Author: admin
ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯದ ನೂತನ ಪಯಣಕ್ಕೆ ಚಾಲನೆಯ ರೂಪದಲ್ಲಿ ಕನ್ನಡ ಸಾಹಿತ್ಯ ಸಂಘವನ್ನು ರಚಿಸಲಾಯಿತು. ಕನ್ನಡ ಸಾಹಿತ್ಯ ಸಂಘದ ಉದ್ಘಾಟನೆಗೆ ಆಗಮಿಸಿದ ವಿದ್ವಾಂಸರು, ಸಾಹಿತಿಗಳು ಹಾಗೂ ನಿವೃತ್ತ ಪ್ರಾಂಶುಪಾಲರಾದ ಡಾ. ಪಾದೆಕಲ್ಲು ವಿಷ್ಣು ಭಟ್ಟರು ಮಾತನಾಡಿ, “ಕನ್ನಡವನ್ನು ಉಳಿಸಿ ಬೆಳೆಸಬೇಕಾದ್ದು ಕನ್ನಡಿಗರಾದ ನಮ್ಮ ಕರ್ತವ್ಯ. ಸಾಹಿತ್ಯದ ಓದುವಿಕೆ ಮತ್ತು ಬರೆಯುವಿಕೆ ನಮ್ಮ ಅನುಭವಗಳನ್ನು ಹೆಚ್ಚಿಸುವ ಪ್ರಕ್ರಿಯೆ. ಆದ್ದರಿಂದ ಸಾಹಿತ್ಯವನ್ನು ಓದುವ ಆಸಕ್ತಿ ಬೆಳೆಸಿಕೊಳ್ಳಿ. ಭಾಷೆಯ ಬಗೆಗೆ ಹೆಚ್ಚಿನ ಗಮನ ಕೊಡಿ. ವಾಕ್ಯಗಳ ರಚನೆಯಲ್ಲಿ ತೊಡಗಿ, ಬಳಿಕ ಸಾಹಿತ್ಯ ರಚನೆಗೂ ಮುಂದಾಗಬೇಕು ಎನ್ನುತ್ತಾ ಕನ್ನಡ ಸಾಹಿತ್ಯದ ಕಾಲಘಟ್ಟಗಳು, ನಿಘಂಟುಗಳು, ಗದ್ಯ ಪದ್ಯ ಕವಿಗಳ ವಿವರ, ಕವಿರಾಜಮಾರ್ಗ, ತಾಳೆಗರಿಗಳ ಉಲ್ಲೇಖದೊಂದಿಗೆ ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಕುರಿತು ವಿವರಿಸಿದರು. ಕ್ರಿಯೇಟಿವ್ ಕನ್ನಡ ಸಾಹಿತ್ಯ ಸಂಘದ ಮೂಲಕ ಇನ್ನಷ್ಟು ಸೃಜನಾತ್ಮಕ ಸಾಹಿತ್ಯ ಕೃತಿಗಳು ಮೂಡಿ ಬರಲಿ” ಎಂದು ಹಾರೈಸಿದರು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಅಶ್ವತ್ ಎಸ್.ಎಲ್ ರವರು “ಭಾಷೆ…
ಇಂದಿನ ಸ್ಪರ್ಧಾತ್ಮಕ ಜೀವನದಲ್ಲಿ ಉತ್ತಮ ಜೀವನ ನಿರ್ವಹಣೆ ಉದ್ದೇಶದಿಂದ ವಿದೇಶ ಸೇರಿಕೊಂಡು ಅಲ್ಲಿಯೆ ನೆಲೆಸಿಕೊಂಡು ತಮ್ಮ ಉದ್ಯೋಗ ವ್ಯಾಪಾರ ವಹಿವಾಟುಗಳು ಒಂದು ನಿರ್ಣಾಯಕ ಹಂತದಲ್ಲಿ ನೆಲೆ ಕಂಡಾದ ಮೇಲೆ ತಮ್ಮ ಸಂಸ್ಕೃತಿಯ ತಾಯಿ ಬೇರಿಗೆ ನೀರೆರೆದು ಪೋಷಿಸುತ್ತಾ, ಅದು ನಳ ನಳಿಸುವಂತೆ ಮಾಡುತ್ತಿರುವ ಕೆಲಸದಲ್ಲಿ ಸದಾ ತೊಡಗಿಸಿಕೊಂಡಿರುವುದನ್ನು ಕಂಡರೆ ನಿಜಕ್ಕೂ ಹೆಮ್ಮೆಯೆನಿಸುತ್ತದೆ. ಮಂಗಳೂರು ಬಜಪೆ ವಿಮಾನ ನಿಲ್ದಾಣ ಸಮೀಪದ ಅದ್ಯಪಾಡಿ ಅನೇಕ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ನಾಯಕರಿಗೆ ಜನುಮ ನೀಡಿದ ರಮಣೀಯ ನೆಲ. ಇದು ಯದುನಾಥ ಆಳ್ವರ ಮೂಲನೆಲೆ ಮೂಲನೆಲ. ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಇವರ ಮಹತ್ವಾಕಾಂಕ್ಷೆ ಭವಿಷ್ಯ ಕುರಿತಂತೆ ಸ್ಪಷ್ಟ ಕಲ್ಪನೆ ತನ್ನ ಕನಸುಗಳಿಗೆ ಸಾಕಾರ ರೂಪ ನೀಡುವ ಛಲ ಅವರನ್ನು ಕೊಲ್ಲಿ ರಾಷ್ಟ್ರಗಳಲ್ಲಿ ಒಂದಾದ ಕುವೈಟ್ ಕಡೆ ಆಕರ್ಷಿಸಿತು. ತನ್ನ ವಿಚಕ್ಷಣ ಪ್ರತಿಭಾ ಸಾಮರ್ಥ್ಯದಿಂದ ಅನತಿ ಕಾಲದಲ್ಲಿಯೇ ತನ್ನ ಅದ್ಭುತ ಟೀಮ್ ವರ್ಕ್ ಮೂಲಕ ಲೋಜಿಸ್ಟಿಕ್ ಎಂಡ್ ಫೈನಾನ್ಸ್ ವ್ಯವಹಾರ ಕ್ಷಿಪ್ರ ಪ್ರಗತಿ ಕಂಡ ಪರಿಣಾಮ ಅವರೊಬ್ಬ ಕುವೈಟ್…
ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಮಹಿಷಮರ್ದಿನಿ ದೇವಸ್ಥಾನದ ವಠಾರದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಉಡುಪಿ ಘಟಕ, ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಪರ್ಕಳ, ಮಹಾಲಿಂಗೇಶ್ವರ ಮಹಾಗಣಪತಿ ಯಕ್ಷಗಾನ ಮಂಡಳಿ ಪರ್ಕಳ ಮತ್ತು ವಾಲಿಬಾಲ್ ಫ್ರೆಂಡ್ಸ್ ಪರ್ಕಳ ಇವರ ಸಹಯೋಗದಲ್ಲಿ ಪಾವಂಜೆ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ದೇವಿ ಭಟ್ರು ಎಂದೇ ಖ್ಯಾತರಾದ ರಮೇಶ್ ಭಟ್ ಬಾಯಾರು ಇವರನ್ನು ಗೌರವಿಸಲಾಯಿತು. ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಯಕ್ಷಗಾನ ಮಂಡಳಿ ಹಾಗೂ ವಾಲಿಬಾಲ್ ಫ್ರೆಂಡ್ಸ್ ಪರ್ಕಳ ವತಿಯಿಂದ ಮೇಳದ ಸಂಚಾಲಕ, ಪ್ರಧಾನ ಭಾಗವತರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರನ್ನು ಗೌರವಿಸಲಾಯಿತು. ಶ್ರೀ ಕ್ಷೇತ್ರ ಪಾವಂಜೆಯ ಆಡಳಿತ ಮೊಕ್ತೇಸರರಾದ ಶಶೀಂದ್ರ ಕುಮಾರ್, ಉಡುಪಿ ಘಟಕದ ಗೌರವಾಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ನಿರುಪಮಾ ಶೆಟ್ಟಿ, ಎಚ್ ಪಿ ಆರ್ ವಿದ್ಯಾಸಂಸ್ಥೆಯ ಛೇರ್ಮನ್ ಲಯನ್ ಹರಿಪ್ರಸಾದ್ ರೈ, ಕರುಣಾಕರ ಶೆಟ್ಟಿ, ಸುಧಾಕರ ಆಚಾರ್ಯ ಮತ್ತಿತರ…
ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ ಮೇಳದ ಆರನೇ ವರ್ಷದ ಯಾನಾರಂಭವು ಆದಿತ್ಯವಾರ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದು, ಭಾಗವತರಿಗೆ ಜಾಗಟೆ, ಕಲಾವಿದರಿಗೆ ಗೆಜ್ಜೆ ನೀಡಿ, ಶ್ರೀ ದೇವರ ಪೂಜೆಯ ಮೂಲಕ ಆರಂಭಗೊಂಡಿತು. ಬಳಿಕ ಮೇಳದ ಸುವಸ್ತುಗಳೊಂದಿಗೆ ಚೌಕಿ ಪ್ರವೇಶಿಸಿ ಚೌಕಿ ಪೂಜೆ ಜರಗಿತು. ಇದೇ ಸಂದರ್ಭದಲ್ಲಿ ಮೇಳಕ್ಕೆ ಪರಂಪರೆಯ ನೂತನ ವೇಷಭೂಷಣಗಳನ್ನು, ಬೆಳ್ಳಿಯ ಪೂಜಾ ಪರಿಕರಗಳನ್ನು ಸಮರ್ಪಿಸಲಾಯಿತು. ಮೇಳದ ಕಲಾವಿದರಿಗೆ ಈವರೆಗೆ ಇದ್ದ ಆರೋಗ್ಯ ವಿಮೆ, ಪಿಎಫ್ ಸೌಲಭ್ಯಗಳ ಜೊತೆಗೆ ಈ ಬಾರಿ ಇಎಸ್ಐ ಸೌಲಭ್ಯವನ್ನು ಜಾರಿ ಮಾಡಲಾಯಿತು. ಈ ಸಾಲಿನ ಮೊದಲ ಸೇವಾ ರೂಪದ ಬಯಲಾಟ ಪಾಂಡವಾಶ್ವಮೇಧ ಪ್ರಸಂಗವು ಶ್ರೀ ದೇವಳದ ಬಾಕಿಮಾರು ಗದ್ದೆಯಲ್ಲಿ ಹಾಕಲಾಗಿದ್ದ ಸಾಂಪ್ರದಾಯಿಕ ರಂಗಸ್ಥಳದಲ್ಲಿ ನಡೆಯಿತು. ಶ್ರೀ ದೇವಳದ ಆಡಳಿತ ಮೊಕ್ತೇಸರ ಎಂ ಶಶೀಂದ್ರ ಕುಮಾರ್, ಧರ್ಮದರ್ಶಿ ಡಾ. ಯಾಜಿ ಹೆಚ್ ನಿರಂಜನ ಭಟ್, ಮೇಳದ ಸಂಚಾಲಕ ಹಾಗೂ ಪ್ರಧಾನ ಭಾಗವತ ಪಟ್ಲ ಸತೀಶ್…
ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಸ್ಫೂರ್ತಿ ಮಾತು ಸರಣಿ ಕಾರ್ಯಕ್ರಮ – 12ನ್ನು 3 ನವೆಂಬರ್ 2025 ರಂದು ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಖ್ಯಾತ ವಾಗ್ಮಿಗಳಾದ ಎನ್.ಆರ್. ದಾಮೋದರ ಶರ್ಮ ರವರು ಬೆಳಕಾಗಲಿ ಬಾಳು ಶೀರ್ಷಿಕೆಯಡಿಯಲ್ಲಿ ಪ್ರೇರಣೆಯ ಮಾತುಗಳನ್ನಾಡುತ್ತಾ, ಜೀವನವನ್ನು ಬೆಳಗಿಸಬೇಕೆಂದರೆ ಆತ್ಮವಿಶ್ವಾಸ ಮತ್ತು ದೃಢ ನಿಶ್ಚಯ ಮುಖ್ಯ. ಪ್ರತಿದಿನ ಹೊಸದಾಗಿ ಕಲಿಯುವ ಮನಸ್ಸು ಬೆಳೆಸಿಕೊಳ್ಳಿ. ಜೀವನದಲ್ಲಿ ಸಣ್ಣ ಪ್ರಯತ್ನವೂ ದೊಡ್ಡ ಬದಲಾವಣೆಗೆ ಕಾರಣವಾಗಬಹುದು. ಕ್ಷಣಿಕ ಸಂತೋಷಕ್ಕೆ ಹಾತೊರೆಯುವ ಮನಸ್ಸನ್ನು ನಿಯಂತ್ರಿಸಿ, ಜೀವನವನ್ನು ಯಶಸ್ಸಿನ ದಡಕ್ಕೆ ಕರೆದೊಯ್ಯಬೇಕು. ಇತರರ ಮಾತಿಗೆ ಕಿವಿಯಾಗುವ ಮೊದಲು ಆತ್ಮದ ಮಾತನ್ನು ಆಲಿಸೋಣ. ತಾಯಿಯ ತ್ಯಾಗಕ್ಕೆ ಸಮನಾದ ತ್ಯಾಗ, ಪ್ರೀತಿ ಬೇರೊಂದಿಲ್ಲ. ತಂದೆಯ ಪರಿಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಮ್ಮ ಭಾರತದ ಜ್ಞಾನ ಪರಂಪರೆ ನಮಗೆ ಹೇಳಿರುವ ಉಪದೇಶಗಳನ್ನು ಅರಿತುಕೊಳ್ಳೋಣ. ಮಾತೃಭೂಮಿಯ ಬಗೆಗಿನ ಪ್ರೀತಿ ಗೌರವ ನಮ್ಮ ವ್ಯಕ್ತಿತ್ವವನ್ನು ನಿರ್ಮಾಣ ಮಾಡುತ್ತವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಹಸಂಸ್ಥಾಪಕರಾದ ವಿದ್ವಾನ್ ಗಣಪತಿ…
ಗಣಿತನಗರ : ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ ಹಾಗೂ ಡಾ.ಎನ್.ಎಸ್.ಎ.ಎಂ ಪದವಿ ಪೂರ್ವ ಕಾಲೇಜು ನಿಟ್ಟೆ ಇವರ ಜಂಟಿ ಆಶ್ರಯದಲ್ಲಿ ಜರುಗಿದ ಉಡುಪಿ ಜಿಲ್ಲಾ ಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿಯ ಶ್ರೀಶಾಂತ್ ಕೆ ಮತ್ತು ದ್ವಿತೀಯ ಪಿಯುಸಿಯ ಪ್ರಜ್ವಲ್ ಎಸ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಾಧಕ ವಿದ್ಯಾರ್ಥಿಯನ್ನು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ, ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.
ಎಂಕುಲು ಎಲ್ಯ ಉಪ್ಪುನಗ ಅಮ್ಮ ಯಾಪಾಲ ಪನೊಂದು ಇತ್ತೆರ್, ನಮ್ಮ ಬಾಯಿಡ್ ಎಪಲ ಎಡ್ಡೆ ಪಾತೆರ ಪನೊಂದ್ ಉಪ್ಪುಡುಗೆ. ಅವುಲ ಪೋಸಗ್ ಬಾಯಿರ್ದ್ ಬೊರ್ಚಾಂದಿನ ಪಾತೆರ ಬರ್ರೆ ಬಲ್ಲಿಗೆ. ದಾಯೆಗ್ ಪಂಡ ದೇವೆರ್ ಗೆ ಯಾಪಾಲ ತಥಾಸ್ತು ತಥಾಸ್ತು ಪಂದ್ ಪನೊಂದ್ ಉಪ್ಪುವೆರ್ ಗೆ. ಅಪಗ ನಮ್ಮ ಬಾಯಿರ್ದ್ ಬೊರ್ಚಾಂದಿನ ಪಾತೆರ ಬತ್ತ್ಂಡ ಅವು ಅಂಚೆನೆ ಅಪುಂಡ್ಗೆ. ಆ ಪೋರ್ತ್ ಗ್ ದೇವೆರೆನ ನಾಮಸ್ಮರಣೆ ಮಲ್ಪೊಡ್ ಗೆ. ಆಯ್ಕಾದ್ ಬಯ್ಯದ ಪೋರ್ತುಗ್ ಭಜನೆ ಪನೊಂದ್ ಇತ್ತ. ಅಂಚನೆ ನಮ ಯಾಪಾಲ ಲಾಯಿಕ್ ದ ಪಾತೆರ ಪನೊಂದ್ ಉಪ್ಪೋಡ್ ಪಂದ್ ನಮ್ಮ ಅಮ್ಮಾ ಪನೊಂದ್ ಇತ್ತೆರ್. ಅದಗ ಯಂಕ್ ಉಂದೆತ ಮಿತ್ತ್ ಸಂಶಯ ಬರೋಂದ್ ಇತ್ತ್ಂಡ್. ಉಂದ್ ಸತ್ಯ ಉಪ್ಪುವ? ದೇವೆರ್ನ ತಥಾಸ್ತು ನಂಕ್ ಎಂಚ ತಾಗ್ ನು ಪಂದ್. ಆಂಡಲ ‘ಅಮ್ಮ ಪಂಡಿನ ವೇದ ವಾಕ್ಯ’ದಂಚ ನಂಬೊಂದ್ ಇತ್ತ. ಬೊಕ್ಕ ಯಾನ್ ಕಾಲೇಜುಡ್ ಭೌತಶಾಸ್ತ್ರ ಕಲ್ತೊಂದು ಉಪ್ಪುನಗ, ಅವುಲ್ ಫಿಸಿಕ್ಸ್ ದ…
ನಾನು ನನ್ನ ಈ ಮೊದಲಿನ ಲೇಖನಗಳ ಸಾಲುಗಳನ್ನೆ ಇಲ್ಲಿಯೂ ಪುನರುಚ್ಛರಿಸುವುದಾದರೆ ನಮ್ಮ ಬಂಟ ಸಮುದಾಯದ ವಿದ್ಯಾವಂತ ಯುವಕರು ಒಂದು ಕಾಲದಲ್ಲಿ ಯಾರೂ ಆಸಕ್ತಿ ತೋರದ ಆದರೆ ತಮ್ಮ ಇಚ್ಛಾಶಕ್ತಿ, ಸತತ ಪರಿಶ್ರಮ, ಸಾಧನೆ ಮೂಲಕ ಯಾವ ಹೊಸ ಉದ್ಯಮಗಳನ್ನೂ ಮಾರುಕಟ್ಟೆಗೆ ಪರಿಚಯಿಸಿ ಗ್ರಾಹಕರು ಅಚ್ಚರಿ ಕಣ್ಣುಗಳಿಂದ ನೋಡುವಂತೆ ಮಾಡಬಲ್ಲರು ಎನ್ನುವುದಕ್ಕೆ ಮಣಿಪಾಲದಲ್ಲಿ ಬಿ.ಕಾಂ.ಶಿಕ್ಷಣ ಮುಗಿಸಿ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಕಾಲ ಕೆಲಸ ಮಾಡಿದರೂ ಉದ್ಯೋಗ ಸಂತೃಪ್ತಿ ಇಲ್ಲದೆ ಹುಟ್ಟೂರಿಗೆ ಆಗಮಿಸಿ ಯಾವುದೆ ರೀತಿಯ ಕಲಬೆರಕೆ ಮಸಾಲ ಮಿಕ್ಸ್ ಇಲ್ಲದ ಸಾದ ಚಹಾ ಪುಡಿಯ ಸ್ವಾದವನ್ನು, ಪರಿಮಳವನ್ನು ಉಡುಪಿ ಪರಿಸರದಲ್ಲಿ ಪಸರಿಸಿದ ರೋಚಕ ವೃತ್ತಾಂತ ಇಲ್ಲಿದೆ ಓದಿ. ಯುವಕನ ಅನ್ವರ್ಥ ನಾಮ ಪ್ರಶಾಂತ ಹೌದು ಪ್ರಶಾಂತ ಸ್ವಭಾವದ ಆದರೆ ಪರಿಶ್ರಮಕ್ಕೆ ಪರ್ಯಾಯ ಇಲ್ಲ ಎನ್ನುವ ಪ್ರಶಾಂತ್ ಕನಸು ಈಗ ನನಸಾಗಿ ಉಡುಪಿ ಟೀ ಲೇಬಲ್ ಮಾನ್ಯತೆ ಪಡೆದು ಜನಮಾನ್ಯತೆ ಬೇಡಿಕೆ ಪಡೆದ ಈ ಕತೆ ಒಂದೇ ದಿನದಲ್ಲಿ ಬರೆದುದಲ್ಲ. ಗ್ರಾಹಕರಲ್ಲಿ ತಮ್ಮ ಉತ್ಪಾದನೆ ಕುರಿತಂತೆ…
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿ ಮುಂಬೈಗೆ ಆಗಮಿಸಿದ ಡಾ. ಪಿ ವಿ ಶೆಟ್ಟಿಯವರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಭವ್ಯ ಸ್ವಾಗತ
ಕರ್ನಾಟಕ ಸರಕಾರದ ಅತ್ಯುನ್ನತ ಗೌರವಾನ್ವಿತ ಪ್ರಶಸ್ತಿ ‘ಕರ್ನಾಟಕ ರಾಜ್ಯೋತ್ಸವ’ ಪ್ರಶಸ್ತಿಯನ್ನು ನವೆಂಬರ್ 1 ರಂದು ಕರ್ನಾಟಕ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಹಿತ ರಾಜ್ಯದ ಗೌರವಾನ್ವಿತ ಮಂತ್ರಿಗಳ ಉಪಸ್ಥಿತಿಯಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿ ಮುಂಬೈಗೆ ಆಗಮಿಸಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ, ಮುಂಬೈ ಬಂಟರ ಸಂಘದ ಮಾಜಿ ಅಧ್ಯಕ್ಷ, ಮುಂಬೈ ಕ್ರಿಕೆಟ್ ಅಸೋಸಿಯೇಷನ್ ನ ಮಾಜಿ ಜೊತೆ ಕಾರ್ಯದರ್ಶಿಯಾದ ಡಾ. ಪಿ ವಿ ಶೆಟ್ಟಿ ಶಿಮಂತೂರು ನಡಿಗುತ್ತು ಅವರನ್ನು ನವೆಂಬರ್ 2 ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಮತ್ತು ಪದಾಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿದರು. ಪ್ರಶಸ್ತಿಯೊಂದಿಗೆ ಮುಂಬೈಗೆ ಆಗಮಿಸಿದ ಡಾ. ಪಿ ವಿ ಶೆಟ್ಟಿ ಮತ್ತು ಅವರ ಧರ್ಮಪತ್ನಿ ಶಕೀಲಾ ಪಿ ಶೆಟ್ಟಿ ದಂಪತಿಯನ್ನು ಐಕಳ ಹರೀಶ್ ಶೆಟ್ಟಿಯವರು ಶಾಲು, ಮೈಸೂರು ಪೇಟ, ಬೃಹತ್ ಹೂವಿನ ಹಾರದೊಂದಿಗೆ ಅಭಿನಂದಿಸಿದರು. ಈ ಸಂದರ್ಭದಲ್ಸಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ…
ಭಾರತದ ನಿಜವಾದ ಶಕ್ತಿ ಅದರ ವೈವಿಧ್ಯತೆಯಲ್ಲಿ ಅಡಗಿದೆ. ದೇಶದ ಪ್ರತಿಯೊಂದು ಭಾಗದ ಸಂಸ್ಕೃತಿ ಮತ್ತು ಪರಂಪರೆಗಳು ಭಾರತದ ಅಸ್ತಿತ್ವವನ್ನು ಶ್ರೀಮಂತಗೊಳಿಸಿವೆ. ಪರಸ್ಪರ ಗೌರವ, ಸಹಬಾಳ್ವೆ ಮತ್ತು ಒಗ್ಗಟ್ಟಿನ ಮನೋಭಾವವೇ ನಿಜವಾದ ಏಕತೆಯ ಮೂಲ ಎಂದು ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡು ರಾವ್ ಹೇಳಿದರು. ಅವರು ಮಿಜಾರಿನ ಆಳ್ವಾಸ್ ತಾಂತಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಾರ್ತ್ ಈಸ್ಟರ್ನ್ ಪೀಪಲ್ಸ್ ಅಸೋಸಿಯೇಷನ್ (ನೇಪಮ್) ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ನಡೆದ ನೇಪಮ್ ಫ್ರೆಶರ್ಸ್ ಮೀಟ್ ೨೦೨೫ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತದ ಸೌಂದರ್ಯ ಅದರ ವೈವಿಧ್ಯತೆಯಲ್ಲಿ ಅಡಗಿದೆ. ಪರಸ್ಪರದ ಭಿನ್ನತೆಯನ್ನು ಗೌರವಿಸಿ, ಸಾಮಾನ್ಯ ಮೌಲ್ಯಗಳಲ್ಲಿ ಒಂದಾಗುವ ಮನೋಭಾವವೇ ನಮ್ಮ ದೇಶದ ಶಕ್ತಿ. ಈಶಾನ್ಯ ಭಾರತದ ಜನರು ಕರ್ನಾಟಕದ ಜೀವನದ ಅಂಗವಾಗಿ ಬೆರೆತು, ರಾಷ್ಟ್ರದ ಏಕತೆಯನ್ನು ಬಲಪಡಿಸಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ…















