ಬಂಟರ ಯಾನೆ ನಾಡವರ ಸಂಘ ಬೈಂದೂರು ಇದರ ೩೦ನೇ ವಾರ್ಷಿಕ ಸಂಭ್ರಮದ ಪ್ರಯುಕ್ತ ಬಂಟರ ರಾಷ್ಟ್ರಮಟ್ಟದ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ದೇಶದ ಹಲವಾರು ಬಂಟರ ಸಂಘಗಳ ತಂಡಗಳು ಭಾಗವಹಿಸಿದ್ದ ಈ ಸ್ಪರ್ಧಾ ಕಾರ್ಯಕ್ರಮದಲ್ಲಿ ಗುರುಪುರ ಬಂಟರ ಮಾತೃ ಸಂಘವು ಅಮೋಘ ಪ್ರದರ್ಶನವನ್ನು ನೀಡಿ ಪ್ರಥಮ ಸ್ಥಾನವನ್ನು ಗಳಿಸಿ ೧,೧೦,೦೦೦/- ರೂಪಾಯಿಯನ್ನು ತನ್ನದಾಗಿಸಿಕೊಂಡಿತು.

ಮೂಡಬಿದ್ರೆ ಬಂಟರ ಸಂಘವು ದ್ವಿತೀಯ ಪ್ರಶಸ್ತಿಯನ್ನು, ಬ್ರಹ್ಮಾವರ ಬಂಟರ ಸಂಘವು ತೃತೀಯ ಪ್ರಶಸ್ತಿಯನ್ನು ಪಡೆದುಕೊಂಡಿತು. ಈ ಕಾರ್ಯಕ್ರಮದ ಪ್ರಶಸ್ತಿ ವಿತರಣೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಬೈಂದೂರು ಬಂಟರ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಸಾಲ್ಗದ್ದೆ, ಜಾಗತಿಕ ಬಂಟರ ಸಂಘದ ಕೋಶಾಧಿಕಾರಿ ಮತ್ತು ಬೈಂದೂರು ಬಂಟರ ಸಂಘದ ಪದಾಧಿಕಾರಿಗಳ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ವಿತರಿಸಲಾಯಿತು.
ಗುರುಪುರ ಬಂಟರ ಮಾತೃ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಶೆಡ್ಡೆ, ಸುದರ್ಶನ್ ಶೆಟ್ಟಿ ಪೆರ್ಮಂಕಿ, ಕಾರ್ಯದರ್ಶಿ ಜಯರಾಮ್ ರೈ ಉಳಾಯಿಬೆಟ್ಟುಗುತ್ತು, ಕೋಶಾಧಿಕಾರಿ ಸತ್ಯಾನಂದ ಶೆಟ್ಟಿ ಗುರುಪುರ, ಯುವ ವಿಭಾಗದ ಅಧ್ಯಕ್ಷರಾದ ಸಂದೀಪ್ ಆಳ್ವ, ಮಹಿಳಾ ವಿಭಾಗದ ಅಧ್ಯಕ್ಷರಾದ ಇಂದಿರಾಕ್ಷಿ ಶೆಟ್ಟಿ, ಕಿರಣ್ ಪಕ್ಕಳ ಪೆರ್ಮಂಕಿಗುತ್ತು, ದೀಪಕ್ ಶೆಟ್ಟಿ ಲಿಂಗಮಾರುಗುತ್ತು ಮತ್ತು ಪದಾಧಿಕಾರಿಗಳು ಹಾಗೂ ನೃತ್ಯ ತಂಡದ ಸದಸ್ಯರು ಪ್ರಶಸ್ತಿಯನ್ನು ಸ್ವೀಕರಿಸಿದರು. ದೀಕ್ಷಿತ್ ಪಡೀಲ್ ಮತ್ತು ತೃಷಾ ಶೆಟ್ಟಿ ನೃತ್ಯ ತಂಡವನ್ನು ಸಂಯೋಜಿಸಿ, ನಿರ್ದೇಶಿಸಿದರು.