ಮೈಸೂರು ಜ್ಞಾನ ಸರೋವರ ಅಂತರರಾಷ್ಟ್ರೀಯ ವಸತಿ ಶಾಲೆಯಲ್ಲಿ ದಿನಾಂಕ 05/06/2025 ರಂದು 54 ನೇಯ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಶಾಲೆಯ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ಪವನ್ ಕುಮಾರ್ ಶೆಟ್ಟಿ ಅವರು ವಿಶ್ವ ಪರಿಸರ ದಿನಾಚರಣೆಯ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಟ್ಟರು. ಅಲ್ಲದೇ ಪರಿಸರದ ಸಂರಕ್ಷಣೆಗೆ ಹೆಚ್ಚಿನ ಕಾಣಿಕೆಯನ್ನು ನೀಡಿದ ಸಾಲುಮರದ ತಿಮ್ಮಕ್ಕ, ಸಲೀಂ ಅಲಿ ಇವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಗನ್ನಾಥ ವೆಂಕಟರಾಮಯ್ಯ ರವರು, ಪರಿಸರವನ್ನು ನಾಶ ಮಾಡುತ್ತಾ ಹೋದರೆ ಮುಂದಿನ 54 ವರ್ಷಕ್ಕೆ ಜಗತ್ತು ಹೇಗಿರುತ್ತದೆ ಎಂಬುದನ್ನು ಕೆಲವು ಉದಾಹರಣೆಗಳ ಮೂಲಕ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು. ವಿಜ್ಞಾನ ಎಂಬುದು ನಿರಂತರ ಸತ್ಯ. ಪರಿಸರದಿಂದ ನಾವು ಕಲಿಯಬೇಕಾದದ್ದು ಬಹಳ ಇದೆ. ಹಾಗೆ ನಾವು ಸರಳವಾಗಿ ಬದುಕುವುದರ ಜೊತೆಗೆ ನಾವು ಮಾಡಿದ ಕೆಲಸವನ್ನು ಇತರರು ನೆನಪಿನಲ್ಲಿ ಇಟ್ಟುಕೊಳ್ಳುವ ರೀತಿ ಬಾಳಬೇಕು. ವ್ಯಕ್ತಿಯು ಯಾವಾಗಲೂ ಏಕಾಂಗಿಯಾಗಿರದೆ ಯಾವುದಾದರೂ ಒಂದು ಕೆಲಸಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು. ಆ ರೀತಿ ತೊಡಗಿದಾಗ ಮಾಡುವ ಕೆಲಸದಲ್ಲಿ ಏನಾದರೂ ತಪ್ಪಾದರೆ ಅದನ್ನು ತಿಳಿದುಕೊಂಡು, ಮುಂದೆ ಏನು ಮಾಡಬೇಕು ಎಂಬುದನ್ನು ಯೋಚಿಸಬೇಕು. ಅದನ್ನು ಬಿಟ್ಟು ಏನೂ ಕೆಲಸವನ್ನು ಮಾಡದೆ ಇರುವುದು ತಪ್ಪು ಎಂದು ಹೇಳಿದರು.ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮಕ್ಕಳು ವಿವಿಧ ಭಾಷೆಗಳಲ್ಲಿ ಭಾಷಣಗಳನ್ನು ನೀಡಿದರು ಹಾಗೂ ತಾವೇ ಸ್ವತಃ ತಯಾರಿಸಿದ ಸಾಬೂನುಗಳು, ಗ್ರೀಟಿಂಗ್ ಕಾರ್ಡ್ ಹಾಗೂ ಸೀಡ್ಸ್ ಬಾಲ್ ಗಳನ್ನು ಪ್ರದರ್ಶನದಲ್ಲಿ ಇಡಲಾಗಿತ್ತು. ಜೊತೆಗೆ ಪರಿಸರವನ್ನು ಉಳಿಸಿ ಎನ್ನುವ ಘೋಷ ವಾಕ್ಯಗಳೊಂದಿಗೆ ಸಸಿ ನೆಡುವ ಕಾರ್ಯಕ್ರಮವನ್ನು ಸಹ ಕೈಗೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿಯರಾದ ಶ್ರೀಮತಿ ಸುಖಲತ ಎಸ್ ಶೆಟ್ಟಿ, ಪ್ರಾಂಶುಪಾಲರಾದ ವಿಶ್ವನಾಥ್ ಪಾಂಡೆ, ಶಿಪಾವೋ ಫಾರ್ಮಾ ಕಾರ್ಯ ನಿರ್ವಹಣಾಧಿಕಾರಿಗಳಾದ ಶ್ರೀ ವಿಜಯಕುಮಾರ್ ಶೆಟ್ಟಿ, ಉಪ ಪ್ರಾಂಶುಪಾಲರುಗಳಾದ ಶ್ರೀ ದೊಡ್ಡಬಸಪ್ಪ ಹಾಗೂ ಕುಮಾರಿ ಪಲ್ಲವಿ ಅವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
Previous Articleಆಳ್ವಾಸ್ ಪದವಿಪೂರ್ವ ಕಾಲೇಜು: ನೀಟ್ 2024ರಲ್ಲಿ ಸಾರ್ವಕಾಲಿಕ ಸಾಧನೆ
Next Article ಪರಿಸರ ಸಂರಕ್ಷಣೆ ನಮ್ಮ ಆದ್ಯ ಹೊಣೆ