ಅಗತ್ಯ ಇದ್ದವರಿಗೆ ಸೇವೆ ಮಾಡುವುದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ ಹಾಗೂ ನಾವು ಈ ಸಮಾಜಕ್ಕೆ ಏನನ್ನಾದರೂ ನೀಡಿದ್ದೇವೆ ಎನ್ನುವ ಆತ್ಮ ತೃಪ್ತಿ ಇರುತ್ತದೆ ಎಂದು ಜಿಲ್ಲೆ-317ಸಿ, ಪ್ರಾಂತ್ಯ 5 ರ ಪ್ರಥಮ ಮಹಿಳೆ ಅಂಪಾರು ಅರುಣಾ ಸೋಮನಾಥ ಹೆಗ್ಡೆ ಹೇಳಿದರು. ಅವರು ಲಯನ್ಸ್ ಇಂಟರ್ನ್ಯಾಷನಲ್, ಜಿಲ್ಲೆ-317ಸಿ, ಪ್ರಾಂತ್ಯ 5ರ ಲಯನ್ಸ್ ರಿಜನ್ ಮೀಟ್ ‘ಅದ್ವಿತಾ-2025’ ವನ್ನು ಉಪ್ಲಾಡಿ ಹೊರ್ ಮಕ್ಲು ಜಡ್ಡಿನ ಮೈದಾನದಲ್ಲಿ ಅದ್ವಿತಾ ಜತೆಗೂಡಿ ಉದ್ಘಾಟಿಸಿ ಮಾತನಾಡಿದರು.
ಪ್ರಾಂತ್ಯಾಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಹೊಸನಗರ ಕೊಡಚಾದ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಕೆ. ಶ್ರೀಪತಿ ಹಳಗುಂದ, ಲಯನ್ಸ್ ಪ್ರಥಮ ಉಪ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್, ದ್ವಿತೀಯ ಉಪ ಜಿಲ್ಲಾ ಗವರ್ನರ್ ರಾಜೀವ್ ಕೋಟ್ಯಾನ್, ಪಿ.ಡಿ.ಜಿ ಜಯಕರ್ ಶೆಟ್ಟಿ ಕುಂದಾಪುರ, ಎಲ್.ಸಿ.ಐ.ಎಫ್. ಕೋ- ಆರ್ಡಿನೇಟರ್ ಹರಿಪ್ರಸಾದ್ ರೈ, ರೀಜನ್ ಸೆಕ್ರೆಟರಿ ಕಬೈಲ್ ಆನಂದ ಶೆಟ್ಟಿ, ಹೋಸ್ಟ್ ಕ್ಲಬ್ ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ಅಧ್ಯಕ್ಷ ಬನ್ನಾಡಿ ಪ್ರವೀಣ್ ಹೆಗ್ಡೆ, ಜಿಲ್ಲೆಯ ಇತರ ರೀಜನ್ ಗಳ ರೀಜನ್ ಚೇರ್ಮನ್ ಗಳಾದ ವಿ.ಎಸ್. ಉಮ್ಮರ್, ವರುಣ್ ಕೆ. ಶೆಟ್ಟಿ, ಮೆಲ್ವಿನ್ ಎಂ. ಅರನ್ಹಾ, ಬೇಳಂಜೆ ಹರೀಶ್ ಪೂಜಾರಿ, ಜಗದೀಶ್ ಶೆಟ್ಟಿ ಉಪ್ಪುಂದ, ಬಿ.ಎಸ್. ಮಹೇಶ್ ಕುಮಾರ್, ಎಸ್. ಜೆ. ಸತೀಶ್, ವೈ. ಬಿ. ಸತೀಶ್, ಹೆಚ್ ಬಾಲಕೃಷ್ಣ ಶೆಟ್ಟಿ ಹಂಗಳೂರು, ವಸಂತ ಶೆಟ್ಟಿ ಬೆಳ್ವೆ, ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ಕಾರ್ಯದರ್ಶಿ ಬನ್ನಾಡಿ ಆಶಿತ್ ಕುಮಾರ್ ಶೆಟ್ಟಿ, ಮಾಜಿ ಲಯನ್ಸ್ ಜಿಲ್ಲಾ ಗವರ್ನರ್ ಗಳಾದ ಎನ್.ಎಂ.ಹೆಗ್ಡೆ, ವಿಶ್ವನಾಥ ಶೆಟ್ಟಿ ನೇರಿ ಕರ್ನೆಲಿಯೊ, ಬಸ್ರೂರು ರಾಜೀವ್ ಶೆಟ್ಟಿ ವಿ. ಜಿ ಶೆಟ್ಟಿ ಉಪಸ್ಥಿತರಿದ್ದರು.
