ರಥಸಪ್ತಮಿ ಭೂಮಿಯ ಸಕಲ ಜೀವರಾಶಿಗಳ ಚಟುವಟಿಕೆಗೆ ಕಾರಣನಾದ ಪ್ರತ್ಯಕ್ಷವಾಗಿ ಕಾಣುವ ಸೂರ್ಯದೇವರ ಹಬ್ಬ. ಭಾರತೀಯ ಪಂಚಾಗ ಪ್ರಕಾರ ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು. ಇದೆ ಫೆಬ್ರವರಿ 7ರಂದು ಸೂರ್ಯನು ತನ್ನ ಹಳೆಯರಥವನ್ನು ಬಿಟ್ಟು ಹೊಸರಥ ಹತ್ತುವ ದಿನ. ರಥ ಸಪ್ತಮಿಯ ದಿನ ಸೂರ್ಯೊದಯದ ಸಮಯದಲ್ಲಿ ನದಿ, ಸಮುದ್ರದಲ್ಲಿ ಸ್ನಾನ ಮಾಡಿ ಸೂರ್ಯನಿಗೆ ಅರ್ಘ ನೀಡಿದರೆ ಸಕಲಪಾಪ ಹಾಗೂ ದುಃಖ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.
ರಥ ಸಪ್ತಮಿಯ ಆಚರಣೆಯ ಹಿಂದೆ ಬಲವಾದ ವೈಜ್ಞಾನಿಕ ಕಾರಣವಿದೆ.ಆರೋಗ್ಯಕ್ಕೆ ಸೂರ್ಯನ ಶಾಖ ಹಾಗೂ ಜೀವಿಗಳಲ್ಲಿ ಹೊಸತನ ಮೂಡಲು ಸಹಾಯಕವಾಗುವ ಸೂರ್ಯ ಕಿರಣಗಳಲ್ಲಿ ಹೇರಳ ವಿಟಮಿನ್ ಡಿ ಇದೆ. ಯೋಗಾಸಗಳಲ್ಲಿ ಮೊದಲ ಪ್ರಾಶಸ್ತ್ಯ ವೂ ಸೂರ್ಯ ನಮಸ್ಕಾರಕ್ಕೆ. ಆದಿತ್ಯ ಹೃದಯ ಸೋತ್ರಪಾರಾಯಣ ಇಂದಿಗೂ ನಂಬಿದವರಿಗೆ ಇಂಬು ನೀಡುವಂತಹದ್ದು.
ಸೂರ್ಯ ಉಪಾಸನೆಯಿಂದ ಸಾಂಬ ಎಂಬವ ತನ್ನ ಕುಷ್ಠರೋಗವನ್ನು ಗುಣ ಮಾಡಿಕೊಂಡು ಇಲ್ಲಿ ಸೂರ್ಯ ನು ಸಾಂಬನಿಗೆ ಪ್ರತ್ಯಕ್ಷನಾಗಿದ್ದ ದಿನವೆ ರಥ ಸಪ್ತಮಿ. ದಕ್ಷಿಣಾಯಣ ಮುಗಿದು ಸೂರ್ಯ ಉತ್ತರದ ಕಡೆಗೆ ರಥವನ್ನು ತಿರುಗಿಸುವಾಗ ಇರುವ ಸಪ್ತಮಿ ತಿಥಿಯು ಸೂರ್ಯನಿಗೆ ಪ್ರಿಯವಾದುದು. ಸೂರ್ಯರಾಧನೆ ಸಪ್ತಮಿತಿಥಿ ,ರವಿವಾರ ಶ್ರೇಷ್ಠ ಎನ್ನುತ್ತಾರೆ. ಸೂರ್ಯನು ಚಂದ್ರಮಾನ ಸಂವತ್ಸರ ಸಪ್ತಮಿದಿನ ಸಪ್ತಅಶ್ವಗಳಿರುವ ರಥವೇರಿ ಬರುತ್ತಾನೆ ಎಂಬ ನಂಬಿಕೆ ಇದೆ. ಸೂರ್ಯನ ಬೆಳಕಿನಲ್ಲಿ 7 ಬಣ್ಣಗಳಿದ್ದು ಅದನ್ನು ರಥದ ಕುದುರೆಗಳಿಗೆ ಹೋಲಿಸಲಾಗಿದೆ. ಏಳು ಕುದುರೆಗಳನ್ನು ಎಳೆಯುವ ಒಂದೇ ಚಕ್ರವುಳ್ಳ ವಿಶಿಷ್ಟ ರಥಕ್ಕೆ ಕಾಲಿಲ್ಲದ ಅರುಣನು ಸಾರಥಿ. ಇಂತಹ ಸೂರ್ಯ ನಾರಾಯಣನನ್ನು ಆರಾಧಿಸುವುದು ರಥ ಸಪ್ತಮಿ ಉತ್ಸವದ ಒಂದು ಅಂಗ.
