ಜಾತಿ ಸಂಘಟನೆಗಳಲ್ಲಿ ಯುಎಇಯ ಅತೀ ಹಿರಿಯ ಸಂಸ್ಥೆ ಯುಎಇ ಬಂಟ್ಸ್ ನ ವತಿಯಿಂದ ಜುಲೈ 27 ರಂದು ಪ್ರಥಮ ಬಾರಿಗೆ ಯುಎಇಯ ಈ ಮರಳು ಭೂಮಿಯಲ್ಲಿ “ದುಬೈ ಬಂಟೆರ್ನ ಆಟಿಡೊಂಜಿ ದಿನ” ಕಾರ್ಯಕ್ರಮ ಯಶಸ್ವಿಯಾಗಿ ಜರಗಿತು. ಕಾರ್ಯಕ್ರಮದಲ್ಲಿ ಯುಎಇಯ ಎಲ್ಲಾ ರಾಜ್ಯದ ಬಂಟ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಕಾರ್ಯಕ್ರಮವೆಂದು ಸಾಬೀತು ಪಡಿಸಿಕೊಟ್ಟರು. ಬೆಳಿಗ್ಗೆ ಹತ್ತು ಗಂಟೆಗೆ ಯುಎಇಯ ಬಂಟ್ಸ್ ನ ಮಹಿಳೆಯರು ದೀಪವನ್ನು ಬೆಳಗಿಸಿ ಪ್ರಾರ್ಥನೆ ಗೀತೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಆರಂಭಗೊಂಡಿತು. ನಂತರ ಯುಎಇಯ ಬಂಟ ಬಂಧು ಭಗಿಣಿಯರಿಂದ ಸಂಗೀತ ರಸಮಂಜರಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಬಳಿಕ ಸಭಾ ವೇದಿಕೆಯಲ್ಲಿ ದುಬೈ ಬಂಟೆರ್ನ ಆಟಿಡೊಂಜಿ ದಿನ ಕಾರ್ಯಕ್ರಮದ ಉದ್ಘಾಟನೆಯನ್ನು ಯುಎಇ ಬಂಟ್ಸ್ ನ ಹಿರಿಯ ಮಹಾ ಪೋಷಕರಾದ ಡಾ. ಬಿ.ಆರ್ ಶೆಟ್ಟಿ, ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಮುಖ್ಯ ಪ್ರಾಯೋಜಕರಾದ ರಾಮೀ ಗ್ರೂಪ್ ಆಫ್ ಹೋಟೆಲ್ಸ್ ಆಂಡ್ ರೆಸಾರ್ಟ್ಸ್ ಇದರ ಆಡಳಿತ ನಿರ್ದೇಶಕರಾದ ವರದರಾಜ್ ಎಮ್ ಶೆಟ್ಟಿ, ಸಹ ಪ್ರಾಯೋಜಕರಾದ Helios Perfumes & Cosmetic LLC ಯ ಪರ್ವೇಶ್ ಬರೇಜಾ, ಯುಎಇ ಬಂಟ್ಸ್ ನ ಪೋಷಕರಾದ ಸರ್ವೋತ್ತಮ ಶೆಟ್ಟಿ, ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿಯವರು ಕಳಸಕ್ಕೆ ಭತ್ತವನ್ನು ಹಾಕಿ ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿದರು. ವೇದಿಕೆಯಲ್ಲಿ ಯುಎಇ ಬಂಟ್ಸ್ ನ ಉಪಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ, ಕಾರ್ಯದರ್ಶಿ ರವಿರಾಜ್ ಶೆಟ್ಟಿ ಹಾಗೂ ಕೋರ್ ಸಮಿತಿಯ ಸದಸ್ಯರಾದ ರತ್ನಾಕರ ಶೆಟ್ಟಿ, ಗುಣಶೀಲ್ ಶೆಟ್ಟಿ, ಬಿ.ಕೆ ಗಣೇಶ್ ರೈ, ಸುಂದರ ಶೆಟ್ಟಿ, ಸಜನ್ ಶೆಟ್ಟಿ, ದಿನೇಶ್ ಶೆಟ್ಟಿ ಕೊಟ್ಟಿಂಜ ಮತ್ತು ಸಂಘಟನಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿಯವರು, 2025 ನೇ ಸಾಲಿನ ಯುಎಇ ಬಂಟ್ಸ್ ನ ಕಾರ್ಯಕ್ರಮದ ಮುನ್ನೋಟವನ್ನು ನೀಡಿ ಯುಎಇಯ ಬಂಟರು ಒಗ್ಗಟ್ಟಾಗಿ ಇನ್ನೂ ಮುಂದೆ ನಡೆಯುವ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ವಿನಂತಿಸುತ್ತಾ ಎಲ್ಲರನ್ನೂ ಸ್ವಾಗತಿಸಿದರು. ಸಭಾ ವೇದಿಕೆಯಲ್ಲಿ ಮುಖ್ಯ ಪ್ರಾಯೋಜಕರಾದ ವರದರಾಜ್ ಎಂ ಶೆಟ್ಟಿ, ಸಹ ಪ್ರಾಯೋಜಕರಾದ ಪರ್ವೇಶ್ ಬರೇಜಾರವರನ್ನು ಗೌರವಾನ್ವಿತ ಅತಿಥಿ ಡಾ. ಬಿ.