“ರಾಜಕೀಯದ ಪಡಸಾಲೆಯಿಂದ ಹಿಂದೆ ಸರಿದ ಹಾಲಾಡಿ ಶ್ರೀನಿವಾಸ್ ಶೆಟ್ಟಿ…!” ನೂತನ ಅಭ್ಯರ್ಥಿಗೆ ಅವಕಾಶ ಮಾಡಿಕೊಡಲು ಕುಂದಾಪುರ ಕ್ಷೇತ್ರ ಬಿಟ್ಟುಕೊಟ್ಟ ಶಾಸಕ…!” ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಬೇಸರದ ಆಕ್ರೋಶ…!”
– ಕೆ. ಸಂತೋಷ್ ಶೆಟ್ಟಿ, ಮೊಳಹಳ್ಳಿ ಕುಂದಾಪುರ.
ಸುದ್ದಿ:ಹಾಲಾಡಿ
” ಅವರು ಸಾಮಾನ್ಯರಲ್ಲಿ ಅಸಮಾನ್ಯ ವ್ಯಕ್ತಿ, ಕೈಯಲ್ಲಿ ಒಂದು ಕೀಪ್ಯಾಡ್ ಮೊಬೈಲ್, ಬಾಯಿ ತುಂಬಾ ಎಲೆ ಅಡಿಕೆ ತುಂಬಿಕೊಂಡು ವಾದ ವಿವಾದ, ಕರಾವಳಿಯ ಶೆಟ್ಟರ ಗತ್ತು, ಶುಭ್ರತೆಯ ಸಂಕೇತ ಎಂಬತ್ತೆ ಬಿಳಿ ಪಂಚೆ ಮತ್ತು ಬಿಳಿ ಶರ್ಟ್ ಧರಿಸುವ ಹಾಲಾಡಿ ಅವರ ವರ್ಚಸ್ಸು ,ಸ್ಥಳದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮಾತು, ಬಡವರಿಗೆ ಅನಾರೋಗ್ಯದವರಿಗೆ ,ವಿದ್ಯಾರ್ಥಿಗಳಿಗೆ, ಕಡುಬಡತನದಲ್ಲಿ ಸಿಲುಕಿದವರಿಗೆ ವರದಾನವಾಗಿ ಸಿಗುವ ಇವರ ಮಾತು ಅಷ್ಟೇ ದಷ್ಟಪುಷ್ಟ….!” ಆದರೆ ರಾಜಕಾರಣಿಗೆ ಬರುವಂತ ಅಭ್ಯರ್ಥಿಗಳು ತನಗೂ ತನ್ನವರಿಗೂ ಹಾಗೂ ತನ್ನ ವಂಶಪಾರಂಪರಿವಾಗಿ ಆಸ್ತಿಗಳನ್ನ ಮಾಡುವಂತಹ ರಾಜಕಾರಣಿಗಳು ಮಧ್ಯೆ ಹಾಲಾಡಿ ಅವರು ವಿಭಿನ್ನ, ವಿಶೇಷ..! ಐಷಾರಾಮಿ ಜೀವನವನ್ನು ತ್ಯಜಿಸಿ ಸಾಮಾನ್ಯರಂತೆ ಬದುಕುವಂತ ಶಾಸಕರು ಕುಂದಾಪುರಕ್ಕೆ ಮಾದರಿಯಾಗುವುದಲ್ಲದೆ .ಇತರ ದುಬಾರಿ ಜೀವನ ನಡೆಸುವ ರಾಜಕಾರಣಿಗಳಿಗೆ ಹಾಲಾಡಿಯವರ ನಡೆ-ನುಡಿ ಕಲಿತರೆ ರಾಜಕೀಯ ಇನ್ನಷ್ಟು ಸದೃಢವಾಗುತ್ತದೆ.