ಸೂರ್ಯ ದೇವನ ಜನನ = ಸಪ್ತ ಋಷಿಗಳಲ್ಲಿ ಒಬ್ಬನಾದ ಕಶ್ಯಪ ಮಹರ್ಷಿ ದಕ್ಷ ಪ್ರಜಾಪತಿಯ 13 ಪುತ್ರಿಯರನ್ನು ಮದುವೆಯಾಗುತ್ತಾನೆ. ಈ ಹದಿಮೂರು ಪುತ್ರಿಯರಲ್ಲಿ ಕುದ್ರ, ವಿನಿತಾ ಅದಿತಿ ಪ್ರಮುಖ ವಾದವರು. ಅದಿತಿ ಗರ್ಭಿಣಿಯಾಗಿರುವಾಗ ಕಶ್ಯಪ ಮಹರ್ಷಿ ಅವಳ ಬಳಿ ನಿನಗೊಬ್ಬ ಮಗನಾಗುತ್ತಾನೆ. ಆ ಮಗನಿಂದ ಇಡಿ ವಿಶ್ವವೇ ಪ್ರಕಾಶಿಸಲ್ಪಡುತ್ತದೆ ಎಂದು ಭವಿಷ್ಯ ನುಡಿದಿದ್ದರು.ಅದಿತಿಯ ಮಗನಾಗಿ ಜನಿಸಿದವನೇ ಸೂರ್ಯ.
ಒಂದು ದಿನ ಅದಿತಿ ಶ್ರೀ ಹರಿಯ ಧ್ಯಾನ ದಲ್ಲಿರುವಾಗ ಬ್ರಾಹ್ಮಣನೊಬ್ಬ ಆಶ್ರಮದ ಮುಂದೆ ಭಿಕ್ಷೆ ಬೇಡುತ್ತಾಬರುತ್ತಾನೆ. ಶ್ರೀಹರಿಯ ದ್ಯಾನದಲ್ಲಿದ್ದ ಅದಿತಿಗೆ ಸ್ವಲ್ಪ ತಡವಾಗಿ ಬ್ರಾಹ್ಮಣನ ಕರೆ ಕೇಳಿಸುತ್ತದೆ. ಇದರಿಂದ ಬ್ರಾಹ್ಮಣ ಕೋಪಗೊಂಡು . ಗರ್ಭವತಿಯಾದ ನೀನು ಶಿಶುವಿನ ಕನಸಿನಲ್ಲಿ ನನ್ನ ಕರೆಯನ್ನು ಅಲಕ್ಷ್ಯ ಗೊಳಿಸಿ ಮಗುವಿನ ಆಗಮನದ ಸಂತಸದಲ್ಲಿ ಮುಳುಗಿದ್ದಿ. ಯಾವ ಗರ್ಭವನ್ನು ನೆಚ್ಚಿಕೊಂಡು ನೀನು ಕುಳಿತ್ತಿದ್ದಿಯೊ ಆ ಗರ್ಭ ನಿನ್ನ ಉದರದಲ್ಲೆ ಕೊನೆಯುಸಿರು ಎಳೆಯಲಿ ಎಂದು ಶಪಿಸುತ್ತಾರೆ. ಆದರೆ ಮಗುವಿನ ಜನ್ಮ ತಪ್ಪಿಸಲು ಯಾರಿಂದಲೂ ಸಾಧ್ಯವಾಗದೆ ಬ್ರಾಹ್ಮಣರ ಶಾಪದಂತೆ ಆತನ ಜನ್ಮ ಮೃತ ಗರ್ಭದಲ್ಲಿಆಗುತ್ತದೆ. ಆ ಕಾರಣಕ್ಕಾಗಿ ಸೂರ್ಯದೇವನನ್ನು ಮಾರ್ತಾಂಡನ್ ಎಂದು ಕರೆಯುತ್ತಾರೆ.
ಸೂರ್ಯ ನಿಂದಲೇ ಇಡಿ ಭೂಮಿಯು ಪ್ರಕಾಶ ಮಾನವಾಗಿರುತ್ತದೆ. ಇಂತಹ ಪ್ರಕಾಶ, ಶಕ್ತಿ ನೀಡುವ ಸೂರ್ಯ ನ ಉತ್ಸವ ರಥ ಸಪ್ತಮಿಯ ದಿನ ರಥಸಪ್ತಮಿ ಸ್ನಾನ ಮಾಡುವುದರಿಂದ ಏಳು ಜನ್ಮಗಳ ಪಾಪಗಳು ಸಪ್ತವಿಧವಾದ ಅಂದರೆ ಈ ಜನ್ಮದಲ್ಲಿ ಮಾಡಿದಪಾಪ, ಜನ್ಮಾಂತರದಲ್ಲಿ ಘಟಿಸಿದ ಮಾನಸಿಕ, ವಾಚಿಕ, ದೈಹಿಕ ವಾದ ತಿಳಿದೊ ತಿಳಿಯದೇ ಇರುವ ಎಲ್ಲಾ ಪಾಪಗಳು ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ.
