ತಾರೀಕು 30-04-2023ನೇ ಭಾನುವಾರದಂದು ಯು.ಎ.ಇ ಬಂಟ್ಸ್ ಇವರ 46ನೇ ವಾರ್ಷಿಕೋತ್ಸವ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯು.ಎ.ಇ ಬಂಟ್ಸ್ ನ ಅಧ್ಯಕ್ಷರಾದ ಶ್ರೀಯುತ ಸರ್ವೋತ್ತಮ ಶೆಟ್ಟಿಯವರು ವಹಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದ ಅತಿಥಿ ಸಮನ್ವಯಕಾರರಾಗಿ ಮುಂಬಯಿಯ ಉದ್ಯಮಿ, ಕಾರ್ಯಕ್ರಮ ಸಂಘಟಕ, ನಿರೂಪಣೆಕಾರ ಶ್ರೀ ಅಶೋಕ ಪಕ್ಕಳರವರು ಭಾಗವಹಿಸಲಿದ್ದಾರೆ.
ಪ್ರತಿ ವರ್ಷ ಕೊಡಲ್ಪಡುವ “ಬಂಟ ವಿಭೂಷಣ ಪ್ರಶಸ್ತಿಯನ್ನು ಈ ವರ್ಷ ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡಬಿದ್ರೆಯ ಚೇರ್ ಮಾನ್ ಆಗಿರುವ ಡಾ. ಮೋಹನ್ ಆಳ್ವ ಅವರಿಗೆ ಗೌರವ ಪ್ರಧಾನ ಮಾಡಲಿದ್ದಾರೆ. ಏಪ್ರಿಲ್ 30 ರಂದು ಬೆಳಿಗ್ಗೆ 10.00 ರಿಂದ ಸಂಜೆ 6.00 ರವರೆಗೆ ದುಬೈಯ ಬಿಸ್ಟಲ್ ಹೋಟೆಲ್ ನಲ್ಲಿ ನಡೆಯಲಿರುವ ಈ ಸಮಾರಂಭಕ್ಕೆ ಅತಿಥಿ ಅಭಾಗ್ಯತರನ್ನು ಗೌರವದಿಂದ ಬರಮಾಡಿಕೊಳ್ಳಲಿದ್ದೇವೆ ಎಂದು ಶ್ರೀ ಸರ್ವೋತ್ತಮ ಶೆಟ್ಟಿ, ಪ್ರವೀಣ್ ಕುಮಾರ್ ಶೆಟ್ಟಿ, ದೇವೇಶ್ ಆಳ್ವ. ಅನಿತಾ ದಯಾನಂದ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.