ಗಮ್ಮತ್ ಕಲಾವಿದೆರ್ ದುಬೈ ವತಿಯಿಂದ ಸುರಕ್ಷಾ ಸೇವಾಶ್ರಮಕ್ಕೆ ಸುಸಜ್ಜಿತವಾದ ಪಾಕಶಾಲೆಯನ್ನು ನಿರ್ಮಿಸಿ ಕೊಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೇಮಾರು ಈಶ ವಿಠಲದಾಸ ಸ್ವಾಮೀಜಿ ದೇವರಿಗೆ ಕೊಟ್ಟ ನೈವೇದ್ಯ ದೇವರಿಗೆ ತಲುಪುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ಬಡವರಿಗೆ ಕೊಟ್ಟ ಸಹಾಯ ದೇವರಿಗೆ ತಲುಪುತ್ತದೆ ಎಂದು ಹೇಳಿದರು.
ದೇವರು ಇರುವಾಗ ಯಾರೂ ಅನಾಥರಲ್ಲ, ನಾವು ಬಂದದ್ದು ಒಬ್ಬರೇ ಹೋಗುವುದು ಒಬ್ಬರೇ. ಭೂಮಿಗೆ ಬಂದಿರುವಾಗ ಯಾರು ನಮ್ಮೊಂದಿಗೆ ಇದ್ದಾರೆ ಎನ್ನುವುದು ಮುಖ್ಯವಲ್ಲ. ದೇವರೊಂದಿಗೆ ನಾವಿದ್ದೇವೆ ಎಂಬುದು ಮುಖ್ಯ ಎಂದು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕರಾದ ವಿಶ್ವನಾಥ್ ಶೆಟ್ಟಿ ದುಬೈ ಗಮ್ಮತ್ ಕಲಾವಿದೆರ್ UAE ಇದರ ಕುರಿತು ವಿವರಿಸಿದರು. ಅರುಣ್ ಶೆಟ್ಟಿ ಮಂಗಳೂರು, ಸತೀಶ್ ಹೆಗ್ಡೆ ದುಬೈ, ಆಯಿಷಾ ಬಾನು, ಅಮ್ಮನ ನೆರವು ಟ್ರಸ್ಟ್ ನ ಅವಿನಾಶ್ ಜಿ ಶೆಟ್ಟಿ ಉಪಸ್ಥಿತರಿದ್ದರು.