ಮೂಡುಬಿದಿರೆ: ಸುಸ್ಥಿರ ತಂತ್ರಜ್ಞಾನದಲ್ಲಿ ಮಹತ್ತರ ಸಾಧನೆ ಮಾಡಿದ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು, ‘ಎ ಪ್ರೊಸೆಸ್ ಫಾರ್ ಫ್ಯಾಬ್ರಿಕೇಷನ್ ಆಫ್ ಪಿ(ವಿಡಿಎಫ್-ಟಿಆರ್ಎಫ್ಇ) ಪೈಸೊಲೆಕ್ಟ್ರಿಕ್ ಬೀಮ್ಸ್ ಆಂಡ್ ಕ್ಯಾಂಟಿಲೆವರ್ಸ್ ಯಾಸ್ ವೈಬ್ರೇಷನ್ ಸೆನ್ಸಾರ್ಸ್ ಆಂಡ್ ಎನರ್ಜಿ ಹಾರ್ವೆಸ್ಟರ್ಸ್’ ಗೆ ಪೇಟೆಂಟ್ ಸಂಖ್ಯೆ 525988 ಪಡೆದುಕೊಂಡಿದೆ. ಆ ಮೂಲಕ ಸುಸ್ಥಿರ ಇಂಧನ ಪರಿಹಾರ ಮತ್ತು ರಚನಾತ್ಮಕ ಉಸ್ತುವಾರಿ ತಂತ್ರಗಳಲ್ಲಿ ಮುಂದಡಿ ಇಟ್ಟಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು, ಸಂಶೋಧನಾ ಡೀನ್ ಡಾ. ರಿಚರ್ಡ್
ಪಿಂಟೊ ಅವರ ನಾಯಕತ್ವದಲ್ಲಿ ಈ ಸಾಧನೆ ಮಾಡಿದೆ. ಈ ಸಾಧನೆಯು ಕೈಗಾರಿಕೆ ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸುವಲ್ಲಿ ಕ್ರಾಂತಿಕಾರಿಯಾಗಿದೆ. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಡಾ. ರಶ್ಮಿ ಕೆ.ಆರ್., ಡಾ. ಜಯರಾಮ ಎ., ಐಐಟಿ ಬಾಂಬೆಯ ಡಾ. ಸಿದ್ಧಾರ್ಥ ಪಿ. ದತ್ತಗುಪ್ತ ಮತ್ತು ಡಾ. ಗಣೇಶ್ ಪ್ರಭು(ಟಿಐಎಫ್ ಆರ್, ಮುಂಬೈ) ಸಹಯೋಗದಲ್ಲಿ ಡಾ. ರಿಚರ್ಡ್ ಪಿಂಟೋ ಅವರ ಸಹಕಾರದಲ್ಲಿ ಅಭಿವೃದ್ಧಿ ಹೊಂದಿದ ಪ್ರಮುಖ ತಂತ್ರಜ್ಞಾನವಾಗಿದೆ.
ಈ ಪೇಟೆಂಟ್ ಪ್ರಕ್ರಿಯೆಯು ಕಟ್ಟಡಗಳು ಮತ್ತು ಮೂಲಸೌಕರ್ಯಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸುವುದರಿಂದ ಹಿಡಿದು
ದೇಹದ ಚಲನೆಯನ್ನು ಬಳಸಿಕೊಂಡು ಪೊರ್ಟೆಬಲ್ ಎಲೆಕ್ಟ್ರಾನಿಕ್ ಸಾಧನಗಳಿಗೆ ಶಕ್ತಿ ತುಂಬುವವರೆಗೆ ವ್ಯಾಪಕವಾದ ಸಾಮಾಜಿಕ ಆಯಾಮ ಹೊಂದಿದೆ. ಸುಸ್ಥಿರತೆ ಮತ್ತು ಇಂಧನ ದಕ್ಷತೆಯ ಮೇಲಿನ ಅತ್ಯುತ್ತಮ ಪರಿಣಾಮವು
ಸಹಯೋಗದ ಸಂಶೋಧನೆಯ ಹೆಜ್ಜೆಗಳ ಮೂಲಕ ಧನಾತ್ಮಕ ಬದಲಾವಣೆಗೆ ಪುಷ್ಠಿ ನೀಡಿದೆ. ಈ ಸಂಶೋಧನೆಯ ಶ್ರೇಷ್ಠತೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ,ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮತ್ತು ಪ್ರಾಂಶುಪಾಲ ಡಾ. ಪೀಟರ್ ಫೆನಾರ್ಂಡಿಸ್ ಸೇರಿದಂತೆ ಪ್ರಮುಖರ ಬೆಂಬಲ ಮತ್ತು ಪೆÇ್ರೀತ್ಸಾಹವು ಪ್ರಮುಖವಾಗಿದೆ.
ಇದರಿಂದಾಗಿ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ವೈಜ್ಞಾನಿಕ ಆವಿಷ್ಕಾರದ ಮೇರೆ ವಿಸ್ತರಿಸುವುದಲ್ಲದೇ, ಜಾಗತಿಕ ಸವಾಲುಗಳನ್ನು ಪರಿಹರಿಸಲು ಉತ್ಸುಕವಾಗಿದೆ. ಶಿಕ್ಷಣ ಮತ್ತು ಕೈಗಾರಿಕೆಗಳನ್ನು ಬೆಸೆಯುವ ಮೂಲಕ ಉತ್ತಮ ಸಾಮಾಜಿಕ ಪರಿಣಾಮ ಹಾಗೂ ಸುಸ್ಥಿರ ಭವಿಷ್ಯಕ್ಕೆ ಮಾರ್ಗದರ್ಶಿಯಾಗಿದೆ.