ಬ್ರಹ್ಮಾವರ ಮೇ 25: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಸಂಸ್ಥೆಯ ಶಿಕ್ಷಕವೃಂದ ಹಾಗೂ ಪೋಷಕರಿಗೆ ಮಕ್ಕಳ ಸುರಕ್ಷತೆ ಮತ್ತು ಯೋಗಕ್ಷೇಮದ ಕುರಿತು ಒರಿಯಂಟೇಶನ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಿಎಸಿಎನ ರಾಯಭಾರಿಗಳು ಕುಮಾರಿ ಅಬಿಧಾ ಹಾಗೂ ಕುಮಾರಿ ಸಿರೀನಾ ಸ್ಕರಿಯಾ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾಹಿತಿ ನೀಡಿದರು.
ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ಮಕ್ಕಳು ದೇವರ ಅಮೂಲ್ಯ ಕೊಡುಗೆ, ಅವರು ಮುಗ್ಧರಾಗಿದ್ದು, ಅವರಿಗೆ ಉತ್ತಮ ಮೌಲ್ಯ ಶಿಕ್ಷಣದ ಜೊತೆಗೆ ಬಾಲ್ಯದಲ್ಲಿ ಎದುರಾಗುವ ಕಿರುಕುಳ, ದೌರ್ಜನ್ಯವನ್ನು ಗುರುತಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ಕೌಶಲ್ಯ ಜ್ಞಾನವನ್ನು ಪೋಷಕರು ಮತ್ತು ಶಿಕ್ಷಕರು ನೀಡಬೇಕೆಂದರು. ಶಾಲಾ
ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿಯವರು ಮಾತನಾಡಿ ಜಿ ಎಮ್ ಮೇಲೆ ನಂಬಿಕೆಯಿಟ್ಟು ನಿಮ್ಮ ಮಕ್ಕಳನ್ನು ಇಲ್ಲಿಗೆ ಸೇರಿಸಿದ್ದೀರಿ, ಅವರ ಸಂಪೂರ್ಣ ಜವಾಬ್ದಾರಿ ನಮ್ಮದು. ಈ ವರ್ಷ ಶಾಲೆ 20ನೇ ಸಂಭ್ರಮವನ್ನು ಆಚರಿಸುತ್ತಿದ್ದು ಅನೇಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಇದರ ಯಶಸ್ವಿಗೆ ನಿಮ್ಮೆಲ್ಲರ ಸಹಕಾರ ಮುಖ್ಯ ಎಂದರು. ಪೋಷಕರು ಮತ್ತು ಶಿಕ್ಷಕರಿಗೆ ಮಕ್ಕಳ ಶಿಕ್ಷಣ ಶಾಸ್ತ್ರ, ಮೌಲ್ಯ ಶಿಕ್ಷಣ, ಹದಿ ಹರೆಯದ ಸಮಸ್ಯೆಗಳು, ಜೀವನ ಕೌಶಲ್ಯ, ಲಿಂಗ ಸಮಾನತೆ, ಮಕ್ಕಳ ಲೈಂಗಿಕ ದೌರ್ಜನ್ಯ, ಆರೋಗ್ಯ ಮತ್ತು ನೈರ್ಮಲ್ಯ ಮುಂತಾದ ವಿಷಯಗಳ ಕುರಿತು ಮಾಹಿತಿಯನ್ನು ನೀಡಲಾಯಿತು. ಶಾಲಾ ಬಸ್ ಚಾಲಕರಿಗೆ, ನಿರ್ವಾಹಕರಿಗೆ ಮಕ್ಕಳ ಆರೈಕೆ ಮತ್ತು ರಕ್ಷಣಾ ಕಾಯ್ದೆ, ಫೆÇೀಕ್ಸೋ ಕಾಯ್ದೆಯ ಕುರಿತು ಮಾಹಿತಿಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ನಾಗರಾಜ ಸೋಮಯಾಜಿ, ಉಪಾಧ್ಯಕ್ಷೆ ಶ್ರೀಮತಿ ಪ್ರೀತಿ ಶೆಣೈ, ಪೆÇೀಷಕರು, ಶಿಕ್ಷಕರು ಹಾಗೂ ಸಹ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.