
ತುಳು ಕನ್ನಡ ವೆಲ್ಫೇರ್ ಅಸೋಸಿಯೇಶನ್ ಮೀರಾ ಭಯಂದರ್ ಇದರ ಸಾಹಿತ್ಯ ಮತ್ತು ಕಲೆ ವಿಭಾಗದ ವತಿಯಿಂದ ಮಾರ್ಚ್ 22 ರವಿವಾರದಂದು ಸಂಜೆ 3.30 ರಿಂದ ದಿ. ರವಿ ರಾ ಅಂಚನ್ ರವರ ನೆನಪಿಗಾಗಿ ದತ್ತಿ ನಿಧಿ ಸಂಸ್ಮರಣಾ ಪ್ರಶಸ್ತಿ ಪ್ರದಾನ, ಸನ್ಮಾನ ಮತ್ತು ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮೀರಾರೋಡ್ ಪೂರ್ವದ ಬಾಲಾಜಿ ಇಂಟರ್ ನ್ಯಾಶನಲ್ ಹೊಟೇಲ್ ಸಭಾಂಗಣ ಭಾರತಿ ಪಾರ್ಕ್ ಇಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಂಜೆ 3.30 ರಿಂದ ಭಜನೆ, ವಿಶ್ವ ಮಹಿಳಾ ದಿನಾಚರಣೆ ಹಾಗೂ ಹಳದಿ ಕುಂಕುಮ ಕಾರ್ಯಕ್ರಮಗಳು ನಡೆಯಲಿದ್ದು, 4.30 ರಿಂದ ಮುಂಬೈಯ ಖ್ಯಾತ ಸಾಹಿತಿಗಳಿಂದ ವಿಚಾರಗೋಷ್ಠಿ, ಸಂಜೆ 5:30 ರಿಂದ ಸಂಸ್ಥೆಯ ಮಹಿಳಾ ವಿಭಾಗದ ವತಿಯಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮಹಿಳೆಯರಿಂದ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮಗಳು ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಖ್ಯಾತ ರಂಗ ತಜ್ಞ ಹಾಗೂ ಸಾಹಿತಿ ಉಡುಪಿ ಗುಣಪಾಲ್, ವೀರ ಕೇಸರಿ ಸಂಘ ಮೀರಾ ಭಯಂದರ್ ಇದರ ಅಧ್ಯಕ್ಷರಾದ ಹರೀಶ್ ರೈ ಕುಂಬ್ಳೆ ಮತ್ತು ಸಮಾಜಸೇವಕ ರವೀಂದ್ರ ಎನ್ ಶೆಟ್ಟಿ ದೇರಳಕಟ್ಟೆ ಇವರುಗಳನ್ನು ಸನ್ಮಾನಿಸಲಾಗುವುದು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಬಿಜೆಪಿ ನೇತಾರ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಡಾ| ಹರೀಶ್ ಬಿ ಶೆಟ್ಟಿ, ವಿಶೇಷ ಅತಿಥಿಯಾಗಿ ಬಂಟರ ಸಂಘ ಮುಂಬಯಿ ಇದರ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ರವೀಂದ್ರ ಡಿ ಶೆಟ್ಟಿ ಕೊಟ್ರಪಾಡಿಗುತ್ತು, ಅತಿಥಿಗಳಾಗಿ ನವತರುಣ ಮಿತ್ರ ಮಂಡಳಿ ಮೀರಾ ಭಯಂದರ್ ಇದರ ಅಧ್ಯಕ್ಷರಾದ ಯೋಗೇಂದ್ರ ಗಾಣಿಗ, ಮಿಲಿ ಹೋಟೆಲ್ ನ ಮಾಲಕ ಐಕಳ ಆನಂದ ಶೆಟ್ಟಿ, ಉದ್ಯಮಿ ಪ್ರಸಾದ್ ಶೆಟ್ಟಿ ನೀರೆಬೈಲೂರು, ಸಮಾಜ ಸೇವಕಿ ತನುಜಾ ಶೆಟ್ಟಿ ವೀರ್ಕರ್, ರಾಜಕೀಯ ನೇತಾರೆ ರಂಜನಾ ಕಟಾವಟೆ, ಅಡ್ವೋಕೇಟ್ ಸೌಮ್ಯ ಪೂಜಾರಿ ಮೊದಲಾದವರು ಆಗಮಿಸಲಿದ್ದಾರೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಸ್ಥೆಯ ಗೌರವ ಅಧ್ಯಕ್ಷರಾದ ರಾಜೇಶ್ ಎಸ್ ಕುಂದರ್, ಅಧ್ಯಕ್ಷರಾದ ಹರೀಶ್ ಸುವರ್ಣ ಕಣಂಜಾರ್, ಉಪಾಧ್ಯಕ್ಷರಾದ ಉಮೇಶ್ ಬಾರ್ಕೂರ್, ಗೌರವ ಕಾರ್ಯದರ್ಶಿ ಅಶೋಕ್ ವಳದೂರು, ಕೋಶಾಧಿಕಾರಿ ಗೀತಾ ಸಿ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಆಶಾಲತಾ ಪಿ ಶೆಟ್ಟಿ, ಜೊತೆ ಕಾರ್ಯದರ್ಶಿ ಶೈಲಾ ಹೆಗ್ಡೆ, ಜೊತೆ ಕೋಶಾಧಿಕಾರಿ ರಾಜಕುಮಾರ್ ಕಟ್ಪಾಡಿ, ಮಹಿಳಾ ವಿಭಾಗದ ಕಾರ್ಯದರ್ಶಿ ಸುಜಾತ ಜೆ ಕೊಟ್ಯಾನ್, ಸಾಹಿತ್ಯ ಹಾಗೂ ಕಲೆ ವಿಭಾಗದ ಕಾರ್ಯಾಧ್ಯಕ್ಷೆ ಲೀಲಾ ಗಣೇಶ್ ಕಾರ್ಕಳ, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷೆ ಭಾರತಿ ಅಂಚನ್, ಟ್ರಸ್ಟಿಗಳಾದ ಎ.ಕೆ ಹರೀಶ್, ವೈ.ಟಿ. ಶೆಟ್ಟಿ ಹೆಜಮಾಡಿ, ಹೇಮ್ ಪ್ರಕಾಶ್ ಅಮೀನ್, ವಸಂತಿ ಎಸ್ ಶೆಟ್ಟಿ ಹಾಗೂ ಸರ್ವ ಪದಾಧಿಕಾರಿಗಳು, ಸದಸ್ಯರುಗಳು ಪತ್ರಿಕಾ ಪ್ರಕಟನೆಯಲ್ಲಿ ವಿನಂತಿಸಿಕೊಂಡಿದ್ದಾರೆ. ಕಾರ್ಯಕ್ರಮದ ಕೊನೆಗೆ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿದೆ.
ಚಿತ್ರ, ವರದಿ : ವೈ ಟಿ ಶೆಟ್ಟಿ ಹೆಜಮಾಡಿ


























































































































