಿಪಾಲ್ ಆಸ್ಪತ್ರೆಯ ಡಾ .ಅಕ್ಷಯ್ ಕುಮಾರ್ ಮತ್ತು ಡಾ ಸುಶೀಲ್ ಕುಮಾರ್, ಹೃದಯಾಘಾತದ ಲಕ್ಷಣಗಳು, ಮತ್ತು ಹೃದಯಾಘಾತ ಸಂಭವಿಸಿದಾಗ ತುರ್ತಾಗಿ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆಯ ಬಗ್ಗೆ ಪ್ರಾತ್ಯಕ್ಷತೆಯ ಜೊತೆಯಲ್ಲಿ ಉಪನ್ಯಾಸ ನೀಡಿದರು. ಪಿಂಪ್ರಿಯ ವೈ.ಎಂ.ಸಿ ಆಸ್ಪತ್ರೆ ಮತ್ತು ಪೂನಾ ಹಾಸ್ಪಿಟಲ್ ನ ಸಿಬ್ಬಂದಿಗಳು ರಕ್ತ ಸಂಗ್ರಹ ಮಾಡಿದರು ಮತ್ತು ಅರೋಗ್ಯ ತಪಾಸಣೆ ಯಲ್ಲಿ ಡಾಕ್ಟರ್ಸ್ ಗಳು ಥೈರಾಯಿಡ್ , ಇ.ಸಿ.ಜಿ,ಕಣ್ಣಿನ ಪರೀಕ್ಷೆ ಮತ್ತು ಇನ್ನಿತರೇ ಪರೀಕ್ಷೆಗಳನ್ನು ಮಾಡಿ ಸೂಕ್ತ ಔಷದಿ ಮಾರ್ಗ ಮತ್ತು ಸಲಹೆಗಳನ್ನು ನೀಡಿದರು. ರಕ್ತದಾನ ಮಾಡಿದ ರಕ್ತದಾನಿಗಳಿಗೆ ಆಕರ್ಷಕ ಉಡುಗೊರೆಯನ್ನು ಸಂಘದ ವತಿಯಿಂದ ನೀಡಲಾಯಿತು. ಅತಿ ಹೆಚ್ಚಿನ ಸಂಖ್ಯೆಯ ಎಲ್ಲಾ ಸಮಾಜ ಭಾಂದವರು ರಕ್ತದಾನ ಮಾಡಿ ಅರೋಗ್ಯ ತಪಾಸಣೆಯ ಸದುಪಯೋಗ ಪಡೆದರು. ಪುಣೆ ಬಂಟರ ಸಂಘದ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು,ದಕ್ಷಿಣ ವಲಯ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು, ಪುಣೆಯ ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು, ಉತ್ತರ ವಲಯ ಪ್ರಾದೇಶಿಕ ಸಮಿತಿಯ ಉಪಾಧ್ಯಕ್ಷರುಗಳಾದ ನಾರಾಯಣ್ ಹೆಗ್ಡೆ, ಸತೀಶ್ ಶೆಟ್ಟಿ , ರಾಜಾರಾಮ್ ಶೆಟ್ಟಿ, ಪ್ರ.ಕಾರ್ಯದರ್ಶಿ ಪ್ರಸನ್ನ ಶೆಟ್ಟಿ, ಕೋಶಾಧಿಕಾರಿ ರಘುರಾಮ್ ಶೆಟ್ಟಿ, ಜನ ಸಂಪರ್ಕಾಧಿಕಾರಿ ಮಾಧವ್ ಶೆಟ್ಟಿ , ವೈದ್ಯಕೀಯ ಸಮಿತಿಯ ಕಾರ್ಯಧ್ಯಕ್ಷ ಆನಂದ್ ಶೆಟ್ಟಿ ,ಸಮಿತಿ ಪ್ರಮುಖರಾದ ವಸಂತ್ ಶೆಟ್ಟಿ , ಉದಯ್ ಶೆಟ್ಟಿ ಕಳತ್ತೂರು, ಯಶವಂತ್ ಶೆಟ್ಟಿ ಉಳಾಯಿಬೆಟ್ಟು , ಹರೀಶ್ ಶೆಟ್ಟಿ , ಪ್ರಕಾಶ್ ಶೆಟ್ಟಿ , ಗಣೇಶ್ ಶೆಟ್ಟಿ , ಮಂಜುನಾಥ್ ಶೆಟ್ಟಿ , ವಸಂತ್ ಶೆಟ್ಟಿ , ಪ್ರದೀಪ್ ಶೆಟ್ಟಿ , ದಿವಾಕರ್ ಶೆಟ್ಟಿ , ಯೋಗಿಶ್ ಶೆಟ್ಟಿ ಮತ್ತು ಮಹಿಳಾ ವಿಬಾಗದ ಪದಾಧಿಕಾರಿಗಳು ಸಹಕರಿಸಿದರು. ಯೋಗಿಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಗಣೇಶ್ ಪೂಂಜಾ ವಂದಿಸಿದರು .
