ಭಾರತೀಯ ಸಂಸ್ಕೃತಿ ಅಚಾರ ವಿಚಾರಗಳು ಜಗತ್ತಿನಲ್ಲಿಯೆ ಶ್ರೇಷ್ಠವಾದುದು ಅದನ್ನು ಉಳಿಸುವಲ್ಲಿ ಈಗೀನ ಯುವ ಸಮುದಾಯ ಪ್ರಯತ್ನಿಸಬೇಕು ಎಂದು ವಿದ್ಯಾವಾಚಸ್ಪತಿ ಬಾರ್ಕೂರು ಸಂಸ್ಥಾನದ ಶ್ರೀ ಡಾ! ಸಂತೋಷ್ ಗುರೂಜಿ ನುಡಿದರು ಅವರು ಬಂಟರ ಸಂಘ (ರಿ) ಸುರತ್ಕಲ್ ವತಿಯಿಂದ ಬಂಟರ ಭವನದಲ್ಲಿ ನಡೆದ ಭಾರತೀಯ ಸಂಸ್ಕೃತಿ ಅಳಿವು ಉಳಿವು ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ನುಡಿದರು. ನಮ್ಮ ಪೂರ್ವಜರು ನಡೆಸುತ್ತಿದ್ದ ಹಿಂದಿನ ಪರಂಪರೆ, ಕಟ್ಟುಪಾಡು, ಪದ್ದತಿಯನ್ನು ನಾವು ಪ್ರಸ್ತುತ ಕಾಲಘಟ್ಟದಲ್ಲಿ ಮರೆಯುತ್ತಿದ್ದು, ಇದು ಅಪಾಯದ ಸೂಚನೆಯಾಗಿದೆ. ಹಾಗಾಗಿ ನಾವು ಕರಾವಳಿ ಪ್ರದೇಶದಲ್ಲಿ ದೈವರಾಧನೆ, ಪ್ರಕೃತಿಯ ಅರಾಧನೆ ಮಾಡುವ ಮೂಲಕ ನಮ್ಮ ಹಿಂದೂ ಧರ್ಮವನ್ನು ಹಾಗೂ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡಬೇಕಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಮುಂಬಯಿ ಉದ್ಯಮಿ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್ ಪೂಂಜ ವಹಿಸಿದ್ದರು.
ಸಭೆಯಲ್ಲಿ ಉಪಾಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಸುರತ್ಕಲ್, ಕೋಶಾಧಿಕಾರಿ ರತ್ನಾಕರ ಶೆಟ್ಟಿ ಸುರತ್ಕಲ್, ಜತೆ ಕಾರ್ಯ ದರ್ಶಿ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಮಹಿಳಾ ವೇದಿಕೆ ಅಧ್ಯಕ್ಷೆ ಚಿತ್ರಾ ಜೆ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಲೋಕಯ್ಯ ಶೆಟ್ಟಿ ಸ್ವಾಗತಿಸಿದರು. ಪುಷ್ಪರಾಜ ಶೆಟ್ಟಿ ಮಧ್ಯ ವಂದಿಸಿದರು.