
ಭಾರತದಲ್ಲಿ ಹಲವು ಬಗೆಯ ಚಿಕಿತ್ಸೆ ಪದ್ಧತಿಗಳಿವೆ. ಅಲೋಪಥಿ, ಹೋಮಿಯೋಪಥಿ ಮತ್ತು ಆಯುರ್ವೇದ ಮುಖ್ಯ. ನಮ್ಮ ಜಗತ್ತಿನಲ್ಲೇ ಅತ್ಯಂತ ಇತ್ತೀಚಿನ ಚಿಕಿತ್ಸಾ ಪದ್ಧತಿಯೆಂದರೆ ಅದು ಹೋಮಿಯೋಪಥಿ. ಕೇವಲ 230 ವರ್ಷಗಳ ಹಿಂದೆಯಷ್ಟೇ ಇದರ ಆವಿಷ್ಕಾರವಾಯಿತು. ಆಯುರ್ವೇದಕ್ಕೆ 5000 ವರ್ಷಗಳ ಇತಿಹಾಸವಿದೆ. ಯಾವುದೇ ಹೊಸ ಆವಿಷ್ಕಾರ ಹೇತುವೇ ಅವಶ್ಯಕತೆ ಎನ್ನುವುದು. ಅಂದಿನ ಅಲೋಪಥಿ ವೈದ್ಯರಾಗಿದ್ದ ಡಾ. ಸಾಮ್ಯುವೆಲ್ ಹಾನಿಮನ್ ತಾನು ಕಲಿತ ವೈದ್ಯ ಪದ್ಧತಿಯಲ್ಲಿ ಕುಂದು ಕೊರತೆಗಳಿಗೆ ಬೇಸತ್ತು ವೈದ್ಯ ವೃತ್ತಿಗೆ ತಿಲಾಂಜಲಿಯಿಟ್ಟು ಬಿಟ್ಟವರು. ಅಡ್ಡ ಪರಿಣಾಮಗಳಿಲ್ಲದೆ ಸುಲಭದಲ್ಲಿ ಕಾಯಿಲೆಗಳನ್ನು ಗುಣಬಡಿಸಬಲ್ಲ ಔಷಧಿಯ ಚಿಕಿತ್ಸಾ ಪದ್ದತಿಯನ್ನು ಕಂಡು ಹುಡುಕುವ ನಿರಂತರ ಪ್ರಯತ್ನದ ಫಲವೇ ಹೋಮಿಯೋಪಥಿಯೆಂಬ ವಿಶಿಷ್ಟ ಚಿಕಿತ್ಸಾ ಪದ್ಧತಿಯನ್ನು ಕಂಡು ಹಿಡಿದರು. ಜರ್ಮನಿಯಲ್ಲಿ ಅವಿಷ್ಕಾರಗೊಂಡ ಹೋಮಿಯೋಪತಿ ಚಿಕಿತ್ಸಾ ಪದ್ಧತಿ ಕೇವಲ 15 ವರ್ಷಗಳಲ್ಲಿ ಅಂದರೆ 1910ಕ್ಕೆ ಭಾರತಕ್ಕೆ ಕಾಲಿಟ್ಟಿತು. ಸೋಂಕು ರೋಗಗಳಿರಲಿ, ದೀರ್ಘಕಾಲೀನ ರೋಗಗಳಿರಲಿ ಹೋಮಿಯೋಪತಿ ಚಿಕಿತ್ಸೆಯ ಅದ್ಭುತ ಪರಿಣಾಮಗಳನ್ನು ಕಂಡುಕೊಂಡ ನೂರಾರು ಯುರೋಪಿನ ವೈದ್ಯರು ಹೋಮಿಯೋಪಥಿಯತ್ತ ವಾಲಿದರು. ಡಾ. ಹೆರಿಂಗ್, ಡಾ. ಕೆಂಟ್, ಡಾ. ಡನ್ ಹಾಮ್, ಡಾ. ಬರ್ನೆಟ್ ಇತ್ಯಾದಿ ಇದರಲ್ಲಿ ಪ್ರಮುಖರು. ಭಾರತದಲ್ಲಿಯೂ ಹಲವು ಅಂದಿನ ಅಲೋಪಥಿ ವೈದ್ಯರೇ ಹೋಮಿಯೋಪಥಿ ವೈದ್ಯಶಾಸ್ತ್ರದ ಮೇರು ವ್ಯಕ್ತಿಗಳಾದರು. ಅದರಲ್ಲಿ ಡಾ. ಮಹೇಂದ್ರಲಾಲ್ ಸರ್ಕಾರ್, ಡಾ. ಪಿ.ಸಿ ಮಂಜುಂದಾರ್ ಪ್ರಮುಖರು.

ಪಶ್ಚಿಮದ ಬಂಗಾಳದಲ್ಲಿ ಪ್ರಾರಂಭಗೊಂಡು ದೇಶದ್ಯಾಂತ ಹಬ್ಬಿದ ಹೋಮಿಯೋಪಥಿ ಆಸ್ತಿತ್ವದ ಪ್ರಮುಖ ಆಸ್ತಿಯೆಂದರೆ ರೋಗಿಗಳೇ. ಶೀಘ್ರ ಗುಣಕಾರಿ, ಅಡ್ಡಪರಿಣಾಮ ರಹಿತ, ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಸಮಾನ ಚಿಕಿತ್ಸೆ ನೀಡಬಲ್ಲ ‘ಗುಣವಾಗಲಾರದು’ ಎಂಬ ಕಾಯಿಲೆಯನ್ನು ಗುಣಪಡಿಸುತ್ತಿರುವ ಹೋಮಿಯೋಪಥಿ ಚಿಕಿತ್ಸಾ ಪದ್ಧತಿ ಜನಸಾಮಾನ್ಯನ ಗಮನ ಸೆಳೆಯಿತು. ಲಾಹೋರಿನ ರಾಜ್ ರಂಜಿತ್ ಸಿಂಗ್, ರಾಜಾರಾಮ್ ಮೋಹನ್ ರಾಯ್, ಶ್ರೀ ರಾಮಕೃಷ್ಣ ಪರಮಹಂಸರು, ತ್ರಿಪುರಾದ ಅರಸರು ಇತ್ಯಾದಿಯಾಗಿ ಮಹಾನ್ ಘಟಾನುಘಟಗಳೇ ಹೋಮಿಯೋಪಥಿ ಚಿಕಿತ್ಸೆಯಲ್ಲಿ ಅನಾರೋಗ್ಯದಿಂದ ಶಮನ ಕಂಡುಕೊಂಡರು. ಆದ್ದರಿಂದಲೇ ಇಂದು ಹೋಮಿಯೋಪಥಿ ಜಗತ್ತಿನಲ್ಲಿಯೇ ಎರಡನೇ ಅತಿ ದೊಡ್ಡ ಚಿಕಿತ್ಸೆ ಪದ್ಧತಿಯಾಗಿದೆ. ಜಗತ್ತಿನಲ್ಲಿಯೇ ಅತಿ ಹೆಚ್ಚು ಸಂಖ್ಯೆಯ ಹೊಸ ರೋಗಿಗಳನ್ನು ಆಕರ್ಷಿಸುತ್ತಿರುವ ಚಿಕಿತ್ಸಾ ಪದ್ಧತಿಯಾಗಿದೆ. ಇಂದು 220ಕ್ಕಿಂತಲೂ ಹೆಚ್ಚು ಹೋಮಿಯೋಪಥಿ ವೈದ್ಯಕೀಯ ಕಾಲೇಜುಗಳ ಶಿಕ್ಷಣ ಮತ್ತು ತರಬೇತಿ ನೀಡುತ್ತಿವೆ. ಸುಮಾರು 4-5 ಲಕ್ಷ ಹೋಮಿಯೋಪಥಿ ಪದವೀಧರರು ದೇಶದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಪದವಿ ಸ್ನಾತಕೋತ್ತರ ಪದವಿ ಮತ್ತು ಪಿ.ಎಚ್.ಡಿ ಕಲಿಕೆ ಇಂದು ಲಭ್ಯ. ವಿವಿಧ ಸಂಶೋಧನಾ ಕೇಂದ್ರಗಳು ವಿಶಿಷ್ಟ ಚಿಕಿತ್ಸಾ ಪದ್ಧತಿಯ ಬಗ್ಗೆ ಸಂಶೋಧನಾ ನಡೆಸುತ್ತಿವೆ. ಅದಕ್ಕಾಗಿಯೇ ಕೇಂದ್ರ ಸರಕಾರದ ಸಂಶೋಧನಾ ಸಂಸ್ಥೆ (ಸಿಸಿಆರ್ಎಚ್) ಆಸ್ತಿತ್ವದಲ್ಲಿದೆ.