ರಕ್ತ ದಾನ ಎಂದರೆ ದಾನಗಳಲ್ಲಿ ಮಹಾದಾನ, ಮನುಷ್ಯನ ಜೀವಮಾನದಲ್ಲಿ 18 ವರ್ಷಗಳಿಂದ 60 ವರ್ಷದ ವರೆಗಿನ ಎಲ್ಲರೂ ರಕ್ತದಾನ ಮಾಡಬಹುದು, ರಕ್ತದಾನ ಮಾಡುವುದರಿಂದ ಅರೋಗ್ಯ ಸಂಬಂದಿತ ಉಪಯೋಗಗಳು ಬಹಳಷ್ಟಿದೆ ಹಾಗೂ ಒಬ್ಬ ವ್ಯಕ್ತಿಯ ರಕ್ತದಾನದಿಂದ ಮೂರು ವ್ಯಕ್ತಿಗಳ ಜೀವಕ್ಕೆ ಸಹಾಯವಾಗುತ್ತದೆ, ಸಂಘ ಸಂಸ್ಥೆಗಳ ವತಿಯಿಂದ ಇಂತಹ ಕಾರ್ಯಕ್ರಮಗಳು ಮತ್ತಷ್ಟು ನಡೆಯುತಿರಲಿ – ಶ್ರೀ ಶಂಕರ್ ಮಸಳಗಿ -ರಕ್ತ ವರ್ಗಾವಣೆ ಅಧಿಕಾರಿ ವೈ.ಎಂ.ಸಿ ಹಾಸ್ಪಿಟಲ್ ಪಿಂಪ್ರಿ .
ರಕ್ತ ಒಂದು ಜೀವಕ್ಕೆ ಸಂಜಿವಿನಿಯಾಗಿ ಪರಿಣಮಿಸಿ ಜೀವ ಬದುಕಿಸುವ ಅಮೃತಕ್ಕೆ ಸಮಾನ , ಇಂತಹ ರಕ್ತವನ್ನು ಸ್ವಯಂ ಪ್ರೇರಿತರಾಗಿ ಪ್ರತಿಪಲಾಪೆಕ್ಷೆ ಇಲ್ಲದೆ ಆರೋಗ್ಯವಂತರು ಮಾಡಿದ ರಕ್ತ ದಾನಕ್ಕೆ ಜೀವದಾನ ಮಾಡಿದಂತಹ ಪಲ ಬರುತ್ತದೆ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾದ್ಯವಿಲ್ಲ ದಾನಿಗಳಿಂದಲೇ ಸಂಗ್ರಹಿಸಬೇಕು, ಅದ್ದರಿಂದ ಹೆಚ್ಚೆಚ್ಚು ಜನರು ರಕ್ತದಾನ ಮಾಡುವುದರಿಂದ ಮಾನವ ಕುಲಕ್ಕೆ ಸಹಾಯಕವಾಗ ಬಹುದು, ಉತ್ತರ ವಲಯ ಪ್ರಾದೇಶಿಕ ಸಮಿತಿ ಉತ್ತಮ ಕಾರ್ಯಕ್ರಮವನ್ನು ಆಯೋಜಿಸಿದೆ ಅಭಿನಂದೆನೆಗಳು -ಶ್ರೀ ಅಜಿತ್ ಹೆಗ್ಡೆ, ಪ್ರ .ಕಾರ್ಯದರ್ಶಿ ಬಂಟರ ಸಂಘ ಪುಣೆ .