ತುಳುವರ ಹೆಮ್ಮೆಯ ಅಂತಾರಾಷ್ಟ್ರೀಯ ಸಂಸ್ಥೆ ಅಮೆರಿಕಾದಲ್ಲಿರುವ ಆಲ್ ಅಮೆರಿಕಾ ತುಳು ಅಸೋಸಿಯೇಷನ್ ತನ್ನ ನಾಲ್ಕನೇ ಹುಟ್ಟುಹಬ್ಬವನ್ನು ತುಳುಸಿರಿ ಪರ್ಬ ಹೆಸರಲ್ಲಿ ಜುಲೈ 4,5,6 ರಂದು ಮೂರು ದಿನಗಳ ಸಂಭ್ರಮಾಚರಣೆಯಲ್ಲಿ ನಡೆಸಲಿದೆ. ಮೊದಲ ದಿನ ಜುಲೈ 4 ರಂದು ವಿಶ್ವದ ಎಲ್ಲಾ ತುಳುವರ ಸೇರುವಿಕೆಯೊಂದಿಗೆ ನಾರ್ಥ್ ಕೆರೋಲಿನದ ದಿ ಲೋಟಸ್ ಪಾರ್ಟಿ ಹಾಲ್ ಇಲ್ಲಿ ಔತಣಕ್ಕಾಗಿ ಸೇರುವುದರೊಂದಿಗೆ ಕಾರ್ಯಕ್ರಮ ವಿದ್ಯುಕ್ತವಾಗಿ ಆರಂಭವಾಗಲಿದೆ.

ಜುಲೈ 5 ರಂದು ಆಟ ಸಿರಿಮುಡಿ, ಆಟ ಸನ್ಮಾನ, ಮತ್ತು ಆಟ ಸಿರಿನುಡಿ ಪ್ರಶಸ್ತಿ ಪ್ರದಾನದೊಂದಿಗೆ ಅಲ್ಸ್ಟನ್ ರಿಡ್ಜ್ ಮಿಡ್ಲ್ ಸ್ಕೂಲ್ ಕ್ಯಾರಿ ಕೆರೋಲಿನಾ ಇಲ್ಲಿ ಆಯೋಜನೆಗೊಳ್ಳಲಿದ್ದು, ಇದರಲ್ಲಿ ಕರ್ನಾಟಕದ ವಿಧಾನಸಭಾ ಸಭಾಪತಿ ಯು.ಟಿ ಖಾದರ್, ನಿಟ್ಟೆ ವಿಶ್ವ ವಿದ್ಯಾಲಯದ ತುಳು ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಸಾಯಿಗೀತ ಹೆಗ್ಡೆ, ಕತಾರ್ ಕನ್ನಡ ಸಂಘದ ಅಧ್ಯಕ್ಷ ಎ.ಟಿ.ಎಸ್ ಸಂಸ್ಥೆಯ ಮುಖ್ಯಸ್ಥ ಡಾ| ರವಿ ಶೆಟ್ಟಿ ಮೂಡಂಬೈಲ್ ಮತ್ತು ಎಮ್ ರಿಸಲ್ಟ್ ಸಂಸ್ಥೆಯ ಸಂಸ್ಥಾಪಕ ಮುಖ್ಯಾಧಿಕಾರಿ ಶೇಖರ್ ನಾಯ್ಕ್ ಮುಖ್ಯ ಅತಿಥಿಗಳಾಗಿ ಪಾಲು ಪಡೆಯಲಿದ್ದಾರೆ. ಕಾರ್ಯಕ್ರಮದಲ್ಲಿ ವಿಶೇಷ ತುಳುನಾಡ ಖಾದ್ಯಗಳು ಮತ್ತು ನೆಲ ಸಂಸ್ಕೃತಿಯ ಮನರಂಜನಾ ಕಾರ್ಯಕ್ರಮಗಳು, ಚರ್ಚೆಗಳು ನಡೆಯಲಿವೆ.
ಜುಲೈ 6 ರಂದು ಅಂತಿಮ ದಿನದಲ್ಲಿ ವಿಶೇಷ ಮಿಲನ ಕೂಟವನ್ನು ಆಯೋಜಿಸಿರುವ ಸಂಸ್ಥೆ ಅಲ್ಲಿ ನಮ್ಮ ಬಾಲ್ಯದ ಆಟೋಟಗಳನ್ನು, ಹಾಡು ಹಸೆ ಮನರಂಜನೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು 01 ಹೈ ಹೌಸ್ ರೋಡ್ ಕೇರಿ ಎನ್.ಸಿ ಇಲ್ಲಿ ನಡೆಯಲಿದೆ. ವಿಶ್ವದ ತುಳುವರನ್ನು ಸೇರಿಸಿಕೊಂಡು ಮೊದಲ ಬಾರಿಗೆ ಆರಂಭಿಸಿರುವ ಈ ಸಿರಿಪರ್ಬ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಕಾರ್ಯಕ್ರಮದ ಮುಖ್ಯ ಕಾರ್ಯಕಾರಿ ಸಚೇತಕೆ ರಂಜನಿ ಅಸೈಗೋಳಿ, ಅಧ್ಯಕ್ಷೆ ಶ್ರೀವಲ್ಲಿ ರೈ ಮಾರ್ಟೆಲ್, ಸಂಸ್ಥಾಪಕ ಅಧ್ಯಕ್ಷ ಭಾಸ್ಕರ್ ಶೇರಿಗಾರ್ ಮತ್ತು ಆಟ ಸಂಸ್ಥೆಯ ಸರ್ವ ಸದಸ್ಯರು ಆದರಪೂರ್ವಕವಾಗಿ ಭಿನ್ನವಿಸಿಕೊಂಡಿದ್ದಾರೆ.