ಇತ್ತೀಚಿನ ದಿನಗಳಲ್ಲಿ ನಾಲ್ಕು ತಲೆಮಾರು ಕಾಣುವಂತದ್ದೇ ವಿಶೇಷವಾಗಿದ್ದರೆ, ನಮ್ಮ ಕುಂದಾಪುರ ತಾಲೂಕಿನ ದೇವಲ್ಕುಂದ ಗ್ರಾಮದ ಪ್ರತಿಷ್ಠಿತ ಕೂಕನಾಡು ಮನೆಯ ಅವಿಭಕ್ತ ಕುಟುಂಬವು ಐದು ತಲೆಮಾರು ಕಂಡಿದೆ. ಕೂಕನಾಡು ಕೃಷಿ ಕುಟುಂಬದಲ್ಲಿ ಕೊಣ್ಕೆ ನಾಗಯ್ಯ ಶೆಟ್ಟಿ ಮತ್ತು ತುಂಗಮ್ಮ ಶೆಡ್ತಿಯವರ ಮಗಳಾಗಿ ಪುಟ್ಟಮ್ಮ ಶೆಡ್ತಿಯವರು 1931 ರಲ್ಲಿ ಜನಿಸಿರುತ್ತಾರೆ. ಇವರು ತನ್ನ 12ನೇ ವಯಸ್ಸಿಗೆ ಸಾಲಗೆದ್ದೆ ಶಿವರಾಮ ಶೆಟ್ಟಿಯವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇವರಿಬ್ಬರಿಗೆ ಮೂರು ಗಂಡು ಮತ್ತು ಮೂರು ಹೆಣ್ಣು ಮಕ್ಕಳಿದ್ದು, ಹಿರಿಯ ಮಗಳು ಶ್ರೀಮತಿ ಜಲಜಾಕ್ಷಿ ಶೆಟ್ಟಿ 1947 ರಲ್ಲಿ ಜನಿಸಿದ್ದು, 1964 ರಲ್ಲಿ ಹರ್ಕೂರು ಪಟೇಲರ ಮನೆ ಚಂದ್ರಶೇಖರ ಶೆಟ್ಟಿಯವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಶ್ರೀ ಚಂದ್ರಶೇಖರ ಶೆಟ್ಟಿಯವರು ಉತ್ತಮ ಅದ್ಯಾಪಕರು ಅಲ್ಲದೇ ಉತ್ತಮ ನಾಟಕ ಮತ್ತು ಯಕ್ಷಗಾನ ಪಾತ್ರದಾರಿಯಾಗಿದ್ದು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದು, ಜನಾನುರಾಗಿಯಾಗಿದ್ದರು. ನಂತರ ಮುಖ್ಯೋಪಾಧ್ಯಾಯರಾಗಿ ಇದೀಗ ನಿವೃತ್ತ ಜೀವನ ನಡೆಸುತ್ತಿದ್ದಾರೆ.
ಈ ದಂಪತಿಗಳಿಗೆ ಎರಡು ಹೆಣ್ಣು ಮತ್ತು ಒಬ್ಬ ಮಗ. ಹಿರಿಯ ಮಗಳು ಪದವೀಧರೆ ವಿಜಯಲಕ್ಷ್ಮೀ ಶೆಟ್ಟಿಯವರು 1966 ರಲ್ಲಿ ಜನಿಸಿದ್ದು, ಪ್ರತಿಷ್ಠಿತ ಅಂತರಾಷ್ಟ್ರಿಯ ಕಂಪೆನಿ ABB India Ltd ನ ಉದ್ಯೋಗಿಯಾಗಿದ್ದ ಶ್ರೀ ಕಾಳಾವರ ಚಂದ್ರಶೇಖರ ಶೆಟ್ಟಿಯವರನ್ನು 1987 ರಲ್ಲಿ ವಿವಾಹವಾಗಿ ಬೆಂಗಳೂರಿನಲ್ಲಿ ನೆಲಸಿದ್ದಾರೆ. ಶ್ರೀ ಚಂದ್ರಶೇಖರ ಶೆಟ್ಟಿಯವರು ABB ಯಲ್ಲಿ 33 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಮೇನೆಜರ್ ಫೈನಾನ್ಸ್ ಆಗಿ ನಿವೃತ್ತರಾಗಿದ್ದಾರೆ.
