Author: admin
ರಾಷ್ಟ್ರೀಯ ಹೆದ್ದಾರಿ ಮೇಲ್ಪದರವನ್ನು ಅಗೆದು ಮರು ಡಾಮರೀಕರಣಗೊಳಿಸುವ ಕಾಮಗಾರಿ ಹಲವು ತಿಂಗಳುಗಳಿಂದ ಆಮೆಗತಿಯಲ್ಲಿ ಸಾಗುತ್ತಿದ್ದು, ಹಲವು ಅಪಘಾತಗಳು ಸಂಭವಿಸಿದರೂ ಇಲಾಖೆಯಾಗಲಿ, ಗುತ್ತಿಗೆದಾರರಾಗಲಿ ಎಚ್ಚೆತ್ತುಕೊಂಡಿಲ್ಲ. ಮೂಲ್ಕಿ ಸೇತುವೆ ಬಳಿ ಎರಡು ಜೀವ ಹೋದ ಬಳಿಕವೂ ಯಾರೂ ಎಚ್ಚೆತ್ತುಕೊಂಡಿಲ್ಲ. ನಿಮ್ಮ ಜೀವಕ್ಕೆ ನೀವೇ ಜವಾಬ್ದಾರರು ಎಂಬಂತೆ ಎಲ್ಲರೂ ನುಣುಚಿಕೊಳ್ಳುತ್ತಿದ್ದಾರೆ. ಹೆಜಮಾಡಿ ಸಮೀಪದಿಂದ ಮೂಲ್ಕಿಯವರೆಗೆ ರಾ.ಹೆ.ಯನ್ನು ದೊರಗುಗೊಳಿಸಿ ಹಾಗೆಯೇ ಬಿಡಲಾಗಿದೆ. ಇದರ ಮೇಲೆಯೇ ವಾಹನ ಸಂಚರಿಸ ಬೇಕಾಗಿದೆ. ಚತುಃಶ್ಚಕ್ರ ವಾಹನಗಳಿಗೆ ಇದರಿಂದ ಹೆಚ್ಚಿನ ಅಪಾಯವಾಗದಿದ್ದರೂ ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿಡಿದುಕೊಂಡು ಸಾಗಬೇಕಾಗಿದೆ. ರಸ್ತೆ ಅಭಿವೃದ್ಧಿ ಆಗಬೇಕಿದ್ದರೂ ಈ ಸಂದರ್ಭ ತೆಗೆದುಕೊಳ್ಳಬೇಕಾಗಿರುವ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಇಲ್ಲಿ ತೆಗೆದುಕೊಂಡಿಲ್ಲ. ರಸ್ತೆ ದೊರಗುಗೊಳಿಸಿರುವಲ್ಲಿ ನಿಧಾನವಾಗಿ ಸಾಗಬೇಕು. ಆದರೆ ಇಲ್ಲಿ ಎಲ್ಲಿಯೂ ಎಚ್ಚರಿಕೆಯ ಸೂಚನ ಫಲಕ ಹಾಕಿಲ್ಲ. ಆದುದರಿಂದ ಸವಾರರಿಗೆ ತಾವೊಂದು ಇಂತಹ ಅಪಾಯಕ್ಕೆ ಎದುರಾಗುತ್ತಿದ್ದೇವೆ ಎಂಬ ಯಾವ ಸುಳಿವೂ ಇಲ್ಲದೇ ನೇರಾನೇರ ಬೆಂಕಿಗೆ ಬಿದ್ದಂತೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ದೊರಗು ಮಾಡಿರುವ ರಸ್ತೆಯಲ್ಲಿ ತೊಳಲಾಡುವ ವಾಹನವನ್ನು ನಿಯಂತ್ರಿಸಿಕೊಳ್ಳಲು…
