ಕಾವೂರು ಬೊಂದೇಲ್ ಮುಖ್ಯ ರಸ್ತೆಯ ಮೆಸ್ಕಾಂ ಕಚೇರಿಯ ಹಿಂಬದಿ ಇತ್ತೀಚೆಗೆ ಉದ್ಘಾಟನೆಗೊಂಡ ಗಿರೀಶ್ ಎಂ. ಶೆಟ್ಟಿ ಕಟೀಲು ಮಾಲಕತ್ವದ “ಶ್ರೀ ಹಿಲ್ ಸೈಡ್” ವಸತಿ ಸಂಕೀರ್ಣಕ್ಕೆ ಖ್ಯಾತ ಚಲನಚಿತ್ರ ನಟ ಸುದೀಪ್ ಅವರು ಆದಿತ್ಯವಾರ ಮಧ್ಯಾಹ್ನ ಭೇಟಿ ನೀಡಿದರು. ಸುಮಾರು ಎರಡು ಗಂಟೆಗಳ ಕಾಲ ಹಿಲ್ ಸೈಡ್ ಸಂಕೀರ್ಣದಲ್ಲಿ ವಿಶ್ರಾಂತಿ ಪಡೆದು, ವಸತಿ ಸಂಕೀರ್ಣದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾವೂರಿನ ಸುಂದರ ತಾಣದಲ್ಲಿ ಶ್ರೀ ಹಿಲ್ ಸೈಡ್ ನಿರ್ಮಾಣಗೊಂಡಿದ್ದು ಪೀಠೋಪಕರಣ, ಇಂಟೀರಿಯರ್, ವಿನ್ಯಾಸ, ವಾಸ್ತು ಶಿಲ್ಪದ ಬಗ್ಗೆ ಸುದೀಪ್ ಆಸಕ್ತಿಯಿಂದ ಕೇಳಿ ತಿಳಿದುಕೊಂಡರು. ಗಿರೀಶ್ ಶೆಟ್ಟಿ ಅವರು ವಸತಿ ಸಂಕೀರ್ಣದ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮುಂಬಯಿ ಉದ್ಯಮಿ ಆದರ್ಶ್ ಶೆಟ್ಟಿ ಹಾಲಾಡಿ ಜೊತೆಗಿದ್ದರು.