ಕರಾವಳಿಯ ವಾಜಪೇಯಿ:
ಕರಾವಳಿಯ ರಾಜಕೀಯದ ಭೀಷ್ಮ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ರಾಜಕೀಯದ ಪಡಸಾಲೆಯಿಂದ ದೂರ ಸರಿದಿದ್ದಾರೆ. ಈ ಬಾರಿಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸದೆ ನಿರಾಳವಾಗಿ ಇರಲು ತೀರ್ಮಾನಿಸಿದ್ದಾರೆ. ರಾಜಕೀಯದ ಜೀವನ ಮತ್ತು ರಾಜಕೀಯದಲ್ಲಿನ ಅನುಭವ ಹಾಗೆಯೇ ಒಂದಿಷ್ಟು ವರ್ಚಸ್ಸನ್ನ ಮೈಗೂಡಿಸಿಕೊಂಡ ಹಾಲಾಡಿಯವರು ಬದುಕಿನ ಅರ್ಧದಷ್ಟು ಭಾಗವನ್ನೇ ರಾಜಕೀಯಕ್ಕೆ ಮತ್ತು ಸಮಾಜಕ್ಕೆ ಮೀಸಲಿಡುವುದರ ಮೂಲಕ ಅವರ ವ್ಯಕ್ತಿತ್ವವನ್ನು ಸಮಾಜಕ್ಕೆ ಸಾರಿ ಹೇಳಿದ್ದಾರೆ.
“ಸುದ್ದಿಮನೆ ವಾರ ಪತ್ರಿಕೆ ವರದಿಗಾರರೊಂದಿಗೆ ಮಾತನಾಡಿದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ತಮ್ಮ ರಾಜಕೀಯ ಜೀವನದ ಸಂತೃಪ್ತಿ ಮತ್ತು ನೋವಿನ ಕ್ಷಣಗಳನ್ನು ಬಿಚ್ಚಿಟ್ಟಿದ್ದರು.
ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಭೀಷ್ಮರಾಗಿ ಮೆರೆದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಈ ಬಾರಿ ವಿಧಾನಸಭಾ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ.
ಇದರಿಂದ ಅಸಂಖ್ಯಾತ
ಅಭಿಮಾನಿಗಳಿಗೆ ನೋವುಂಟು ಮಾಡಿದ್ದಾರೆ ಅನ್ನೋದು ಅಭಿಮಾನಗಳ ಒಡಲಾಳದಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ. ರಾಜಕೀಯವಾಗಿ ಒಬ್ಬ ವ್ಯಕ್ತಿಗೆ ಇಷ್ಟೊಂದು ಅಭಿಮಾನಿಗಳು ಇದ್ದಾರಾ ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಾಗಿದೆ. ಒಬ್ಬ ಸಿನಿಮಾ ನಟನಿಗೆ ಇದ್ದಷ್ಟು ಅಭಿಮಾನಿಗಳು ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಗಳಿಸಿದ್ದಾರೆ. ಸಮಾಜಮುಖಿ ಚಿಂತನೆ, ಬಡವರಿಗೆ ಸಹಾಯ ಹಾಗೂ ಇನ್ನಿತರ ಸಾಮಾಜಿಕ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡುವಲ್ಲಿ, ಸತತ ಪ್ರಯತ್ನ ಮಾಡುತ್ತಿರುವಂತಹ ರಾಜಕಾರಣಿಗಳಲ್ಲಿ ಅಪರೂಪದವರು ಹಾಲಾಡಿ ಶ್ರೀನಿವಾಸ ಶೆಟ್ಟಿ. ಬದುಕು ಜೊತೆಗೆ ಭವಿಷ್ಯವನ್ನು ಕಟ್ಟಿ ಕೊಡುವಂತಹ ವಿದ್ಯಾರ್ಥಿಗಳಿಗೆ ಸಹಕಾರ ಮಾಡುವ ರೀತಿ ಇವರ ವರ್ಚಸ್ಸು ಇನ್ನಷ್ಟು ಹಿಮ್ಮಡಿ ಗೊಂಡಿದೆ. ಈ ಬಾರಿ ರಾಜಕೀಯ ಪೈಪೋಟಿಯಲ್ಲಿ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದರು. ಅದನ್ನು ಆ ಕ್ಷೇತ್ರವನ್ನು ಕಿರಣ್ ಕೊಡ್ಗಿ ಅವರಿಗೆ ಬಿಟ್ಟಕೊಡುವುದರ ಮೂಲಕ ಸಮಾಜದಲ್ಲಿ ಆಸೆ ಆಕಾಂಕ್ಷೆಗಳು, ಇಲ್ಲದೆ ನಿಷ್ಕಲ್ಮಶವಾಗಿ ರಾಜಕೀಯದ ಜೀವನವನ್ನು ನಡೆಸುತ್ತಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಬದುಕು ಇತರ ರಾಜಕಾರಣಿಗಳಿಗೂ ಇದು ಮಾದರಿ ಎನ್ನುವುದು ವಿಶೇಷ ಮತ್ತು ವಿಚಲಿತವಾಗಿದೆ.
