ಲೆಬನಾನ್ನಲ್ಲಿ ಇತ್ತೀಚೆಗೆ ನಡೆದ ಏಷ್ಯನ್ ಕೆಡೆಟ್ ಟೇಕ್ವಾಂಡೋ ಚಾಂಪಿಯನ್ಶಿಪ್ನಲ್ಲಿ, ಸತಾರಾದ ಟೇಕ್ವಾಂಡೋ ಆಟಗಾರ್ತಿ ಪ್ರಿಶಾ ಶೆಟ್ಟಿ ಐತಿಹಾಸಿಕ ಪ್ರದರ್ಶನವನ್ನು ದಾಖಲಿಸಿ ಕಂಚಿನ ಪದಕವನ್ನು ಗೆದ್ದಿದ್ದಾರೆ. ಹೆಣ್ಣು ಮಕ್ಕಳ ವಿಭಾಗದಲ್ಲಿ ಮಹಾರಾಷ್ಟ್ರಕ್ಕೆ ಅಂತಾರಾಷ್ಟ್ರೀಯ ಪದಕ ಗೆದ್ದ ಮೊದಲ ಅಥ್ಲೀಟ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪ್ರಿಶಾ ಪಾತ್ರರಾಗಿದ್ದಾರೆ.
ಪ್ರಿಶಾ ಶೆಟ್ಟಿ ಕಳೆದ 8-9 ವರ್ಷಗಳಿಂದ ಕರಾಡಿನ ಎ. ಅಗಶಿವನಗರ ಕ್ರೀಡಾ ಅಕಾಡೆಮಿಯಲ್ಲಿ ಪಿ.ಟೇಕ್ವಾಂಡೋ ತರಬೇತಿ ಪಡೆಯುತ್ತಿದ್ದು ಪ್ರಿಶಾಗೆ ಕೋಚ್ಗಳಾದ ಅಕ್ಷಯ್ ಖೇತ್ಮಾರ್ ಮತ್ತು ಅಮೋಲ್ ಪಾಲೇಕರ್ ಮಾರ್ಗದರ್ಶನ ನೀಡುತ್ತಿದ್ದಾರೆ. ಅಂತರಾಷ್ಟ್ರೀಯ ಸ್ಪರ್ಧೆ ಮುಗಿದ ನಂತರ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಾಗ ರಾಜ್ಯದ ಅನೇಕ ಟೇಕ್ವಾಂಡೋ ತರಬೇತುದಾರರು ಮತ್ತು ಕ್ರೀಡಾಪಟುಗಳು ಪ್ರಿಶಾ ಅವರನ್ನು ಅಭಿನಂದಿಸಿ ಸ್ವಾಗತಿಸಿದರು. ಮುಂಬೈನಿಂದ ಸತಾರಾಗೆ ಪ್ರಯಾಣ ಬೆಳೆಸಿದ ಪ್ರಿಶಾ ಶೆಟ್ಟಿ ಅವರನ್ನು ಮುಂಬೈ, ರಾಯಗಡ, ಪನ್ವೇಲ್, ಪುಣೆ, ಲೋನಾವಾಲ, ಕರಾಡ್, ಸತಾರಾದಲ್ಲಿ ಸ್ವಾಗತಿಸಿ ಗೌರವಿಸಲಾಯಿತು.
ಭಾರತದ ಟೇಕ್ವಾಂಡೋ ಅಧ್ಯಕ್ಷ ನಾಮದೇವ್ ಶಿರಗಾಂವ್ಕರ್ ಅವರ ಮಾರ್ಗದರ್ಶನದಲ್ಲಿ ಭಾರತ ತಂಡವು ಏಷ್ಯನ್ ಟೇಕ್ವಾಂಡೋ ಪಂದ್ಯಾವಳಿಯಲ್ಲಿ ಭಾಗವಹಿಸಿತ್ತು. ಸ್ಪರ್ಧೆಯಲ್ಲಿ ಉತ್ತಮ ಯಶಸ್ಸನ್ನು ಸಾಧಿಸಿದ ಪ್ರಿಶಾ ಅವರು ಕರಾಟೆ ಸ್ಪರ್ಧೆಯಲ್ಲಿ ಗೆದ್ದು ಇತಿಹಾಸ ರಚಿಸಿದ್ದಾರೆ. ಟೇಕ್ವಾಂಡೋ ರಾಜ್ಯ ಸಂಘದ ಅಧ್ಯಕ್ಷ ಅನಿಲ್ ಝೋಡ್ಗೆ, ಪ್ರಧಾನ ಕಾರ್ಯದರ್ಶಿ ಸಂದೀಪ್ ಓಂಬಾಸೆ, ದಾಡೋಜಿ ಕೊಂಡದೇವ್ ಪ್ರಶಸ್ತಿ ಪುರಸ್ಕೃತ ಭಾಸ್ಕರ ಕರ್ಕೇರ, ಟಿಎಎಂ ಸಿಇಒ ಗಫಾರ್ ಪಠಾಣ್, ಡಾ. ಪ್ರಸಾದ್ ಕುಲಕರ್ಣಿ, ಅಂತರಾಷ್ಟ್ರೀಯ ತರಬೇತುದಾರ ಉಷಾ ಶಿರ್ಕೆ ಹಾಗೂ ಅನೇಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಂತೋಷ್ ಗುಂಡು ಶೆಟ್ಟಿ ಹೆಗಡೆಬೆಟ್ಟು ಮನೆ ಬೈಲೂರು ಕಾರ್ಕಳ ಮತ್ತು ಪ್ರಜ್ಞಾ ಸಂತೋಷ್ ಶೆಟ್ಟಿ ಮಲ್ಲಾರ್ ಕಂಡಿ ಗುತ್ತು ಕಾಪು ಉಡುಪಿ ಇವರ ಹೆಮ್ಮೆಯ ಪುತ್ರಿ ಪ್ರಿಶಾ ಅವರು ಅಕಾಡೆಮಿಕ್ ಪಬ್ಲಿಕ್ ಹೈಸ್ಕೂಲ್ ಕರಾಡ್ ನ 9 ನೇ ತರಗತಿ ವಿದ್ಯಾರ್ಥಿನಿ.