ನಮ್ಮ ಸಮಾಜದ ಕಡು ಬಡತನದಲ್ಲಿರುವ 50 ಮಂದಿ ವಿದ್ಯಾರ್ಥಿಗಳಿಗೆ 5 ಲಕ್ಷ ರೂಪಾಯಿಗಳ ವಿದ್ಯಾರ್ಥಿವೇತನವನ್ನು ಲೈಫ್ ಲೈನ್ ಫೀಡ್ಸ್ ನ ಸಿಎಂಡಿ ಕಿಶೋರ್ ಕುಮಾರ್ ಹೆಗ್ಡೆ, ಇಮೇಜ್ ಲೇಬಲ್ಸ್ ನ ಸಿಎಂಡಿ ಸುಜನ್ ಶೆಟ್ಟಿ ನೈಲಾಡಿ ಹಾಗೂ ಟೈಮ್ ಆಂಡ್ ಸ್ಪೇಸ್ ನ ಸಿಎಂಡಿ ರವಿ ಶೆಟ್ಟಿಯವರ ಸಹಕಾರದೊಂದಿಗೆ ಸಂಸ್ಥೆಯ ಕಚೇರಿಯಲ್ಲಿ ಜುಲೈ 30 ರಂದು ಸರಳವಾಗಿ ವಿತರಿಸಲಾಯಿತು.
ಬಂಟ್ಸ್ ನೌ ಮಾಧ್ಯಮ ಸಂಸ್ಥೆಯು ಯಶಸ್ವೀ 15 ವರ್ಷಗಳನ್ನು ಪೂರೈಸಿದ್ದು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿವೆ. ಸುಮಾರು 500 ಕ್ಕೂ ಮಿಕ್ಕಿ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗವನ್ನು ದೊರಕಿಸಿಕೊಟ್ಟಿದೆ. 8 ಮಂದಿ ಸಹೋದರಿಯರಿಗೆ ಕರಿಮಣಿಯನ್ನು ಕೊಟ್ಟಿದೆ. 15 ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಹೊತ್ತುಕೊಂಡು ದತ್ತು ತೆಗೆದುಕೊಂಡಿದೆ.