ಜೆಸಿಐ ಸಾಲಿಗ್ರಾಮ ವಡ್ಡರ್ಸೆ ಸಿಟಿಯ 2023ರ ಪದ ಪ್ರದಾನ ಸಮಾರಂಭವು ಮಂಗಳವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಜರಗಿತು.
2023ನೇ ಸಾಲಿನ ಅಧ್ಯಕ್ಷರಾಗಿ ಪದ್ಮನಾಭ ಆಚಾರ್ಯ ಅವರು ಹಿಂದಿನ ಸಾಲಿನ ಅಧ್ಯಕ್ಷ ನಾಗೇಂದ್ರ ಅಡಿಗ ಅವರಿಂದ ಅಧಿಕಾರ ವಹಿಸಿಕೊಂಡರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿ ದೇವಸ್ಥಾನದ ಆಡಳಿತ ಮುಕ್ತೇಸರರಾದ ಕೊತ್ತಾಡಿ ಉದಯ್ ಕುಮಾರ್ ಶೆಟ್ಟಿ ರಾಷ್ಟ್ರೀಯ ಸಂಸ್ಥೆಯಾದ ಜೇಸಿಐ ಯಂತಹ ಸಂಸ್ಥೆಯು ವ್ಯಕ್ತಿತ್ವ ವಿಕಸನ , ಭಾಷಾ ಕೌಶಲ್ಯ ಮತ್ತು ಸಮಾಜದಲ್ಲಿ ಗೌರವ,ಸ್ನೇಹವನ್ನು ಸಂಪಾದಿಸುವಲ್ಲಿ ಅತಿ ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಯಾದ ಅಧ್ಯಾಪಕ ಸತೀಶ್ ಪೂಜಾರಿ ವಡ್ಡರ್ಸೆ ಹಾಗೂ ಜೇಸಿಐ ವಲಯ ಉಪಾಧ್ಯಕ್ಷರಾದ ಜೆಎಫ್ಎಫ್ ಜಯಶ್ರೀ ಮಿತ್ರಕುಮಾರ್ ಹಾಗೂ ವಡ್ಡರ್ಸೆ ಜೇಸಿಐ ಸ್ಥಾಪಕಾಧ್ಯಕ್ಷರಾದ ಸಚ್ಚಿದಾನಂದ ಅಡಿಗ, ಕಾರ್ಯದರ್ಶಿ ಪ್ರವೀಣ್ ಕುಮಾರ್ ಮತ್ತು ಉಮೇಶ್ ವಡ್ಡರ್ಸೆ, ಜೇಜೇಸಿ ಮಹೇಶ್ ಮತ್ತು ಶ್ರೀವತ್ಸ ಉಪಸ್ಥಿತರಿದ್ದರು. ನಾಗೇಂದ್ರ ಅಡಿಗ ಸ್ವಾಗತಿಸಿದರು. ಪದ್ಮನಾಭ ಆಚಾರ್ಯ ವಂದಿಸಿದರು ಜೇಸಿಐ ಸತೀಶ್ ವಡ್ಡರ್ಸೆ ಧನ್ಯವಾದಗೈದರು. ಈ ಕಾರ್ಯಕ್ರಮದಲ್ಲಿ ಜೇಸಿಐ ನ ಸರ್ವ ಸದಸ್ಯರು ಹಾಗೂ ಊರಿನ ಜೇಸಿ ಅಭಿಮಾನಿಗಳು ಉಪಸ್ಥಿತಿತರಿದ್ದರು.
ಜೆಸಿಐ ಸಾಲಿಗ್ರಾಮ ವಡ್ಡರ್ಸೆ ಸಿಟಿಯ 2023ರ ಪದ ಪ್ರದಾನ ಸಮಾರಂಭವು ಮಂಗಳವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಜರಗಿತು. ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಯಾದ ಅಧ್ಯಾಪಕ ಸತೀಶ್ ಪೂಜಾರಿ ವಡ್ಡರ್ಸೆ ಹಾಗೂ ಜೇಸಿಐ ವಲಯ ಉಪಾಧ್ಯಕ್ಷರಾದ ಜೆಎಫ್ಎಫ್ ಜಯಶ್ರೀ ಮಿತ್ರಕುಮಾರ್ ಇದ್ದರು.