ಗೋವಾ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಉದ್ಯಮಿ, ಸಮಾಜಸೇವಕ ಸದಾಶಿವ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗೋವಾ ಮಡಗಾವ್ ಲಕ್ಷ್ಮಿ ಎಂಪಾಯರ್ ಹೋಟೆಲಿನ ಮಾಲಿಕರಾಗಿರುವ ಸದಾಶಿವ ಶೆಟ್ಟಿಯವರು ಗೋವಾ ಕನ್ನಡ ಸಾಹಿತ್ಯ ಪರಿಷತ್ತಿನ ಸಲಹಾ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ವಿವಿಧ ಸಮಾಜಮುಖಿ ಸೇವೆಯಿಂದ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.