ಕುಂದಾಪುರದ ವಾಜಪೇಯಿ ಎಂದೇ ಕರೆಯಲ್ಪಟ್ಟ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಮನಸ್ಸು ಬದಲಾಯಿಸಿ ವಿಧಾನಸಭಾ ಚುನಾವಣಾ ಕಣದಿಂದ ಹಿಂದಕ್ಕೆ ಸರಿದಿದ್ದಾರೆ. ಮಾಧ್ಯಮ ಹೇಳಿಕೆಯನ್ನ ಸ್ಪಷ್ಟ ಪಡಿಸುವುದರ ಮೂಲಕ ನಾನು ರಾಜಕೀಯವನ್ನು ಅಂತಿಮವಾಗಿ ತೆಗೆದುಕೊಂಡಿಲ್ಲ, ರಾಜಕೀಯ ನಿವೃತ್ತಿಯನ್ನು ಕೂಡ ಘೋಷಿಸಿಲ್ಲ, ಆದರೆ 2023 ನೇ ಸಾಲಿನ ವಿಧಾನಸಭೆ ಚುನಾವಣೆಯಿಂದ ದೂರ ಸರಿದಿದ್ದೇನೆ .ಯಾಕೆಂದರೆ ಕಿರಣ್ ಕೊಡ್ಗಿ ಅವರಿಗೆ ಬಿಜೆಪಿ ಸ್ಥಾನವನ್ನು ಬಿಟ್ಟುಕೊಟ್ಟು ಮುಂದಿನ ದಿನಗಳಲ್ಲಿ ವಿಚಾರ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಕರಾವಳಿ ಅದಲ್ಲದೆ ವಿಶೇಷವಾಗಿ ಕುಂದಾಪುರ ತಾಲೂಕಿನ ಹೆಮ್ಮೆಯ ಶಾಸಕರಾಗಿ, ಬಡವರ ನೋವುಗಳಿಗೆ ಸ್ಪಂದಿಸುತ್ತ, ಮೂಲಭೂತ ಸೌಕರ್ಯಗಳನ್ನು ಗಟ್ಟಿಗೊಳಿಸುತ್ತಾ ನೆಲದ ಮಣ್ಣಿನ ವಿಶ್ವಾಸ ಮತ್ತು ಜನರ ಮೇಲಿರುವ ಪ್ರೀತಿಯನ್ನು ಸದಾ ಕಾಲ ಜನರೊಂದಿಗೆ ಬೆರತ ವಿಸ್ಮರಣೆಯ ಕ್ಷಣಗಳನ್ನು ನೆನೆದು ಮಾಧ್ಯಮಗಳ ಮುಂದೆ ಭಾವುಕರಾಗಿದ್ದರು. ಹಾಗೆ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ನಾನು ರಾಜಕೀಯ ನಿವೃತ್ತಿಯನ್ನು ಘೋಷಿಸಿಲ್ಲ ಆದರೆ ಜನರ ಮಧ್ಯೆ ಇರುತ್ತೇನೆ ನನಗೆ ಹೇಗೆ ಸಹಕಾರವನ್ನು ನೀಡಿದ್ದೀರಿ ಅದೇ ರೀತಿ ಕಿರಣ್ ಕೊಡ್ಗಿ ಅವರಿಗೆ ನೀಡುವುದರ ಮೂಲಕ ಜನಸಾಮಾನ್ಯರ ವ್ಯಕ್ತಿತ್ವ ಮತ್ತು ಜನರ ಮೇಲಿರುವ ಪ್ರೀತಿ ಮುಂದುವರಿಸಿ ಎಂದು ಮನವಿ ಮಾಡಿದರು.