ಪೌರಾಣಿಕ ಹಿನ್ನೆಲೆ = ದ್ವಾಪರಯುಗದಲ್ಲಿ ಶ್ರೀ ಕೃಷ್ಣ ನು ಧರ್ಮರಾಜನಿಗೆ ರಥಸಪ್ತಮಿ ಬಗ್ಗೆ ಹೇಳಿದ ಕಥೆಯೊಂದಿದೆ. ಯಶೋವರ್ಮನೆಂಬ ರಾಜನಿಗೆ ಹುಟ್ಟಿದ ಮಗನಿಗೆ ಹುಟ್ಟುವಾಗಲೇ ರೋಗಿಷ್ಠನಾಗಿದ್ದ. ಆ ಬಗ್ಗೆ ಜ್ಯೋತಿಷಿಗಳಿಂದ ಮಾಹಿತಿ ಪಡೆದು ಸಂಚಿತ ಕರ್ಮ ದಿಂದ ಬಂದಿರುವ ಕಾಯಿಲೆಗೆ ರಥ ಸಪ್ತಮಿ ವೃತ ಆಚರಿಸಲು ಹೇಳಿದರು. ಅದಂತೆ ಅಂದು ಸೂರ್ಯ ಆರಾಧನೆ ಮಾಡಿ ರಾಜನ ಮಗ ಆರೋಗ್ಯವಾಗಿದ್ದಾನೆ ಎಂಬ ಪೌರಾಣಿಕ ಕಥೆಗಳಿವೆ.ಆರೋಗ್ಯ ಹಾಗೂ ರೋಗ ನಿವಾರಣೆಗಾಗಿ ಸೂರ್ಯ ಪಾಸನೆ ಮಾಡುತ್ತಾರೆ.
ಪಾಂಡವರು ವನವಾಸದ ಸಮಯದಲ್ಲಿ ಶ್ರೀ ಕೃಷ್ಣ ನ ಆದೇಶದಂತೆ ಸೂರ್ಯನ ಆರಾಧನೆ ಮಾಡಿ ಅಕ್ಷಯಪಾತ್ರೆಪಡೆದಿದ್ದರು ಎನ್ನುವುದನ್ನು ಮಹಾಭಾರತ ದಲ್ಲಿ ಕಾಣಬಹುದು.
ರಾವಣನನ್ನು ಗೆಲ್ಲುವ ಮೊದಲು ಶ್ರೀರಾಮನು ಅಗಸ್ತ್ಯ ರ ಉಪದೇಶದಂತೆ ಆದಿತ್ಯಹೃದಯರ ಮೂಲಕ ಸೂರ್ಯನ ಆರಾಧ್ಯ ನೆ ಮಾಡಿದನೆಂದು ರಾಮಾಯಣದಲ್ಲಿ ಉಲ್ಲೇಖವಿದೆ.
ಸೂರ್ಯ ದೇವಾಲಯ ಅಪರೂಪದಲ್ಲಿ ಅಪರೂಪ ಎಂಬಂತೆ ಆಂದ್ರಪ್ರದೇಶದ ಅರಸವಳ್ಳಿ, ರಾಜಸ್ಥಾನದ ಒಸಿಯಾದಲ್ಲಿ, ಗುಜರಾತಿನ ವೇದೇರಾದಲ್ಲಿ ಇದ್ದು ಇಲ್ಲಿಯು ಸೂರ್ಯ ನ ಮೂರ್ತಿ ಹಾಳು ಗೆಡಹಲಾಗಿದೆ.
