ವಿಜಯಾ ಬ್ಯಾಂಕಿನ ( ಈಗಿನ ಬ್ಯಾಂಕ್ ಅಫ್ ಬರೋಡಾ) ನಿವೃತ್ತ ಅಧಿಕಾರಿಗಳ ಕ್ಷೇಮಾಭಿವೃಧ್ಧಿ ಸಂಘದ 2022-23 ನೇ ಸಾಲಿನ ವಾರ್ಷಿಕ ಮಹಾ ಸಭೆಯು ಇತ್ತೀಚೆಗೆ ಬ್ರಹ್ಮಾವರದ ಆಶ್ರಯ ಹೋಟೆಲಿನಲ್ಲಿ ಸಂಘದ ಅಧ್ಯಕ್ಷರಾದ ಶ್ರೀಯುತ ಅಣ್ಣಪ್ಪ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯದರ್ಶಿ ವೇಣುಗೋಪಾಲ ಶಟ್ಟಿಯವರು ವರದಿ ವಾಚನ ಮಾಡುತ್ತಾ ಹಿಂದಿನ ಸಾಲಿನಲ್ಲಿ ಸಂಘವು ಹಲವಾರು ದುರ್ಬಲರಿಗೆ ನೀಡಿದ ಆರ್ಥಿಕ ಸಹಾಯ ಮತ್ತಿತರ ಸಮಾಜಮುಖಿ ಕಾರ್ಯಕ್ರಮಗಳ ವಿವರ ನೀಡಿದರು. 400 ಕ್ಕೂ ಮಿಕ್ಕಿ ನಿವೃತ್ತ ಅಧಿಕಾರಿಗಳ ಸದಸ್ಯತ್ವ ಹೊಂದಿರುವ ಸಂಘದ 2023-25 ಸಾಲಿಗೆ ಅವಿರೋಧವಾಗಿ ಆಯ್ಕೆಯಾದ ಪದಾಧಿಕಾರಿಗಳ ಹೆಸರನ್ನು ಚುನಾವಣಾಧಿಕಾರಿಯಾಗಿ ಆಗಮಿಸಿದ ಶ್ರೀಯುತ ವಸಂತ ಹೆಗ್ಡೆಯವರು ಘೋಷಿಸಿದರು.
ಮುಂದಿನ ಎರಡು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಬಸ್ರೂರು ರಾಜೀವ ಶೆಟ್ಟಿ, ಕಾರ್ಯದರ್ಶಿ ಕೆ. ಸಂಕಯ್ಯ ಶೆಟ್ಟಿ, ಖಜಾಂಚಿ ಕೆ. ಬಾಲಕೃಷ್ಣ ಶೆಟ್ಟಿ, ಉಪಾಧ್ಯಕ್ಷ ಎಸ್. ಜಯರಾಮ ಹಗ್ಡೆ, ಮತ್ತಿತರ 9 ಜನರ ಕಾರ್ಯಕಾರಿ ಸಮಿತಿ ಸದಸ್ಯರು ಅಧಿಕಾರ ಸ್ವೀಕಾರ ಮಾಡಿದರು. ಸಂಘದ ಮಾಜಿ ಅಧ್ಯಕ್ಷರುಗಳು, ಬ್ಯಾಂಕಿನ ನಿವೃತ್ತ ಜನರಲ್ ಮೆನೇಜರುಗಳಾದ ಕೆ. ಭೋಜ ಶೆಟ್ಟಿ, ಎಸ್ ಜಯರಾಮ ಶೆಟ್ಟಿ, ಉದಯಕುಮಾರ ಶೆಟ್ಟಿ, ಸುಭೋದಯ ಶೆಟ್ಟಿ, ಮತ್ತಿತರ 300 ಕ್ಕೂ ಅಧಿಕ ಬ್ಯಾಂಕಿನ ನಿವೃತ್ತ ಅಧಿಕಾರಿಗಳು ಉಪಸ್ಥಿತರಿದ್ದರು.