ಬಿಜೆಪಿ ಹೈಕಮಾಂಡ್ ಒಪ್ಪಿಗೆ:-
ರಾಜ್ಯ ಬಿಜೆಪಿಯಲ್ಲಿ ಕಗ್ಗಂಟಾಗಿದ್ದ ಅಭ್ಯರ್ಥಿ ಆಯ್ಕೆ ಪ್ತಕ್ರಿಯೆಯ ಬಳಿಕ ನಿರೀಕ್ಷೆಗೂ ಮೀರಿದ ಫಲಿತಾಂಶ ಹೊರಬೀಳುತ್ತಿದೆ. ಕುಂದಾಪುರದ ಶಾಸಕ, ಕರಾವಳಿಯ ವಾಜಪೇಯಿ, ಹಾಲಾಡಿ ಶ್ರೀನಿವಾಸ ಶೆಟ್ಟಿ ತನ್ನ ಚಕ್ರಾಧಿಪತ್ಯವನ್ನು ತನ್ನ ರಾಜಕೀಯ ಸಹಪಾಠಿ ದಿವಂಗತ ಎ.ಜಿ.ಕೊಡ್ಗಿಯವರ ಪುತ್ರ, ತನ್ನವರಾಜಕೀಯದ ಬಲಗೈ ಬಂಟ ಕಿರಣ್ ಕೊಡ್ಗಿಯವರಿಗೆ ಬಿಟ್ಟುಕೊಟ್ಟಿದ್ದಾರೆ.
ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರೇ ಸ್ವ ಇಚ್ಚೆಯಿಂದ ಕಿರಣ್ ಕೊಡ್ಗಿಯವರಿಗೆ ಅವಕಾಶ ನೀಡುವ ಮೂಲಕ ಎ.ಜಿ.ಕೊಡ್ಗಿಯವರ ಋಣ ತೀರಿಸುವ ಇಂಗಿತ ವ್ಯಕ್ತಪಡಿಸಿದ್ದು, ಬಿಜೆಪಿ ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ.
ಇದರಿಂದ ಕುಂದಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅಧಿಕೃತವಾಗಿ ಕಿರಣ್ ಕೊಡ್ಗಿಯವರ ಹೆಸರು ಘೋಷಣೆಯಾಗಲಿದೆ ಎಂದು ತಿಳಿದು ಬಂದಿದ್ದು , ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಪತ್ರಿಕಾಗೋಷ್ಟಿ ಕರೆದು ಸ್ಪಷ್ಟಪಡಿಸಿದರು.