ಅವಧೂತ ಪರಂಪರೆಯ ಪ್ರಮುಖ ಕೇಂದ್ರ ನಿತ್ಯಾನಂದ ಮಂದಿರ ಮಠ ಜೀರ್ಣೋದ್ಧಾರ ಮತ್ತು ನೂತನ ಬಿಂಬ ಪ್ರತಿಷ್ಠೆ ಕಾರ್ಯಕ್ರಮ ಜ. 15 ಮತ್ತು 16ರಂದು ನಡೆಯಲಿದೆ ಎಂದು ಮಂದಿರದ ಅಧ್ಯಕ್ಷ ಕೆ. ದಿವಾಕರ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 61 ವರ್ಷಗಳ ಹಿಂದೆ ಮಂದಿರವು ಸಾಧ್ವಿ ಸೀತಾ ಶೆಟ್ಟಿ ಅವರ ಮುಂದಾಳತ್ವದಲ್ಲಿ ನಿರ್ಮಾಣವಾಗಿತ್ತು. ನಿರಂತರ ಭಜನೆ, ಸತ್ಸಂಗ, ನಿತ್ಯ ಪೂಜೆ, ಬಾಲ ಭೋಜನ, ಸಾಧುಸಂತರಿಗೆ ಆಶ್ರಯ, ದಾನಗಳಿಂದಾಗಿ ನಗರದಲ್ಲಿ ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟಿ ಸಿದ್ದ ಈ ಮಂದಿರ ಸಾಕಷ್ಟು ಶಿಥಿಲಾವಸ್ಥೆಯಲ್ಲಿದ್ದಾಗ ಮುಂಬಯಿ ಮೂಲದ ಉದ್ಯಮಿ ಕೆ.ಕೆ. ಆವರ್ಸೆಕರ್ ಸಹಕಾರದಲ್ಲಿ 4 ಕೋ.ರೂ. ವೆಚ್ಚ ದಲ್ಲಿ ಮರು ನಿರ್ಮಾಣಗೊಂಡಿದೆ. ಮಂದಿರದ ವಾಸ್ತು ಶೈಲಿ ಗಣೇಶ ಪುರಿಯಲ್ಲಿರುವ ನಿತ್ಯಾನಂದ ಮಂದಿರದ ಮಾದರಿಯಲ್ಲಿದೆ ಎಂದರು. ವಿಗ್ರಹ ಮೆರವಣಿಗೆ ಜ. 15ರಂದು ಗಣೇಶ ಪುರಿಯಿಂದ ಆಗಮಿಸಿರುವ ನಿತ್ಯಾನಂದ ಸ್ವಾಮಿ ವಿಗ್ರಹವನ್ನು ಕೊಡವೂರು ಶಿರಡಿ ಸಾಯಿಬಾಬಾ ಮಂದಿರದಿಂದ ಜೋಡುಕಟ್ಟೆವರೆಗೆ ವಾಹನ ಜಾಥಾದಲ್ಲಿ ತರಲಾಗುವುದು. ಜಾಥಾಕ್ಕೆ ಮಣಿಪಾಲ ಗ್ರೂಪ್ ಮುಖ್ಯಸ್ಥ ಡಾ| ರಂಜನ್…
ರಾಜಕೀಯದಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿ, ಕಾನೂನು ರಂಗದಲ್ಲೂ ಗಮನ ಸೆಳೆಯುವ ಹಿರಿಯ ನಾಯಕ ಕೆ. ಮೋನಪ್ಪ ಭಂಡಾರಿ. ಇವರ ಬಗ್ಗೆ ಒಂದು ಕಿರು ಪರಿಚಯ ಇಲ್ಲಿದೆ. ಕೆಲ್ಲೆಕಾರುಗುತ್ತು ಮೋನಪ್ಪ ಭಂಡಾರಿ ಅವರು ಕೆ. ದೂಮಣ್ಣ ಶೆಟ್ಟಿ ಹಾಗೂ ಶ್ರೀಮತಿ ಲಕ್ಷ್ಮೀ ಅವರ ಪುತ್ರರಾಗಿ 1952 ರ ಜನವರಿ 3ರಂದು ಕಾಸರಗೋಡು ಜಿಲ್ಲೆಯ ಉಪ್ಪಳ ಸಮೀಪದ ಕೋಡಿಬೈಲಿನ ಕರವೂರು ಎಂಬಲ್ಲಿ ಜನಿಸಿದವರು. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರು ಕೋಡಿಬೈಲು ಐಡೆಡ್ ಲೋವರ್ ಫ್ರೈಮರಿ ಶಾಲೆಯಲ್ಲಿ ಮುಗಿಸಿ, ಬಳಿಕ ಮಂಗಲ್ಪಾಡಿ ಸರಕಾರಿ ಹೈಸ್ಕೂಲಿನಲ್ಲಿ, ಕನ್ಯಾನದ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಶಿಕ್ಷಣ ಮುಂದುವರಿಸಿ ಮಂಗಳೂರಿನ ಸೈಂಟ್ ಅಲೋಶಿಯಸ್ ಸಂಧ್ಯಾ ಕಾಲೇಜಿನಲ್ಲಿ ಕಲಿತು ಬಿ.ಎ. ಪದವಿ ಪಡೆದರು. ಆ ಬಳಿಕ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದು ಮಂಗಳೂರಿನ ಎಸ್ ಡಿ ಎಂ ಕಾಲೇಜಿನಲ್ಲಿ ಎಲ್ ಎಲ್ ಬಿ ಪದವಿ ಪಡೆದು ನ್ಯಾಯವಾದಿಯಾದರು. ಪ್ರಸ್ತುತ ಇವರು ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಿದ್ದು, ಜತೆಗೆ ನೋಟರಿಯೂ ಆಗಿದ್ದಾರೆ.…
ಅವಿಭಾಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಪ್ರತಿಷ್ಠಿತ ಕ್ಲಬ್ ಗಳಲ್ಲಿ ಒಂದಾದ ಕುಂದಾಪುರ ತಾಲೂಕು ಎಡ್ವರ್ಡ್ ಮೆಮೊರಿಯಲ್ ಕ್ಲಬ್ ನ ವಾರ್ಷಿಕ ಮಹಾ ಸಭೆಯಲ್ಲಿ ತೀರಾ ಅನಾರೋಗ್ಯ ಪೀಡಿತರಿಗೆ“ಆರೋಗ್ಯ ನಿಧಿ” ಯೋಜನೆಗೆ ಕ್ಲಬ್ ನ ಅಧ್ಯಕ್ಷರಾದ ಉದ್ಯಮಿ ಚಿತ್ತರಂಜನ್ ಹೆಗ್ಡೆ ಹರ್ಕೂರು ಅವರು ಚಾಲನೆ ನೀಡಿದರು. ತೀರಾ ಅನಾರೋಗ್ಯ ಪೀಡಿತ ಜನರಿಗೆ ತಲಾ 10000 ರೂ ಚೆಕ್ ನ್ನು ವಿತರಿಸಲಾಯಿತು ಹಾಗೆಯೇ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಆ ಮಹಾಸಭೆಯಲ್ಲಿ ಕ್ಲಬ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿಗಳಾದ ಕಾಳಾವರ ಉದಯ್ ಶೆಟ್ಟಿ ಲೆಕ್ಕ ಪತ್ರ ಮಂಡನೆ ಮಾಡಿ ಧನ್ಯವಾದ ಸಮರ್ಪಣೆ ಮಾಡಿದರು. ನಿವೃತ ಮುಖ್ಯ ಉಪಾಧ್ಯಾಯರಾದ ವೀರಣ್ಣ ಶೆಟ್ಟಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.
