ಕರಾವಳಿ ಸೌಹಾರ್ದ ಪತ್ತಿನ ಸಹಕಾರ ಸಂಘದ 2022-23 ನೇ ಸಾಲಿನ 23 ನೇ ವಾರ್ಷಿಕ ಮಹಾಸಭೆಯು ದಿನಾಂಕ 09.09.2023 ನೇ ಶನಿವಾರ, ದಾವಣಗೆರೆಯ ಕುಂದವಾಡ ರಸ್ತೆಯ ಡಾ. ಶಾಮ್ ಸುಂದರ ಶೆಟ್ಟಿ ಬಂಟರ ಭವನ ದಲ್ಲಿ ನೆರವೇರಿತು. ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಸಿಎ. ಉಮೇಶ ಶೆಟ್ಟಿಯವರು ವಹಿಸಿದ್ದರು.
ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಸದಸ್ಯರು, ಸಹಕಾರಿ ಸಂಘದ ನಿರ್ದೇಶಕರಾದ ಶ್ರೀ ದಿನೇಶ್ ಕೆ. ಶೆಟ್ಟಿಯವರು ಸ್ವಾಗತಿಸಿದರು.
ಸಹಕಾರಿ ಸಂಘವು ವರದಿ ಸಾಲಿನಲ್ಲಿ ಉತ್ತಮ ಲಾಭ ಹೊಂದಿದ್ದು, ಸವಕಳಿ ರೂ 21.10 ಲಕ್ಷ ಕಳೆದು ರೂ 69.08 ಲಕ್ಷಗಳಷ್ಟು ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ 14 ರಷ್ಟು ಡಿವಿಡೆಂಟ್ ಘೋಷಿಸಿದ್ದು, ಸದಸ್ಯರಿಗೆ ಒಟ್ಟು ರೂ 18.10 ಕೋಟಿಗಳಷ್ಟು ಸಾಲ ವಿತರಿಸಿ, ಸ್ವಂತ ಕಟ್ಟಡದೊಂದಿಗೆ ದಾವಣಗೆರೆ ನಗರದಲ್ಲಿ ಮಂಚೂಣಿಯ ಸಹಕಾರಿ ಸಂಘವಾಗಿದೆ ಎಂದು ತಿಳಿಸಿದರು.
ಕರಾವಳಿ ಸೌಹಾರ್ದ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ, ದಾವಣಗೆರೆಯ 4 ಜನ ದಿನ ಪತ್ರಿಕೆ ವಿತರಕರುಗಳನ್ನು ಹಾಗೂ ಶ್ರೀ ಸೀತಾರಾಮ್ ಶೆಟ್ಟಿ ಪತ್ರಕರ್ತರು ದಾವಣಗೆರೆ ಇವರುಗಳನ್ನು ಸಹಕಾರಿ ಸಂಘ ವತಿಯಿಂದ ಸನ್ಮಾನಿಸಲಾಯಿತು. ಹಾಗೆಯೇ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿದ ಸಹಕಾರಿ ಸಂಘದ ಸದಸ್ಯರುಗಳ ಮಕ್ಕಳನ್ನು ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ನಿರ್ದೇಶಕರುಗಳಾದ ಶ್ರೀ ಸೀತಾರಾಮ್ ಶೆಟ್ಟಿ, ಶ್ರೀಮತಿ ವಿಮಲಾ ಶೆಟ್ಟಿ, ಶ್ರೀಮತಿ ಆಶಾ. ಕೆ. ಶೆಟ್ಟಿ, ಶ್ರೀ ಎಂ. ಪ್ರಭಾಕರ್ ಶೆಟ್ಟಿ, ಶ್ರೀ ಕಿಶನ್ ಚಂದ್ರ ಶೆಟ್ಟಿ, ಶ್ರೀ ಸದಾಶಿವ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.