ವೇಗದ ಬೆಳವಣಿಗೆಗೆ ಕಾರಣವಾದ ಸ್ಥೂಲ ಅಂಶಗಳು ಹೋಮಿಯೋಪತಿ ಚಿಕಿತ್ಸೆಯ ಮೂಲ ಉದ್ದೇಶವೇ ಆ ರೋಗಿಯನ್ನು ಸಶಕ್ತನನ್ನಾಗಿಸುವುದು. ಆತನ ರೋಗನಿರೋಧಕ ಶಕ್ತಿಯನ್ನು ಉದ್ದೀಪನಗೊಳಿಸುವುದು. ಇದರಿಂದಾಗಿ ರೋಗ ಗುಣವಾಗುವುದಲ್ಲದೆ, ರೋಗವನ್ನು ಬಾರದಂತೆ ತಡೆಗಟ್ಟಲೂ ಸಾಧ್ಯವಿದೆ. ಇತಿಹಾಸದ ಪುಟಗಳಿಂದ ನೋಡಿದರೆ ಯುರೋಪಿನ ಸಾಂಕ್ರಮಿಕ ರೋಗಗಳಾದ 1801 ರ ಸ್ಕಾರ್ಲೆಟ್ ಜ್ವರ, 1830ರ ವಾಂತಿ ಭೇದಿ, 1994ರ ಭಾರತದಲ್ಲಿನ ಪ್ಲೇಗ್, 2005-06ರ ಚಿಕನ್ ಗುನ್ಯ ಕಾಯಿಲೆ, 2021ರ ಮಹಾಮಾರಿ ಕೋವಿಡ್ ಇವೆಲ್ಲದರಲ್ಲಿ ಹೋಮಿಯೋಪಥಿ ಔಷಧಿಗಳ ಪಾತ್ರ ರೋಗವನ್ನು ಗುಣಪಡಿಸುವುದು ಮಾತ್ರವಲ್ಲದೆ, ಬಾರದಂತೆ ತಡೆಯುವುದು ಅತ್ಯಂತ ಯಶಸ್ವಿಯಾಗಿದೆ. ಗುಣವಾಗುವುದಿಲ್ಲ ಎಂದು ಷರಾ ಬರೆದು ಬಿಟ್ಟ ನೂರಾರು ಕಾಯಿಲೆಗಳಲ್ಲಿ ಹೋಮಿಯೋಪಥಿಯ ಚಿಕಿತ್ಸೆ ಗುಣಪಡಿಸಿ ತೋರಿಸುತ್ತಿದೆ. ಉದಾಹರಣೆ ಮೈಗ್ರೇನ್, ಅಸ್ತಮಾ, ಬ್ರಾಂಕೈಟಿಸ್, ಕರುಳಿನ ಉರಿಯೂತ, ಜಠರದ ಹುಣ್ಣು, ಗರ್ಭಕೋಶದ ಗಡ್ಡೆ, ಬಂಜೆತನ, ಡಿಸ್ಕ್ ಜಾರುವುದು, ಸಯಾಟಿಕ, ವಾತ, ಅಲರ್ಜಿ ಇತ್ಯಾದಿ ಶಸ್ತ್ರಕ್ರಿಯೆ ಇಲ್ಲದೆಯೇ ಹಲವು ಬಗೆಯ ಕಾಯಿಲೆಗಳನ್ನು ಗುಣಪಡಿಸಬಲ್ಲ ಛಾತಿ ಹೋಮಿಯೋಪಥಿಯಲ್ಲಿದೆ. ಇದಕ್ಕೆ ಬೇಕಾದುದು ನುರಿತ ವೈದ್ಯರ ಮಾರ್ಗದರ್ಶನ. ಇಷ್ಟೇ ಅಲ್ಲದೇ ಕೊನೆಯ ಹಂತದ ಕಾಯಿಲೆಯಲ್ಲಿ ನೋವಿಲ್ಲದ ಹೆಚ್ಚು ನರಳಾಟವಿಲ್ಲದ ಬದುಕನ್ನು ಹೋಮಿಯೋಪಥಿ, ಚಿಕಿತ್ಸೆಯ ಮೂಲಕ ಕಂಡುಕೊಳ್ಳಬಹುದು.
ಹೋಮಿಯೋಪಥಿ ಚಿಕಿತ್ಸೆ ವ್ಯಕ್ತಿ ಕೇಂದ್ರೀಕೃತವಾದುದು. ಆದುದರಿಂದಲೇ ಚಿಕಿತ್ಸೆ ಪರಿಪೂರ್ಣವಾಗಿರುತ್ತದೆ. ಒಂದೊಂದು ಕಾಯಿಲೆಗೆ ಒಂದೊಂದು ಅಂಗಕ್ಕೆ ಒಂದೊಂದು ಔಷಧಿ ಬದಲು ಆ ವ್ಯಕ್ತಿಗೆ ಸರಿಯಾಗುವ ಔಷಧಿಯನ್ನು ನೀಡಲಾಗುತ್ತದೆ. ಈ ಔಷಧಿ 60 ಕ್ಕೂ ಹೆಚ್ಚು ಸಸ್ಯಜನ್ಯವಾಗಿರುತ್ತದೆ. ಹೋಮಿಯೋಪತಿ ಔಷಧಿಗಳು ಶೀಘ್ರ ಪರಿಹಾರ ಪರಿಣಾಮಕಾರಿ. ಇಂದು ಈ ಕಾರಣದಿಂದಲೇ ಹೆಚ್ಚು ಹೆಚ್ಚು ಜನರನ್ನು ಹೋಮಿಯೋಪಥಿಯತ್ತ ಸೆಳೆಯುತ್ತಿದೆ. ಯಾವುದೇ ಅಡ್ಡ ಪರಿಣಾಮ ಇಲ್ಲದಿದ್ದರೂ ಇದರ ಇನ್ನೊಂದು ವೈಶಿಷ್ಟ್ಯ ಹೆತ್ತವರು ತಮ್ಮ ಮಕ್ಕಳನ್ನು ಹೋಮಿಯೋಪಥಿ ಚಿಕಿತ್ಸೆಗೆ ಒಳಪಡಿಸುವ ಪ್ರಮುಖ ಕಾರಣಗಳಲ್ಲಿ ಇದು ಒಂದು. ಔಷಧಿಗಳ ತಯಾರಿಕೆ ಅತಿ ವಿಚಿತ್ರ ಕೊಡುವ ಪ್ರಮಾಣ ಅತ್ಯಂತ ಕನಿಷ್ಠ ಪರಿಣಾಮ ಮಾತ್ರ ಶ್ರೇಷ್ಠ. ಇಂತಹ 10 ಹಲವಾರು ಕಾರಣಗಳು ಕಾರಣಗಳು ಹೋಮಿಯೋಪಥಿಯನ್ನು ಜನಸಾಮಾನ್ಯರು ಮೆಚ್ಚುವಂತಹುದಾಗಿದೆ. ಕೇರಳದಲ್ಲಿ ಬಂಜೆತನ ನಿವಾರಿಸುವ ಕೇಂದ್ರಗಳು ನಿರೀಕ್ಷೆಗೆ ಮೀರಿ ಯಶಸ್ವಿಯಾಗಿದೆ. ಕ್ಯಾನ್ಸರ್ ಚಿಕಿತ್ಸೆ ಕೇಂದ್ರ ಅತ್ಯುತ್ತಮ ಫಲಿತಾಂಶ ನೀಡುತ್ತಿದೆ. ಆದ್ದರಿಂದಲೇ ಹೋಮಿಯೋಪಥಿ ಈ ಶತಮಾನಕ್ಕೆ ಮತ್ತು ಭವಿಷ್ಯಕ್ಕೆ ಇರುವ ಚಿಕಿತ್ಸಾ ಪದ್ದತಿ ಎಂದರೆ ಯಾವುದೇ ತಪ್ಪಿಲ್ಲ.
ಬರಹ : ಡಾ. ಪ್ರವೀಣ್ ರಾಜ್ ಆಳ್ವ ಮಂಗಳೂರು





















































































