ಅಟಲ್ ಬಿಹಾರಿ ವಾಜಪೇಯಿ ಭಾರತದ ಪ್ರಧಾನಿಯಾಗಿದ್ದಾಗ ಇಸ್ರೋದ ಚಂದ್ರಯಾನದ ಕನಸುಗಳು ಆರಂಭವಾದವು. ವಾಜಪೇಯಿಯೇ ಚಂದ್ರಯಾನವನ್ನು ಘೋಷಿಸಿದ್ದರು. ಆದರೆ ಚಂದ್ರಯಾನ-1 ಸಾಕಾರಗೊಂಡಿದ್ದು ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ. 2008ರಲ್ಲಿ ಹೊರಟ ಈ ನೌಕೆ, 2009ರಲ್ಲಿ ಚಂದ್ರನಲ್ಲಿ ನೀರಿದೆ ಎಂಬ ಅದ್ಭುತ ಸುಳಿವು ನೀಡಿ ಸಂಪರ್ಕ ಕಳೆದುಕೊಂಡಿತು. ಇದೂ ಕೂಡ ಅದ್ಭುತ ಯಶಸ್ಸು. ಇದರ ಬೆನ್ನಲ್ಲೇ ಇಸ್ರೋ ತನ್ನ ಪ್ರಯತ್ನ ನಿಲ್ಲಿಸಲಿಲ್ಲ. 2019ರಲ್ಲಿ ಮತ್ತೆ ಚಂದ್ರ ಯಾನ-2ನೇ ಭಾಗ ಆರಂಭವಾಯಿತು. ಜು.22ಕ್ಕೆ ಹೊರಟ ವಿಕ್ರಮ್ ಲ್ಯಾಂಡರ್, ಪ್ರಜ್ಞಾನ್ ರೋವರ್ ಸೆ.6ಕ್ಕೆ ಚಂದ್ರನ ಮೇಲೆ ಇಳಿಯುವ ಹಂತದಲ್ಲಿ ಸಂಪರ್ಕ ಕಳೆದುಕೊಂಡಿತು. ಆಗ ಇಸ್ರೋ ಅಧ್ಯಕ್ಷರಾಗಿದ್ದವರು ಕೆ.ಶಿವನ್. ಈಗ ಪ್ರಧಾನಿ ನರೇಂದ್ರ ಮೋದಿಯವರ ಆಶಯ ಮತ್ತು ಎಸ್.ಸೋಮನಾಥ್ ನೇತೃತ್ವದಲ್ಲಿ ಇನ್ನೊಮ್ಮೆ ಚಂದ್ರಯಾನ ಆರಂಭವಾಗಿದೆ. ಹಿಂದೆ ಆದ ಯಾವುದೇ ತಪ್ಪಾಗದಂತೆ ನಿರಂತರ ಪರಿಶ್ರಮ ವಹಿಸಲಾಗಿದೆ. ಎಲ್‌ವಿಎಂ3-ಎಂ4 (ಹಿಂದಿನ ಜಿಎಸ್‌ಎಲ್‌ವಿ) ರಾಕೆಟ್ ಮೂಲಕ ಶುಕ್ರವಾರ ಚಂದ್ರನಲ್ಲಿಗೆ ನೌಕೆ ಹೊರಟಿದೆ. ಅಲ್ಲಿಗೆ ಉಡಾವಣೆ ಯಶಸ್ವಿಯಾಗಿದೆ. ಇಸ್ರೋ ವಿಜ್ಞಾನಿಗಳಿಗೆ ಭಾರೀ ಯಶಸ್ಸು ಲಭಿಸಿದೆ. ನಿಜವಾದ…
ರೋಟರಿ ಮಂಗಳೂರು ಪೂರ್ವ ಇದರ 2023-24 ರ ಸಾಲಿನ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇತ್ತೀಚೆಗೆ ನಗರದ ಮೋತಿಮಹಲ್ ಹೋಟೆಲಿನ ಸಭಾ ಭವನದಲ್ಲಿ ಜರುಗಿತು. ಮುಖ್ಯ ಅತಿಥಿ ಯಾಗಿ ಭಾಗವಹಿಸಿದ್ದ ರೋಟರಿ ಜಿಲ್ಲೆ 3181 ರ 2025-26ರ ಸಾಲಿನ ನಿಯೋಜಿತ ಜಿಲ್ಲಾ ಗವರ್ನರ್ ರಾಮಕೃಷ್ಣರವರು ಪದಗ್ರಹಣ ನೆರವೇರಿಸಿ ಮಾತನಾಡುತ್ತಾ ರೋಟರಿ ಅತ್ಯಂತ ಶ್ರೇಷ್ಠ ಸೇವಾ ಸಂಸ್ಥೆ. ಈ ಸಂಸ್ಥೆಯ ಮುಖಾಂತರ ಸಮುದಾಯದ ಅಸಹಾಯಕರ ಕಣ್ಣೀರೊರೆಸುವ ಕೆಲಸ ಮಾಡಬೇಕೆಂದು ಸದಸ್ಯರಿಗೆ ಕರೆ ನೀಡಿದರು. ಮುಂಡಾಡಿಗುತ್ತು ಜಯರಾಮ ಶೆಟ್ಟಿ ಅಧ್ಯಕ್ಷರಾಗಿಯೂ, ಮಾಜಿ ಸಹಾಯ ಗವರ್ನರ್ ಸದಾಶಿವ ಶೆಟ್ಟಿಯವರು ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು. ನಿರ್ಗಮನ ಅಧ್ಯಕ್ಷ ಸಿ.