ಉತ್ತಮ ಕಾರ್ಯಕ್ಕೆ ದೇವರ ಆಶಿರ್ವಾದ ಸದಾ ಇರುತ್ತದೆ , ಉತ್ತರ ವಲಯ ಪ್ರಾದೇಶಿಕ ಸಮಿತಿಯವರು ಪುಣ್ಯದ ಕಾರ್ಯವನ್ನು ಮಾಡುತಿದ್ದಾರೆ, ಇನ್ನೊಬ್ಬರ ಜೀವದ ಬೆಲೆ ತಿಳಿದು ಜೀವ ರಕ್ಷಕರಾಗಿ ಎಲ್ಲರನ್ನು ಒಂದು ಗೂಡಿಸಿಕೊಂಡು ರಕ್ತದಾನ ಮತ್ತು ಅರೋಗ್ಯ ತಪಾಸಣೆ ಶಿಬಿರದಿಂದ ಮನು ಕುಲಕ್ಕೆ ಸಹಾಯಕವಾಗುತ್ತದೆ, ನಿಮ್ಮ ಈ ಕಾರ್ಯಕ್ಕೆ ನಮ್ಮ ಪ್ರೋತ್ಸಾಹ ಮತ್ತು ಆಶಿರ್ವಾದ ಸದಾ ಇದೆ – ಶ್ರೀಮತಿ ಸುಲತಾ ಎಸ್.ಶೆಟ್ಟಿ, ಅಧ್ಯಕ್ಷೆ ಮಹಿಳಾ ವಿಬಾಗ ಬಂಟರ ಸಂಘ ಪುಣೆ. ಸಮಾಜಕ್ಕೆ ಮತ್ತು ಸಂಘಕ್ಕೆ ಪೂರಕವಾಗಿ ನಾವು ನಮ್ಮ ಸಮಿತಿಯ ಮೂಲಕ ಇಂತಹ ಕಾರ್ಯಕ್ರಮವನ್ನು ಆಯೋಜೀಸಿದಾಗ ನಮ್ಮ ಬಂಟರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಂಪೂರ್ಣ ಸಹಕಾರ ಸದಾ ನಮಗೆ ಸಿಕ್ಕಿದೆ, ಹಾಗೆಯ ಸಮಿತಿಯ ಸದಸ್ಯರ ಉತ್ಸಾಹ, ಮಹಿಳೆಯರ ಸಹಕಾರ ಮತ್ತು ಸಮಾಜ ಭಾಂದವರ ಪ್ರೋತ್ಸಾಹದಿಂದ ಈ ಕಾರ್ಯಕ್ರಮ ಸಮಾಜ ಮುಖಿಯಾಗಿ ಸಮಾಜಕ್ಕೆ ಅರ್ಪಣೆಯಾಗುತ್ತದೆ, ಇದರಿಂದ ಮನ ಸಂತೃಪ್ತಿ ಸಿಗುತ್ತದೆ .ಇದೆ ರೀತಿಯ ಪ್ರೀತಿ ಸಹಕಾರ ಸದಾ ಇರಲಿ -ಶ್ರೀ ಗಣೇಶ್ ಪೂಂಜಾ, ಕಾರ್ಯಾಧ್ಯಕ್ಷರು, ಬಂಟರ ಸಂಘ ಉತ್ತರ ವಲಯ ಪ್ರಾದೇಶಿಕ ಸಮಿತಿ .
ಚಿತ್ರ ವರದಿ ಹರೀಶ್ ಮೂಡಬಿದ್ರಿ