ರಾಜಕೀಯ ಜೀವನ:-
ಕರಾವಳಿಯಲ್ಲಿ ಬಿಜೆಪಿಯ ದಂತಕತೆಯನ್ನು ಬರೆದು ಐತಿಹಾಸಿಕವನ್ನ ಸೃಷ್ಟಿ ಮಾಡಿ ಬಿಜೆಪಿ ಮಾತ್ರವಲ್ಲದೆ ಇನ್ನೊಂದು ಹೊಸ ಪಕ್ಷದೊಂದಿಗೆ ಕೂಡ ಒಡಂಬಡಿಕೆ ಮಾಡಿಕೊಂಡು ಆ ಪಕ್ಷದಲ್ಲಿ ನಿಷ್ಠರು ಕೂಡ ಕಣ್ಣು ಮುಚ್ಚಿಕೊಂಡು ಚುನಾವಣೆಯಲ್ಲಿ ಗೆದ್ದುವ ರಾಜ ಮಹಾರಾಜ ಎಂದೇ ಖ್ಯಾತಿ ಪಡೆದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರು ಈ ಬಾರಿ ಚುನಾವಣೆಯಿಂದ ದೂರ ಉಳಿಯುವುದು ಬಹಳ ಅಭಿಮಾನಿಗಳಿಗೆ ನೋ ತರಿಸಿದೆ ಆದರೆ ಇವರು ಮಾಡಿರುವಂತಹ ಸಾಧನೆ ಸಮಾಜಕ್ಕೆ ಮಾದರಿಯಾಗುವುದರೊಂದಿಗೆ ಇತರ ರಾಜಕಾರಣಿಗಳಿಗೆ ಇವರ ಮಾದರಿ ವ್ಯಕ್ತಿತ್ವ ಮತ್ತೆ ತೆರೆದುಕೊಳ್ಳಲಿದೆ ಎನ್ನೋದು ಅವರ ಮಾತು ಹಾಲಾಡಿ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಶೆಟ್ಟಿಯವರು ನಾನು ರಾಜಕೀಯ ನಿವೃತ್ತಿಯನ್ನ ಪಡೆದಿಲ್ಲ ರಾಜಕೀಯದಿಂದ ದೂರ ಸರಿಯುವುದು ಇಲ್ಲ ಆದರೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮಾತ್ರ ಸ್ಪರ್ಧಿಸುವುದಿಲ್ಲ ಎಂದಷ್ಟೇ ಹೇಳಿದ್ದಾರೆ. ಆದರೆ ವೈಯಕ್ತಿಕವಾಗಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಹೊರತು ಇದರಲ್ಲಿ ಯಾರ ಒತ್ತಡ ಮತ್ತು ಇನ್ನಿತರ ಸಮಸ್ಯೆಗಳು ಇಲ್ಲ ಎನ್ನುವುದು ಅವರ ಮಾತಿನಿಂದ ಅರ್ಥವಾಯಿತು.
ಕರಾವಳಿಯಲ್ಲಿ ಬಿಜೆಪಿ ಅಂತ ಪಕ್ಷ ಇದೆ ಅಂತ ತೋರಿಸಿ ಕೊಟ್ಟಿದ್ದು ಎ.ಜಿ.ಕೊಡ್ಗಿ..ಎರಡು ಬಾರಿ MLA (1972, 1978). ಬಿಜೆಪಿ ಬಿಡುವ ಹೊತ್ತಿಗೆ ಇದು ನಮ್ಮ ಬಿಜೆಪಿ ಅಲ್ಲ ಭ್ರಷ್ಟಾಚಾರ, ವೈರತ್ವ, ನಾವು ಮಾಡಲ್ಲ.. ಬಿಜೆಪಿ ಸಿದ್ದಾಂತ ಉಳಿದಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು..
ತನ್ನ ನಂತರ ಇನ್ನೊಬ್ಬ ರಾಜನಾಗಿ ಇರುವುದಾದರೆ ಅದು ಹಾಲಾಡಿ ಶ್ರೀನಿವಾಸ ಶೆಟ್ಟಿ ಅಂತ 1999 ರಲ್ಲಿ ರಾಜಕೀಯಕ್ಕೆ ತಂದಿದ್ದು ಎ.ಜಿ.ಕೊಡ್ಗಿ..ಆ ಸಮಯದಲ್ಲಿ ಪ್ರತಾಪ್ ಚಂದ್ರ ಶೆಟ್ಟಿ ಸೋಲಿಲ್ಲದ ಸರದಾರ ಆಗಿದ್ದರು (1983 to 1994) … ದಾಯಾದಿಗಳು ಎದುರು ಎದುರು ನಿಂತ ಚುನಾವಣೆ ಆದಾಗಿತ್ತು..
ಎ.ಜಿ.ಕೊಡ್ಗಿ ಅವರ ಪುತ್ರ ಕಿರಣ್ ಕೊಡ್ಗಿ ಕೂಡ ಹಾಲಾಡಿ ಅವರಿಗೆ ಅಷ್ಟೆ ಗೌರವ ಕೊಟ್ಟಿದ್ದಾರೆ.ಕಳೆದ ಒಂದು ವರ್ಷದಿಂದ ಹಾಲಾಡಿ ಶ್ರೀನಿವಾಸ ಶೆಟ್ಟಿ ಎಲ್ಲರಿಗೂ ನನ್ನ ನಂತರ ಕಿರಣ್ ಸ್ಪರ್ಧಿಸುತ್ತಾರೆ ಅಂತ ಹೆಮ್ಮೆಯಿಂದ ಹೇಳುತ್ತಾ ಬಂದಿದ್ದಾರೆ..