ಎ ಹರೀಶ್ ಶೆಟ್ಟಿಯವರು ಸ್ವಾಗತಿಸಿ ಕಳೆದ ವರ್ಷ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ನಿರ್ಗಮನ ಕಾರ್ಯದರ್ಶಿ ಜೋಯಲ್ ಸಲ್ದಾನ ಗತ ವರ್ಷದ ವರದಿ ಮಂಡಿಸಿದರು. ಜಿಲ್ಲಾ ಸಹ ತರಬೇತುದಾರ ಶೇಖರ ಶೆಟ್ಟಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಡಾ. ವಸಂತ ಶೆಟ್ಟಿ ನೂತನ ಸದಸ್ಯರನ್ನು ಪರಿಚಯಿಸಿದರು. ಕ್ಲಬ್ ವತಿಯಿಂದ…
ಧೋನಿ ಎನ್ನುವ ವ್ಯಕ್ತಿ ಕೇವಲ ಕ್ರೀಡಾಪಟುವಲ್ಲ. ಯಶಸ್ಸಿನ ಬೆನ್ನು ಹತ್ತಿ ಹೋಗುವ ಪ್ರತಿಯೊಬ್ಬ ವ್ಯಕ್ತಿಗೂ ಮಹೇಂದ್ರ ಸಿಂಗ್ ಧೋನಿ ಒಂದು ದೊಡ್ಡ ವಿಶ್ವವಿದ್ಯಾಲಯ. ಧೋನಿಯಿಂದ ಕಲಿಯಲು ಆಗದಷ್ಟು ಗುಣಗಳನ್ನು ನಾವು ಪಟ್ಟಿ ಮಾಡಬಹುದು. ಯಾರು ಏನೇ ಹೇಳಲಿ ಕ್ರಿಕೆಟ್ ಹಾಗೂ ಕ್ರೀಡಾ ಲೋಕ ನೋಡಿದ ಅಪ್ರತಿಮ ನಾಯಕ ಧೋನಿ. ಧೋನಿಯ ಆಟಕ್ಕೆ ಪೂರ್ಣ ವಿರಾಮ ಬಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಕೊನೆಯುಸಿರಿನವರೆಗೆ ಧೋನಿಯನ್ನು ಮರೆಯಲು ಸಾಧ್ಯವಿಲ್ಲ. ಸಚಿನ್ ಆಟವನ್ನು ನೋಡಿಕೊಂಡು ಕ್ರಿಕೆಟ್ ಹುಚ್ಚು ಹಿಡಿಸಿಕೊಂಡವನು ನಾನು. ಆದರೆ ಧೋನಿಯ ರೀತಿ ನನ್ನಲ್ಲಿ ಕ್ರಿಕೆಟ್‌ನ ಭಾವನೆಯನ್ನು ಬಿತ್ತಿದ ಮತ್ತೋರ್ವ ಆಟಗಾರನಿಲ್ಲ. ಇತ್ತೀಚೆಗಂತೂ ಐಪಿಎಲ್ ಎಂದರೆ ಅದು ಕೇವಲ ಧೋನಿ ನೋಡಲು ಸೀಮಿತವಾಗಿತ್ತು. ಧೋನಿ ಮುಖವನ್ನು ನೋಡುತ್ತಿದ್ದರೆ ಅದೇನೋ ಮನಸ್ಸಿಗೆ ಖುಷಿ. ಇಂದು ಕೂಡ ಧೋನಿಯನ್ನು ಕಣ್ತುಂಬಿಕೊಳ್ಳುವ ಉದ್ದೇಶದಿಂದ ಬೆಳಗಿನ ಜಾವ ಮೂರೂವರೆಯಾದರೂ ಟಿವಿ ಆನ್ ಮಾಡಿ ಕೂತಿದ್ದೆ. ಧೋನಿಯ ಯಾವುದೇ ಕ್ಷಣವನ್ನು ನಾನು ಮಿಸ್ ಮಾಡಿಕೊಳ್ಳಬಾರದು ಎನ್ನುವುದೊಂದೇ ನನ್ನ ಉದ್ದೇಶವಾಗಿತ್ತು. ಧೋನಿಯ…