ಆರ್ ಶೆಟ್ಟಿ, ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ಮತ್ತು ಸರ್ವೋತ್ತಮ ಶೆಟ್ಟಿಯವರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಮುಖ್ಯ ಅತಿಥಿ ವರದರಾಜ್ ಎಂ ಶೆಟ್ಟಿಯವರು ಮಾತನಾಡುತ್ತಾ, ನಮ್ಮ ನಾಡಿನ ಸಂಸ್ಕೃತಿ ಸಾಂಸ್ಕೃತಿಕ ವಿಚಾರಗಳನ್ನು ಇಂದಿನ ಸ್ವತಂತ್ರ ಬದುಕನ್ನು ಆಸೆ ಪಡುವ ಜನರಿಗೆ ಪರಿಚಯಿಸುವ ಯುಎಇ ಬಂಟ್ಸ್ ನ ಶ್ರಮ ಸಾರ್ಥಕವಾಗಿದೆ. ಇಂತಹ ನಮ್ಮ ತುಳುನಾಡಿನ ವಿಚಾರಗಳನ್ನು ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಸಾರ್ಥಕ ಬದುಕು ನಡೆಸಲು ಸಾಧ್ಯ ಇದೆ. ಅದಕ್ಕಾಗಿ ಈ ರೀತಿಯ ಕಾರ್ಯಕ್ರಮಗಳನ್ನು ಯುಎಇ ಬಂಟ್ಸ್ ಹಮ್ಮಿಕೊಂಡಿರುವುದು ಸಂತಸವನ್ನುಂಟು ಮಾಡಿದೆ ಹಾಗೂ ನಿರಂತರ ಈ ರೀತಿಯ ಕಾರ್ಯಕ್ರಮಗಳು ನಡೆಯಲಿ. ಇಂತಹ ಕಾರ್ಯಕ್ರಮಗಳಿಗೆ ನನ್ನ ಸಹಕಾರ ಇದೆ ಎಂದು ಹೇಳುತ್ತಾ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು. ನಂತರ ಬಂಟ ಗಾಯಕ ಗಾಯಕಿಯರಿಂದ ಸಂಗೀತ ರಸಮಂಜರಿ ನಡೆಯಿತು.
ಯುಎಇ ಬಂಟ್ಸ್ ನ ಮಹಿಳೆಯರು ಮನೆಯಲ್ಲಿ ತಯಾರಿಸಿ ತಂದ ಆಟಿಯ ವಿಶೇಷ ಖಾದ್ಯಗಳ ಪ್ರದರ್ಶನವನ್ನು (ಆಟಿದ ತಿನಸ್) ಮುಖ್ಯ ಅತಿಥಿಗಳು ಉದ್ಘಾಟಿಸಿ ಖಾದ್ಯದ ಸವಿಯನ್ನು ಸವಿದರು. ನಂತರ ಸಾವಿರಾರು ಮಂದಿ ಬಂಟ ಬಾಂಧವರು ಊಟೋಪಚಾರದ ಮೂಲಕ ಸವಿದರು. ಖಾದ್ಯಗಳನ್ನು ತಯಾರಿಸಿ ತಂದ ಮಹಿಳೆಯರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಎಟ್ಟಿ ಚಟ್ನಿ, ಕುಡುತ ಚಟ್ನಿ, ತೊಜಂಕ್ ಬೋಲೆ ಸುಕ್ಕ, ಗೆಂಡೆದ ಅಡ್ಯ, ಮಂಜಲ್ ಇರೆತ ಅಡ್ಯ, ಬಾರೆದ ಇರೆತ ಗಟ್ಟಿ, ಪುಂಡಿ, ಕಪ್ಪ ರೊಟ್ಟಿ, ಅರೆಪು ಪುಂಡಿ, ಉರುಪೆಲ್ ಸೇಮೆದ ಅಡ್ಯ, ಪತ್ರಡ್ಯೆ, ಕೈ ಪುಂಡಿ, ಕುಂದಾಪುರ ಕೋಳಿ ತಾಲಿ, ಕೋರಿ ರಸ, ಕಟ್ಟಡ ಕೋರಿ ಸುಕ್ಕ, ಕೋರಿ ಸುಕ್ಕ, ಮೀನ್ ಪುಲಿಮುಂಚಿ, ನುಂಗೆಲ್ ಮೀನ್ ಸಾರ್, ಕುಕ್ಕು ಸಾಸೆಮಿ, ತೌತೆ ಕೊದ್ದೆಲ್, ಕುಡುತ ಸಾರ್, ಎಟ್ಟಿ ಬಸಲೆ, ಮೆನಸಕಾಯಿ, ಕುಡುತ ಸಾರ್, ಎಟ್ಟಿ ಬಸಲೆ, ಗಟ್ಟಿ, ನೀರ್ ದೋಸೆ, ರಾಗಿ ಮಣ್ಣಿ, ಮೆಂತೆದ ಗಂಜಿ, ಗೋದಿ ಪಾಯಸ, ಹೆಸರು ಬೇಳೆ ಸಾಬೂದನ್ ಪಾಯಸ, ಸ್ವೀಟ್ ಅಪ್ಪ ಇತ್ಯಾದಿ ತಿನಿಸುಗಳನ್ನು ಎಲ್ಲರೂ ಸವಿದರು.
ಕೊಟ್ಟಿಂಜ ದಿನೇಶ್ ಶೆಟ್ಟಿಯವರ ಸಂಯೋಜನೆಯಲ್ಲಿ ಮೂಡಿ ಬಂದ ಆಟಿ ಕಳಂಜನ ಕಿರು ನಾಟಕ ಬಂಟೆರ್ನ ಆಟಿಡೊಂಜಿ ದಿನ ಕಾರ್ಯಕ್ರಮಕ್ಕೆ ಹೊಸ ಮೆರುಗನ್ನು ತಂದಿತ್ತು. ತುಳುನಾಡಿನ ಗುತ್ತಿನ ಮನೆಗೆ ಆಟಿ ಕಳಂಜನ ಆಗಮನ, ಮನೆಯ ಹಿರಿಯ ಯಜಮಾನರು, ಯಜಮಾನರ ಮಗ ಸೊಸೆ ಇಬ್ಬರೂ ಮೊಮ್ಮಕ್ಕಳಿಗೆ ಆಟಿಯ ಕುರಿತು ಹಾಗೂ ಆಟಿ ಕಳಂಜನ ಬಗ್ಗೆ ತಿಳಿ ಹೇಳುವ ಕಿರು ನಾಟಕ ಒಂದು ಕ್ಷಣ ತುಳುನಾಡಿಗೆ ಹೋದ ಅನುಭವ ಕಾರ್ಯಕ್ರಮದಲ್ಲಿ ಆಯಿತು. ಈ ಕಿರು ನಾಟಕದಲ್ಲಿ ದುಬೈಯ ಹಿರಿಯ ಕಲಾವಿದರಾದ ವಾಸು ಶೆಟ್ಟಿ, ಗೋಕುಲದಾಸ್ ರೈ, ನಿಶ್ಮೀತ ಗೋಕುಲದಾಸ್ ರೈ, ಮಾಸ್ಟರ್ ಅಥರ್ವ ವಸಂತ ಶೆಟ್ಟಿ, ಕುಮಾರಿ ಪ್ರಿಷಾ ಸೀತಾರಾಮ ಶೆಟ್ಟಿ, ವಿವನ್ ಬಾಲಕೃಷ್ಣ ಶೆಟ್ಟಿ, ಸೀತಾರಾಮ ಶೆಟ್ಟಿ, ಶೈಲಜಾ ನಿತ್ಯಾನಂದ ಶೆಟ್ಟಿಯವರು ಅಭಿನಯಿಸಿದರು. ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆಯನ್ನು ಯುಎಇ ಬಂಟ್ಸ್ ನ ಪೋಷಕರಾದ ಸರ್ವೋತ್ತಮ ಶೆಟ್ಟಿಯವರು ಅಚ್ಚುಕಟ್ಟಾಗಿ ನಿರೂಪಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಕೆಲವು ವಾರಗಳ ಹಿಂದೆ ದುಡಿದ 2025 ನೇ ಸಾಲಿನ ಸಂಘಟನಾ ಸಮಿತಿಯ ಸದಸ್ಯರಾದ ದೀಪ್ತಿ ದಿನ್ ರಾಜ್ ಶೆಟ್ಟಿ, ಚೈತ್ರ ಅನುಪ್ ಶೆಟ್ಟಿ, ಪೃಥ್ವಿ ಸುಪ್ರಜ್ ಶೆಟ್ಟಿ, ರಜಿತಾ ವಸಂತ ಶೆಟ್ಟಿ, ಅಶ್ವಿನಿ ಸೀತಾರಾಮ ಶೆಟ್ಟಿ, ನಿಶ್ಮಿತಾ ಗೋಕುಲದಾಸ್ ರೈ, ಕೀರ್ತಿ ನಿತ್ಯ ಪ್ರಕಾಶ್ ಶೆಟ್ಟಿ, ಮೇಘ ಪ್ರಸನ್ನ ಶೆಟ್ಟಿ, ವಿದ್ಯಾಶ್ರಿ ಸತೀಶ್ ಹೆಗ್ಡೆ, ದೀಪಾ ಕಿರಣ್ ಶೆಟ್ಟಿ, ಲಾಸ್ಯ ಸಂಪತ್ ಶೆಟ್ಟಿ ಹಾಗೂ ವಿಶ್ವನಾಥ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಸಂತೋಷ್ ಶೆಟ್ಟಿ ಪೊಳಲಿ ಮತ್ತು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿಯವರು ವಂದಿಸಿದರು.
ಚಿತ್ರ, ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)