ಸದಾನಂದ ಗೌಡ ಸಂಪುಟದಲ್ಲಿ ಮಂತ್ರಿ ಮಾಡುತ್ತೇವೆ, ಪ್ರಮಾಣ ವಚನ ಸ್ವೀಕರಿಸಲು ಬನ್ನಿ ಹೇಳಿದಾಗ, ಅವರು ಅವರ ಜನರ ಜೊತೆ ಹೋದರು.. ಆದ್ರೆ ಅಲ್ಲಿ ಕರೆದ ಹೆಸರು ಶ್ರೀನಿವಾಸ ಪೂಜಾರಿ.. ಕಾರಣ ಶೆಟ್ರು ಕಲ್ಲಡ್ಕ ಭಟ್ಟರ ವಿರುದ್ಧ ಮಾಡಿದ ಪ್ರತಿಭಟನೆ..ಒಂದೇ ಊರಿನ, ಅವರ ಜೊತೆಯಲ್ಲಿ ಕೂತ ಪೂಜಾರಿ ಕೊನೆ ತನಕ ಅವರಿಗೆ ಹೇಳಲಿಲ್ಲ…ಇದೆ ಕಾರಣಕ್ಕೆ 2013 ಚುನಾವಣೆಯಲ್ಲಿ ಹಾಲಾಡಿ ಅವರು ಪಕ್ಷೇತರ ಸ್ಪರ್ಧಿಸಿ ಗೆದ್ದು ತನ್ನ ಸಾಮರ್ಥ್ಯ ತೋರಿಸಿದರು.
ಶಾಸಕರ ಪತ್ರಿಕಾ ಹೇಳಿಕೆ ವಿಚಾರ:-
ಕುಂದಾಪುರ ವಿಧಾನಸಭಾ ಕ್ಷೇತ್ರದ ನಿರ್ಗಮಿತ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರು ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿ ಮಾಧ್ಯಮಗಳಿಗೆ ತಮ್ಮ ರಾಜಕೀಯ ವಿಚಾರವಾಗಿ ಹಲವು ವಿಚಾರಗಳನ್ನು ಸ್ಪಷ್ಟಪಡಿಸಿದ್ದಾರೆ ಅದರ ಇಣುಕು ನೋಟ ಇಲ್ಲಿದೆ.
ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಸತತವಾಗಿ ಒಟ್ಟು 5 ಅವಧಿಗೆ ನನ್ನನ್ನು ಬಹುನಿರೀಕ್ಷೆಯೊಂದಿಗೆ ಆಯ್ಕೆ ಮಾಡಿದ ನನ್ನ ಕ್ಷೇತ್ರದ ಎಲ್ಲಾ ಜಾತಿ, ಧರ್ಮದ ಮತದಾರ ಬಾಂಧವರಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ವಇಚ್ಚೆಯಿಂದ ಸ್ಪರ್ಧಿಸದ ಇರಲು ನಿಶ್ಚಯಿಸಿರುತ್ತೇನೆ. ನಾನು ವಿಧಾನಸಭಾ ಸದಸ್ಯನಾಗಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿ ಅತ್ಯಂತ ನಿಪ್ಪೆಯಿಂದ ನನ್ನ ಜವಾಬ್ದಾರಿಯನ್ನು ನಿರ್ವಹಿಸಿರುತ್ತೇನೆ, ಕುಂದಾಪುರ ವಿಧಾನಸಭಾ ಕ್ಷೇತ್ರವು ಬಹಳಷ್ಟು ಗ್ರಾಮೀಣ ಭಾಗಗಳನ್ನು ಹೊಂದಿರುವ ಕ್ಷೇತ್ರವಾಗಿದ್ದು, ಈ ಕ್ಷೇತ್ರದ ಎಲ್ಲಾ ವರ್ಗದ ಮತದಾರರಿಗೂ ತಮ್ಮ ಬೇಡಿಕೆಗಳನ್ನು ಹೇಳಿಕೊಳ್ಳಲು ಅವಕಾಶ ಕೊಟ್ಟು ಅದರ ನೋವು ಸಂಕಷ್ಟಗಳಿಗೆ ಸ್ಪಂದಿಸಿ ಜನರ ಆಶೋತ್ತರಗಳನ್ನು ಇಡೇರಿಸಿದ ಸಂತೃಪ್ತಿ ನನಗಿದೆ. ಎಲ್ಲಾ ಐದೂ ಚುನಾವಣೆಗಳಲ್ಲಿಯೂ ನನ್ನನ್ನು ದಾಖಲೆ ಮತಗಳ ಅಂತರಗಳಿಂದ ಚುನಾಯಿಸಿ ಕಳುಹಿಸಿದ ಕ್ಷೇತ್ರದ ಎಲ್ಲಾ ಮತದಾರರನ್ನೂ ವಿಶ್ವಾಸಕ್ಕೆ ಪಡೆದು ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಿ ಕ್ಷೇತ್ರದ ಮತದಾರರಿಂದ ಪ್ರೀತಿ ವಿಶ್ವಾಸ ಗಳಿಸಿದ ಬಗ್ಗೆ ನನಗೆ ಹೆಮ್ಮೆ ಇದೆ.
ಒಟ್ಟಾರೆಯಾಗಿ ಈ ಬಾರಿಯ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣದಿಂದ ದೂರ ಉಳಿದಿರುವುದು ಸಾವಿರ-ಸಾವಿರ ಅಭಿಮಾನಿಗಳಲ್ಲಿ ಬೇಸರ ಉಂಟು ಮಾಡಿದೆ, ಅದಲ್ಲದೆ ಹಾಲಾಡಿಯವರು, ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿ ಇನ್ನಷ್ಟು ಮೂಲಭೂತ ಸೌಕರ್ಯಗಳಿಗೆ ಇವರು ಪ್ರೇರಕರಾಗಲಿದ್ದಾರೆ ಎನ್ನುವುದು ಅಭಿಮಾನಿಗಳಲ್ಲಿ ಆಸೆ ಮತ್ತು ಆಕಾಂಕ್ಷೆಗಳಿದ್ದವು. ಆದರೆ ಈ ಎಲ್ಲ ಕನಸುಗಳಿಗೆ ಬಗ್ನ ಮತ್ತು ವಿಘ್ನ ಆಗಿರುವುದೇ ರಾಜಕೀಯದಿಂದ ದೂರ ಉಳಿಯುವ ವಿಚಾರ. ಅದು ಏನೇ ಇರಲಿ ವೈಯಕ್ತಿಕ ವಾದಂತಹ ವಿಚಾರಗಳನ್ನ ಶಾಸಕರು ತೆಗೆದುಕೊಂಡಿದ್ದು ಅವರ ಮನೋಭಾವನೆಗೆ ಬಿಟ್ಟಂತ ವಿಚಾರ ಎನ್ನುವುದೇ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತು ಏನೇ ಇರಲಿ ರಾಜಕೀಯದಿಂದ ದೂರ ಉಳಿದರು ಅಸಮಾನ್ಯರಂತೆ ಸೇವೆ ಮುಂದುವರಿಸಲಿ ಹಾಗೂ ಕ್ಷೇತ್ರದ ಬಗ್ಗೆ ಇನ್ನಷ್ಟು ಕಾಳಜಿ ಅವರ ಮನಸ್ಸಿನಲ್ಲಿ ಇರಲಿ ಮತ್ತು ಅವರ ಆರೋಗ್ಯ ಇನ್ನಷ್ಟು ಸುದೃಢವಾಗಲಿ ಎನ್ನುವುದೇ ನಮ್ಮ ಪತ್ರಿಕೆಯ ಹಾರೈಕೆ.