ನ್ಯೂ ಪನ್ವೆಲ್ ನ ಶ್ರೀ ನೃತ್ಯಕಲಾ ಮಂದಿರದ ವತಿಯಿಂದ ನವೆಂಬರ್ 19 ರಂದು ಅಪರಾಹ್ನ 3 ಗಂಟೆಗೆ ಆದ್ಯ ಕ್ರಾಂತಿವೀರ ವಾಸುದೇವ ಬಲವಂತ ಪಡ್ಕೆ ನಾಟ್ಯಗೃಹ ಓಲ್ಡ್ ಪನ್ವೆಲ್ ಇಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನ್ಯೂ ಪನ್ವೆಲ್ ನಗರ ಸೇವಕ, ಜನಪ್ರಿಯ ಸಮಾಜ ಸೇವಕ ಸಂತೋಷ್ ಶೆಟ್ಟಿ ಮತ್ತು ಶ್ವೇತಾ ಸಂತೋಷ್ ಶೆಟ್ಟಿಯವರ ಸುಪುತ್ರಿ ಶ್ಲೋಕಾ ಸಂತೋಷ್ ಶೆಟ್ಟಿಯವರು ಭರತನಾಟ್ಯ ರಂಗಪ್ರವೇಶ ಮಾಡಲಿದ್ದಾರೆ.
ಕಾರ್ಯಕ್ರಮಕ್ಕೆ ಪನ್ವೆಲ್ ನ ಮಾಜಿ ಸಂಸದ ರಾಮ್ ಸೇಟ್ ಠಾಕೂರ್, ಮಾಜಿ ಕಾರ್ಪೊರೇಟರ್ ಪರೇಶ್ ರಾಮ್ ಸೇಟ್ ಠಾಕೂರ್, ಪನ್ವೆಲ್ ಕರ್ನಾಟಕ ಸಂಘದ ಅಧ್ಯಕ್ಷ ಭಾಸ್ಕರ್ ಶೆಟ್ಟಿ (ಪದ್ಮ) ಆಗಮಿಸಲಿದ್ದು ಶ್ರೀ ನೃತ್ಯಕಲಾ ಮಂದಿರದ ಇತರ ಪ್ರತಿಭೆಗಳು ಭಾಗವಹಿಸಲಿದ್ದಾರೆ.
ಶ್ವೇತಾ ಮತ್ತು ಸಂತೋಷ್ ಶೆಟ್ಟಿಯವರ ಸುಪುತ್ರಿ ಶ್ಲೋಕಾ ಸಂತೋಷ್ ಶೆಟ್ಟಿ ನ್ಯೂ ಪನ್ವೆಲ್ ನ ಡಿ. ಎ. ವಿ. ಪಬ್ಲಿಕ್ ಸ್ಕೂಲ್ ನಲ್ಲಿ 8 ನೇ ತರಗತಿಯಲ್ಲಿ ಕಲಿಯುತ್ತಿದ್ದು, ಐದನೇ ವರ್ಷದಲ್ಲಿರುವಾಗ ಗುರು ಪದ್ಮಶ್ರೀ ಲಕ್ಷ್ಮಿನಾರಾಯಣನ್ ಇವರಿಂದ ಭರತನಾಟ್ಯ ತರಬೇತಿ ಪಡೆಯುತ್ತಿದ್ದಳು. ಅಲ್ಲದೇ ಪ್ರವೀಣ್ ಸಾರ್ ನೃತ್ಯ ಅಕಾಡೆಮಿಯಿಂದ ಹಿಪ್ ಹೋಪ್ ಡಾನ್ಸ್ ಕಲಿತು ಕೆಲವು ಸಿನಿಮಾಗಳಲ್ಲಿ ಸಹಾಯಕಿ ನೃತ್ಯಗಾರ್ತಿಯಾಗಿ ತನ್ನ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾಳೆ. ಶ್ರೀ ನೃತ್ಯಕಲಾ ಮಂದಿರದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾಳೆ. ಐಸಿಎಮ್ ಡಿಎ ಅಯಗಿರಿ ನಂದಿನಿ ಜಾಗತಿಕ ಮಟ್ಟದ ದಾಖಲೆ ನಿರ್ಮಿಸಿದ ಈಕೆ ಮಿಹಿರ್ ಎಸ್ ಶೆಟ್ಟಿಯ ಸಹೋದರಿ. ಸಾವಿತ್ರಿ ಮತ್ತು ದಿ. ವಿಠಲ್ ರೈ ಹಾಗೂ ಪ್ರೇಮಾ ಮತ್ತು ದಿ. ಗುಡ್ಡಪ್ಪ ಶೆಟ್ಟಿಯವರ ಮೊಮ್ಮಗಳು.
ಶ್ರೀ ನೃತ್ಯ ಕಲಾಮಂದಿರದ ಈ ತಂಡದಲ್ಲಿ ಇತರ ಕಲಾವಿದರಾದ ಸಂಸ್ಕೃತಿ ನಿನಾದ್, ನೇಹ ಚವಾಣ್, ವರ್ಷಿತ ವಿಶ್ವನಾಥನ್ ಭಾಗವಹಿಸಲಿದ್ದಾರೆ. 1989ರಲ್ಲಿ ಪ್ರಾರಂಭಗೊಂಡ ಗುರು ಪದ್ಮಶ್ರೀ ಲಕ್ಷ್ಮೀನಾರಾಯಣನ್ ಇವರ ನೃತ್ಯ ಕಲಾ ಮಂದಿರದ ಕಲಾವಿದರು ಹಲವು ಧಾರ್ಮಿಕ ಕ್ಷೇತ್ರಗಳಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ನೃತ್ಯ ಕಲಾಮಂದಿರದ ಮಕ್ಕಳು ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಗಳಿಸಿದ್ದು ಇವರ ಸಾಧನೆಯು ಗಿನ್ನೆಸ್ ಪುಸ್ತಕದಲ್ಲಿ ದಾಖಲಾಗಿದೆ. ಇವರ ತಂಡದಲ್ಲಿ ಮಧುರ ಗಾನ ತಿಲಕ್ಕಂ ಪಿ ಎಚ್ ರಮಣಿ, ಪ್ರಜೇಶ್ ಸಿ ನಾಯರ್, ರಜನಿ ಅಯ್ಯರ್, ಅನಿರುದ್ಧ ಮೆನನ್, ರಂಗನಾಥನ್, ಅನುರಾಧ ದೊಡ್ಕೆ, ಪನ್ವೆಲ್ ಕರ್ನಾಟಕ ಸಂಘದ ಪದಾಧಿಕಾರಿಗಳು ಸದಸ್ಯರು ಸಹಕರಿಸಲಿದ್ದಾರೆ.