ಪ್ರತಿಯೊಂದು ಮಕ್ಕಳ ಚಿಂತನೆಗಳು ಭಿನ್ನವಾಗಿರುತ್ತದೆ, ಅವರಲ್ಲಿ ಅಡಗಿರುವ ಸೂಪ್ತ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಅವಶ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಬೇಸಿಗೆ ಶಿಬಿರಗಳು ಮಕ್ಕಳಲ್ಲಿರುವ ವಿಶೇಷ ಪ್ರತಿಭೆ ಅನಾವರಣಕ್ಕೆ ಸಹಕಾರಿಯಾಗಿದೆ. ಬೇಸಿಗೆ ಶಿಬಿರದಂತಹ ಕಾರ್ಯಕ್ರಮಗಳ ಮೂಲಕ ಯುವವಾಹಿನಿ ಯಡ್ತಾಡಿ ಘಟಕ ಸಂಘಟನೆಯ ಮೌಲ್ಯ ಎತ್ತಿ ಹಿಡಿದಿದೆ ಎಂದು ಉದ್ಯಮಿ ರಘುರಾಮ್ ಶೆಟ್ಟಿ ಅವರು ಹೇಳಿದರು.
ಅವರು ಯುವವಾಹಿನಿ ಯಡ್ತಾಡಿ ಘಟಕ ಆಶ್ರಯದಲ್ಲಿ ಸ.ಹಿ.ಪ್ರಾ ಶಾಲೆ ಯಡ್ತಾಡಿ, ಜೆ.ಸಿ.ಐ ಕಲ್ಯಾಣಪುರ, ಚಿಗುರು ಕಲಾ-ಸಾಂಸ್ಕøತಿಕ ವೇದಿಕೆ ನಡೂರು, ಜೆ.ಪಿ ನಾರಾಯಣ ಸ್ವಾಮಿ ಫೌಂಡೇಶನ್ ಬ್ರಹ್ಮಾವರ, ರೋಟರಿ ಕ್ಲಬ್ ಬಾರ್ಕೂರು, ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ ಶಿರಿಯಾರ, ಸ್ವಾಗತ್ ವಿವಿಧೋದ್ದೇಶ ಸಹಕಾರಿ ಸಂಘ ಬಾರ್ಕೂರು, ಸೌಜನ್ಯ ಯುವಕ ಮಂಡಲ ಯಡ್ತಾಡಿ, ಶ್ರೀ ವಿನಾಯಕ ಯುವಕ ಮಂಡಲ ಸಾಯಿಬ್ರಕಟ್ಟೆ –ಯಡ್ತಾಡಿ, ಅತುಲ ಯುವಕ ಸಂಘ ಹೇರಾಡಿ, ಇವರ ಸಹಯೋಗದಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರ ವಿಕಸನ-2023 (ತಿಳಿವಿನ ಬೆಳಕು) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಯಡ್ತಾಡಿ ಘಟಕದ ಅಧ್ಯಕ್ಷ ರಮೇಶ್ ಪೂಜಾರಿ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸ.ಹಿ.ಪ್ರಾ ಶಾಲೆ ಯಡ್ತಾಡಿ ಇಲ್ಲಿನ ಮುಖ್ಯೋಪಾಧ್ಯಾಯರಾದ ರಾಜಶೇಖರ್ ಶೆಟ್ಟಿ, ಸಂಪನ್ಮೂಲ ವ್ಯಕ್ತಿ ಸತೀಶ್ ವಡ್ಡರ್ಸೆ, ಸಾಂಸ್ಕøತಿಕ ಚಿಂತಕ ಅಲ್ತಾರು ನಾಗರಾಜ್, ಶಿಕ್ಷಕಿ ಶ್ರೀಮತಿ ಶಾಂತ ಪೈ ಉಪಸ್ಥಿತರಿದ್ದರು.
ಯುವವಾಹಿನಿ ಯಡ್ತಾಡಿ ಘಟಕ ಆಶ್ರಯದಲ್ಲಿ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರ ವಿಕಸನ-2023 (ತಿಳಿವಿನ ಬೆಳಕು) ಕಾರ್ಯಕ್ರಮವನ್ನು ಉದ್ಯಮಿ ರಘುರಾಮ್ ಶೆಟ್ಟಿ ಉದ್ಘಾಟಿಸಿದರು. ಸ.ಹಿ.ಪ್ರಾ ಶಾಲೆ ಯಡ್ತಾಡಿ ಇಲ್ಲಿನ ಮುಖ್ಯೋಪಾಧ್ಯಾಯರಾದ ರಾಜಶೇಖರ್ ಶೆಟ್ಟಿ, ಸಂಪನ್ಮೂಲ ವ್ಯಕ್ತಿ ಸತೀಶ್ ವಡ್ಡರ್ಸೆ, ಸಾಂಸ್ಕøತಿಕ ಚಿಂತಕ ಅಲ್ತಾರು ನಾಗರಾಜ್, ಶಿಕ್ಷಕಿ ಶ್ರೀಮತಿ ಶಾಂತ ಪೈ ಉಪಸ್ಥಿತರಿದ್ದರು.