ವಿಶ್ವ ಪರಂಪರೆಯ ತಾಣ ಎನಿಸಿಕೊಂಡಿರುವ ಜಗತ್ತ್ ಪ್ರಸಿದ್ಧ ಧಾರ್ಮಿಕ ಶಿಲ್ಪ ಕಲೆಯಲ್ಲಿ ವೈಭವ ಪೂರ್ಣವಾದ ಕೋನಾರ್ಕ ಸೂರ್ಯ ದೇವಾಲಯದಲ್ಲಿ ರಥ ಸಪ್ತಮಿಯಂದು ಸೂರ್ಯ ದೇವರ ಹಬ್ಬ ವಿಜ್ರಂಭಣೆಯಿಂದ ನಡೆಯುತ್ತದೆ. ಈ ದೇವಾಲಯದ ಮೂಲ ವಿನ್ಯಾಸ ರಥದ ಆಕಾರದಲ್ಲಿದೆ. ಈ ದೇವಾಲಯ ಇಪ್ಪತ್ನಾಲ್ಕು ಚಕ್ರದ ಒಂದು ಕಲ್ಲಿನ ರಥದಂತೆ ಗೊಚರಿಸುತಿದೆ ಒಡಿಸಿಯ ಶ್ರೀಮಂತ ವಾಸ್ತು ಶಿಲ್ಪ, ಧಾರ್ಮಿಕದ ಮಹತ್ವದಿಂದ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ರಥಸಪ್ತಮಿಯಂದು ಜನ ಬೇಟಿ ನೀಡುತ್ತಾರೆ .ಆದರೆ ಇಲ್ಲಿ ಯಾವುದೆ ತರಹದ ಪೂಜೆಗಳು ನಡೆಯುವುದಿಲ್ಲ.
ಈ ಸೂರ್ಯ ದೇವಾಲಯ ರಥದ ಮಾದರಿಯ ಲ್ಲಿದ್ದು 24 ಚಕ್ರಗಳನ್ನು ಒಳಗೊಂಡಿದೆ .ಏಳು ಕುದುರೆ ಗಳು ರಥ ಎಳೆಯುವಂತೆ ಅಂದರೆ ಸಂಪೂರ್ಣ ಮಂದಿರ ರಥ ಎಳೆಯುವುವಂತಿದೆ. 24 ಚಕ್ರಗಳಿದ್ದು ಎಲ್ಲ ಚಕ್ರಕ್ಕೂ ಎಂಟು ಕೋನಗಳಿವೆ ಮುಖ್ಯ ಪ್ರವೇಶ ದ್ವಾರದಲ್ಲಿ ಎರಡು ಸಿಂಹಗಳು ಆನೆಯನ್ನು ಹಿಡಿದ ಭಂಗಿಯಲ್ಲಿವೆ. ದೇವಳದ ಹೊರಗಿನ ಭಾಗಗಳು ರಾಡ್ ನಿಂದ ಜೋಡಿಸಿ ದೇವಾಲಯದ ರೂಪವನ್ನೆ ಕೆಡಿಸಿದಂತಿದೆ . ದೇಗುಲ ಮದ್ಯಭಾಗದ ಮೂರು ದಿಕ್ಕುಗಳಲ್ಲಿ ಸೂರ್ಯ ದೇವರ ಮೂರು ವಿಭಿನ್ನ ಮೂರ್ತಿ ಗಳಿವೆ. ಸೂರ್ಯನ ಯೌವನಾವಸ್ಥೆಯ , ಮಧ್ಯವಯಸ್ಸಿನ ಮತ್ತು ಇಳಿವಯಸ್ಸಿನ ಮುಖ ಭಾವಗಳನ್ನು ಸೂಸುವ ಮುಖಭಾವದ ಕೆತ್ತನೆ ಇಲ್ಲಿದೆ.ಒಟ್ಟಿನಲ್ಲಿ ರಥ ಸಪ್ತಮಿ ಯಂದು ಇಲ್ಲಿ ಹೊಸ ಬಗೆಯ ಮೆರಗು.
ಸೂರ್ಯ ಜಗತ್ತಿಗೆ ಚೈತನ್ಯ ನೀಡುವ ಭಾಸ್ಕರ, ರವಿ, ನೇಸರ ಹೀಗೆ ಅನೇಕ ಹೆಸರುಗಳಿಂದ ಪೂಜಿಸುತ್ತಾರೆ. ಸೂರ್ಯ ನ ಆಗಮನದಿಂದ ಗಿಡ ಮರ ಭೂದೇವಿ ಸಂಭ್ರಮಿಸುತ್ತದೆ. ಪ್ರಾಣಿಗಳು ತಮ್ಮಲ್ಲಿ ಶಕ್ತಿ ತುಂಬಿಸಿ ಕೊಂಡರೆ ಹಕ್ಕಿಗಳು ಸೂರ್ಯ ನ ಆಗಮನದಿ ಚಿಲಿಪಿಲಿಗುಟ್ಟುತ್ತವೆ. ಇಂತಹ ಸೂರ್ಯದೇವರ ಹಬ್ಬ ಕ್ಕೊಂದು ಅರ್ಥ ವಿದೆ.
ಲತಾ ಸಂತೋಷ ಶೆಟ್ಟಿ ಮುದ್ದುಮನೆ