ಈ ದಂಪತಿಗಳಿಗೆ ಏಕಮಾತ್ರ ಸುಪುತ್ರಿ ಡಾ. ಪೂಜಾ ಶೆಟ್ಟಿ 1989 ರಲ್ಲಿ ಜನಿಸಿದ್ದು, 2013ರಲ್ಲಿ ದೇರಂಬಳ ಆದರ್ಶ ಶೇನವ ಇವರೊಂದಿಗೆ ವಿವಾಹ ನೆರವೇರಿತ್ತು. ಆದರ್ಶ ಶೇಣವ ಕತಾರ್ ನಲ್ಲಿ ಸಾಫ್ಟ್ ವೇರ್ ಇಂಜಿನೀಯರ್ ಆಗಿ ವೃತ್ತಿ ಜೀವನ ನಡೆಸುತ್ತಿದ್ದಾರೆ. ಡಾ. ಪೂಜಾ ಶೆಟ್ಟಿ ಮತ್ತು ಆದರ್ಶ ಶೆಟ್ಟಿ ದಂಪತಿಗಳಿಗೆ ಇಬ್ಬರು ಪುತ್ರಿಯರು ಜನಿಸಿದ್ದು, ಅಪರೂಪದ ಐದನೇ ತಲೆಮಾರಿನ ಮೊದಲ ಕೊಂಡಿಯಾಗಿ ಅದ್ರಿಜ ಆದರ್ಶ ಶೇಣವ 03 – 05-2017ರಲ್ಲಿ ಜನಿಸಿದ್ದರೆ, ಎರಡನೇ ಕುಡಿ ನೈಜ ಆದರ್ಶ ಶೇಣವ ಇವಳ ಜನನ 13 – 09 – 2021 ರಲ್ಲಿ ಆಯಿತು.
ಕೂಕನಾಡು ಮನೆತನದ 92 ವರ್ಷ ವಯಸ್ಸಿನ ಶ್ರೀಮತಿ ಪುಟ್ಟಮ್ಮ ಶೆಡ್ತಿಯವರು ತನ್ನ ಐದನೇ ತಲೆಮಾರಿನ ಕೊಂಡಿಯಾಗಿ ಜನಿಸಿದ ಎರಡು ಕುಡಿಗಳಾದ ಅದ್ರಿಜ ಆದರ್ಶ ಶೇಣವ (6 ವರ್ಷ) ಮತ್ತು ನೈಜ ಆದರ್ಶ ಶೇಣವ ( 18 ತಿಂಗಳು ) ಬಂಗಾರದ ದೀಪದಲ್ಲಿ ಆರತಿ ಬೆಳಗಿಸಿ ಹರಸುವ ಅಪರೂಪದ ಭಾಗ್ಯ ಪಡೆದ ಹಿರಿಯ ಕುಟುಂಬ ಎಂದು ತಿಳಿಸುವುದೇ ಸಂತೋಷದ ಸಂಗತಿ.
ಇತ್ತೀಚೆಗೆ ಬೆಂಗಳೂರಿನ ಬಂಟರ ಸಂಘ ಈ ಅಪರೂಪದ ಐದು ತಲೆಮಾರಿನ ಕುಟುಂಬವನ್ನು ಗುರುತಿಸಿ ಸಮ್ಮಾನ ಮಾಡಿ ಗೌರವಿಸಿದ್ದರು.
ವಿ.ಕೆ.ಎಸ್. ಶೆಟ್ಟಿ, ಬೆಂಗಳೂರು