ಬನ್ನಾಡಿ ಗ್ರಾಮದ ಉಪ್ಲಾಡಿಯ ಸೇತುವೆ ಬಳಿ ನಿರ್ಮಿಸಿದ ‘ಲಯನ್ಸ್ ಬಸ್ ತಂಗುದಾಣ’ ಸೇರಿ ಎರಡು ಲಕ್ಷ ರೂಪಾಯಿಗೂ ಅಧಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಪ್ರೊ. ಜಿ. ಬಾಲಕೃಷ್ಣ ಶೆಟ್ಟಿ ರಾಷ್ಟ್ರಧ್ವಜ ವೇದಿಕೆಗೆ ತಂದರು. ರೀಜನ್ ಮೀಟ್ ಕಾರ್ಯಕ್ರಮದ ಕೋಶಾಧಿಕಾರಿ ಕೋಟೇಶ್ವರ ಲಯನ್ಸ್ ಕ್ಲಬ್ ನ ಏಕನಾಥ ಬೋಳಾರ್ ಧ್ವಜವಂದನೆ ಮಾಡಿ, ರೀಜನ್ ಮೀಟ್ ಮುಖ್ಯ ಕಾರ್ಯನಿರ್ವಾಹಕ ಮೊಳಹಳ್ಳಿ ಶಿವಶಾಂತಿ ಲಯನ್ಸ್ ಕ್ಲಬ್ ನ ದೀನ್ ಪಾಲ್ ಶೆಟ್ಟಿ ಲಯನ್ ಕೋಡ್ ಆಫ್ ಎಥಿಕ್ಸ್ ವಾಚಿಸಿ, ರಿಜನ್ ಮೀಟ್ ಮುಖ್ಯ ಕಾರ್ಯನಿರ್ವಾಹಕ ಕೋಟೇಶ್ವರ ಲಯನ್ಸ್ ಕ್ಲಬ್ ನ ದಿನಕರ್ ಶೆಟ್ಟಿ ಎಂ. ಮುಖ್ಯ ಅತಿಥಿಗಳನ್ನು ಪರಿಚಯಿಸಿ, ರೀಜನ್ ಮೀಟ್ ಕಮಿಟಿಯ ರಿಜಿಸ್ಟ್ರೇಷನ್ ಕಮಿಟಿ ಅಧ್ಯಕ್ಷ ಪ್ರೊ. ಕಲ್ಕಟ್ಟೆ ಚಂದ್ರಶೇಖರ್ ಶೆಟ್ಟಿ ರಿಜಿಸ್ಟ್ರೇಷನ್ ವಿವರ ನೀಡಿ, ವಲಯಾಧ್ಯಕ್ಷ ತೆಕ್ಕಟ್ಟೆ ಲಯನ್ಸ್ ಕ್ಲಬ್ ನ ಧರ್ಮರಾಜ್ ಮುದಲಿಯಾರ್ ರೆಸಲ್ಯೂಶನ್ ಆಫ್ ಅಪ್ರಿಸೀಯೇಷನ್ ಟೂ ರೀಸನ್ ಚೇರ್ ಪರ್ಸನ್, ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ಮಾಜಿ ಅಧ್ಯಕ್ಷ ಸುರೇಂದ್ರ ಶೆಟ್ಟಿ ಕೊಮೆ ರೆಸಲ್ಯೂಷನ್ ಆಫ್ ಅಪ್ರಿಸಿಯೇಶನ್ ಟೂ ರೀಸನ್ ಮೀಟ್ ಕಮಿಟಿ, ಕುಂದಾಪುರ ಅಮೃತಧಾರ ಲಯನ್ಸ್ ನ ಸರಸ್ವತಿ ಪುತ್ರನ್ ರೆಸಲ್ಯೂಷನ್ ಆಫ್ ಆಪ್ರಿಸಿಯೇಶನ್ ಟೂ ಹೋಸ್ಟ್ ಕ್ಲಬ್ ಅನ್ನು ವಾಚಿಸಿದರು. ರಿಜನ್ ಮೀಟ್ ಕಮಿಟಿಯ ಚೇರ್ಮನ್ ಜಿಲ್ಲಾ ಅಂಬಾಸಿಡರ್ ಅರುಣ್ ಕುಮಾರ್ ಹೆಗ್ಡೆ ಪ್ರಸ್ತಾವಿಸಿ, ಸ್ವಾಗತಿಸಿ, ರೀಜನ್ ಮೀಟ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಕೆದೂರು ಸೀತಾರಾಮ ಶೆಟ್ಟಿ ವಂದಿಸಿ, ಅಕ್ಷಯ್ ಹೆಗ್ಡೆ ಮೊಳಹಳ್ಳಿ ನಿರೂಪಿಸಿದರು.