ಮನುಷ್ಯನ ಜೀವನ ಹರಿಯುವ ನೀರಾಗಬೇಕು. ಅದು ಮನುಷ್ಯನ ಮೂಲ ನಂಬಿಕೆಯಿಂದ ಸಾಧ್ಯ ಎಂದು ಒಡಿಯೂರು ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಅತ್ತೂರು ಅರಸು ಕುಂಜಿರಾಯ ದೈವಸ್ಥಾನದ ಬ್ರಹ್ಮಕಲಶೋತ್ಸವ ಮತ್ತು ಕಲಶಾಭಿಷೇಕದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ನಂಬಿಕೆ, ವಿಶ್ವಾಸದಿಂದ ಬದುಕು ಪಾವನವಾಗಲು ಸಾಧ್ಯ, ಹತ್ತು ವರ್ಷದ ಹಿಂದಿನ ಅತ್ತೂರು ಇದೀಗ ಸಾಕಷ್ಟು ಅಭಿವೃದ್ಧಿಗೊಂಡಿದೆ. ಇಲ್ಲಿನ ಜನರ ಪ್ರೀತಿ, ವಿಶ್ವಾಸ ಮತ್ತು ಧಾನ ಧರ್ಮದಿಂದ ಅತ್ತೂರು ಬೆಳೆಯಲು ಸಾಧ್ಯ, ಕ್ರಿಯಾಶೀಲ ಬದುಕು ತುಳುವರದ್ದು, ಮೂರು ಗ್ರಾಮಗಳ ಐಕ್ಯತೆಯಿಂದ ಮತ್ತಷ್ಟು ಪ್ರಸಿದ್ಧಿ ಕಂಡಿದೆ. ಮಾನವೀಯ ಮೌಲ್ಯ ಅತ್ತೂರಿನಲ್ಲಿ ತುಂಬಿದೆ ಎಂದರು. ಮೂಲ್ಕಿ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ದೈವ ದೇವರು ಎಂಬುದು ನಂಬಿಕೆ, ಅರಸು ಕುಂಜಿರಾಯ ದೈವದ ಮೇಲಿನ ಭಕ್ತಿ ಅಪಾರವಾಗಿದ್ದ ಕಾರಣ ದೈವಸ್ಥಾನ ಇಷ್ಟೊಂದು ಅಭಿವೃದ್ಧಿ ಕಾಣಲು ಸಾಧ್ಯವಾಯಿತು ಎಂದರು. ಪಂಜ ಭಾಸ್ಕರ ಭಟ್ ಧಾರ್ಮಿಕ ಉಪನ್ಯಾಸ ನೀಡಿ, ದೈವಗಳಿಗೆ ಸಿರಿ ಸಿಂಗಾರದ ನೇಮ ಕೊಡಬೇಕು, ಬೆಳ್ಳಿ ಬಂಗಾರದ…
ಬಂಟರ ಸಂಘ (ರಿ) ಸುರತ್ಕಲ್, ಬಂಟರ ಯಾನೆ ನಾಡವರ ಮಾತೃ ಸಂಘ (ರಿ) ಮಂಗಳೂರು, ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ) ಮಂಗಳೂರು ಇದರ ಸಹಯೋಗದೊಂದಿಗೆ ಜನವರಿ 22 ಭಾನುವಾರ ಬೆಳಿಗ್ಗೆ 8.30 ಕ್ಕೆ ಸುರತ್ಕಲ್ ಗೋವಿಂದದಾಸ ಕಾಲೇಜು ಕ್ರೀಡಾಂಗಣದಲ್ಲಿ ಬಂಟರ ಕ್ರೀಡೋತ್ಸವ ನಡೆಯಲಿದೆ. ಬಂಟರ ಕ್ರೀಡೋತ್ಸವವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್ ಪೂಂಜ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಂಟರ ಯಾನೆ ನಾಡವರ ಮಾತೃಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಶೆಟ್ಟಿ, ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಪೇರ್ ಟ್ರಸ್ಟ್ ನ ಸಂಘಟನಾ ಕಾರ್ಯದರ್ಶಿ ರಾಜ್ ಗೋಪಾಲ್ ರೈ, ಬಂಟರ ಮಾತೃ ಸಂಘದ ಮಾಜೀ ಕೋಶಾಧಿಕಾರಿ ರವೀಂದ್ರನಾಥ ಶೆಟ್ಟಿ, ಉದ್ಯಮಿ ದೇವದಾಸ ಕೆ ಶೆಟ್ಟಿ ಬಾಳ ಸಾನದ ಹೊಸಮನೆ, ಬಂಟರ ಮಾತೃ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ನಿಟ್ಟೆಗುತ್ತು ರವಿರಾಜ ಶೆಟ್ಟಿ ಭಾಗವಹಿಸಲಿದ್ದಾರೆ. ಸಂಜೆ 5 ಗಂಟೆಗೆ ಸಮಾರೋಪ…
ಹೊಸ ವರ್ಷ ಎಲ್ಲರ ಬಾಳಲಿ ಹೊಸತನ ತರಲಿ ಎಂಬ ಶುಭಾಶಯಗಳೊಂದಿಗೆ ಈ ವರ್ಷ ವಿಡಿ ಉತ್ತಮವಾಗಿ ಸಾಗಲಿ ಎಂಬ ಆಶಯ, ಹಂಬಲ, ಉತ್ಸಾಹದೊಂದಿಗೆ 2023ರ ಆಗಮನದ ಹರುಷದಲ್ಲಿ ಎಲ್ಲರೂ ಸತ್ಕರ್ಮ, ಸತ್ಯನಿಷ್ಠೆ, ಪ್ರಾಮಾಣಿಕತೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸುವುದಾಗಿ ಸಂಕಲ್ಪಸಿಕೊಂಡು ಹೊಸ ಯೋಜನೆ, ನವಕಲ್ಪನೆಯೊಂದಿಗೆ ಬದುಕಿಗೆ ಅರ್ಥಕೊಡಲು ಜೀವನದಲ್ಲಿ ನಿಶ್ಚಿತ ಗುರಿಯನ್ನಿಟ್ಟು ಕೊಂಡಿರುವವರು ಯಶಸ್ವಿ ಆಗುವುದು ಖಂಡಿತಾ. ಹಾಗೆಯೇ ಹೊಸವರ್ಷವನ್ನು ಕ್ರೀಯಾ ಶೀಲತೆಯಿಂದ ಸ್ವಾಗತಿಸುತ್ತಾ ನಿಶ್ಚಿತವಾದ ಗುರಿಯೊಂದಿಗೆ ಹೊಸ ಹೆಜ್ಜೆಯಿಟ್ಟು ಹೊಸ ಅರುಣೋದ ಸಂತಸದ ಫಲಿತಾಂಶಕ್ಕಾಗಿಕಾಯೋಣ. ಡಿಸೆಂಬರ್ 31 ರ ರಾತ್ರಿ ಎಲ್ಲೆಡೆ ಗೌಜು, ಗದ್ದಲ, ಡಿಸ್ಕೋ ನೃತ್ಯ ಕುಣಿತದ ಸಂಭ್ರಮದಲ್ಲಿ ರಾತ್ರಿ ಅಲೆದಾಟ , ತಿರುಗಾಟ ಇದು ನಗರಜೀವಿಗಳ ಹೊಸ ವರ್ಷಾಚರಣೆ, ಪಾರ್ಟಿ, ಮೋಜು, ಮಸ್ತಿ, ಪಾಶ್ಚಾತ್ಯ ಅನುಕರಣೆ ಅನಿಸಿದರೂ ಅನುಸಂಧಾನಗಳಲ್ಲಿ ಜೀವನದ ಗತಿ, ಬದಲಾಗುತ್ತಿರುವ ಕಾಲ, ಸಾಮಾಜಿಕ ಪರಿಸ್ಥಿತಿ ಇಂದಿನ ಪರಿಸರದೊಂದಿಗೆ ಬಾಳುವ ಸಹಜ ಸ್ವಭಾವದಂತೆ ಹೊಸ ವರ್ಷದ ಆಚರಣೆ ಕೂಡ ಸರ್ವ ಸಾಮಾನ್ಯವಾಗಿದೆ. ನಮ್ಮೆಲ್ಲರ ಬದುಕಿನ ತುಡಿತ ,…