ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ ಪುಣೆ ಇದರ ವತಿಯಿಂದ ಹನುಮ ಜಯಂತಿ ಆಚರಣೆಯು ಎಪ್ರಿಲ್ 6 ರಂದು ಪುಣೆಯ ಸ್ವಾರ್ ಗೇಟ್ ನ ಮಹಾರಾಷ್ಟ್ರ ಚೇಂಬರ್ ಆಫ್ ಕಾಮರ್ಸ್ ಲಕಾಕಿ ಹಾಲ್ ನಲ್ಲಿ ವಿವಿದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು .
ದೀಪ ಕಾರ್ಯಕ್ರಮದ ಮೊದಲಿಗೆ ಪ್ರಾರ್ಥನೆ ಗೈದು ಪುಣೆ ಬಳಗದ ಗೌರವಾಧ್ಯಕ್ಷರಾದ ಸದಾನಂದ ಕೆ .ಶೆಟ್ಟಿ ,ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಮತ್ತು ವಿಬಾಗದ ಅಧ್ಯಕ್ಷೆ ಜಯಲಕ್ಷ್ಮಿ ಪಿ .ಶೆಟ್ಟಿ ಯವರು ಹನುಮ ದೇವರಿಗೆ ದೀಪ ಬೆಳಗಿಸಿ ಪೂಜೆ ಸಲ್ಲಿಸಿದರು ,ನಂತರ ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಸದೆಸ್ಯೆಯರು ಹಾಗು ಬಳಗದ ಸದಸ್ಯರಿಂದ ,ದಾಮೋದರ ಬಂಗೆರರವರ ಮಾರ್ಗದರ್ಶನದಲ್ಲಿ ಬಳಗದ ಭಜನಾ ಮಂಡಳಿಯ ಭಜನೆ ನಡೆಯಿತು .ಸೇರಿದ ಭಕ್ತರೆಲ್ಲರೂ ಸಾಮೂಹಿಕವಾಗಿ ಹನುಮಾನ್ ಚಾಲಿಸವನ್ನು ಪಠಿಸಿದರು ,ನಂತರ ಮಹಾಮಂಗಳಾರತಿ ಪ್ರಸಾದ ವಿತರಣೆ ನಡೆಯಿತು.
ಶ್ರೀ ಸದಾನಂದ ಕೆ .ಶೆಟ್ಟಿ ,ಅಧ್ಯಕ್ಷ ಪ್ರಭಾಕರ್ ಶೆಟ್ಟಿ ,ವೀಣಾ ಪಿ .ಶೆಟ್ಟಿ ದಂಪತಿಗಳು ,ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಗಣೇಶ್ ಹೆಗ್ಡೆ ,ಬಳಗದ ಕಾರ್ಯದರ್ಶಿ ರೋಹಿತ್ ಶೆಟ್ಟಿ ,ಮತ್ತು ಪದಾಧಿಕಾರಿಗಳು ,ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಪದಾಧಿಕಾರಿಗಳು ಸದಸ್ಯೆಯರು ಮತ್ತು ಹಾಗೂ ಸೇರಿದ ಗುರು ಭಕ್ತರೆಲ್ಲರೂ ಆರತಿ ಗೈದರು .ನಂತರ ಮತ್ತು ಪ್ರಸಾದ ವಿತರಣೆ ಜರಗಿತು ,ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ವಿವಿದ ಬಗೆಯ ಭಕ್ಷಗಳನ್ನು ತಯಾರಿಸಿ ಹನುಮನಿಗೆ ಅರ್ಪಿಸಿ ಪ್ರಸಾದ ರೂಪದಲ್ಲಿ ಹಂಚಿದರು .
ಈ ಸಂದರ್ಭದಲ್ಲಿ ಮಾತನಾಡಿದ ಪುಣೆ ಬಳಗದ ಅದ್ಯಕ್ಷರಾದ ಪ್ರಭಾಕರ ಶೆಟ್ಟಿಯವರು ಹನುಮ ಜಯಂತಿಯ ಈ ಶುಭ ಸಂಧರ್ಬದಲ್ಲಿ ನಾವೆಲ್ಲರೂ ಶ್ರೆದ್ದೆ ಭಕ್ತಿಯಿಂದ ರಾಮದೂತ ಹನುಮಂತನ ಸ್ಮರಣೆ ಮಾಡುತ್ತಾ ಹನುಮ ಜಯಂತಿಯನ್ನು ಆಚರಿಸಿದ್ದೇವೆ ,ಸಾಮೊಹಿಕವಾಗಿ ಹನುಮ ಚಾಲಿಸ್ ನಲ್ಲಿ ಪಠನೆಯಿಂದ ಅದೇನೋ ಒಂದು ದೈವಿಕ ಶಕ್ತಿಯ ಸಂಚಲನ ನಮ್ಮಲ್ಲಿ ಮೂಡಿ ಬರುತ್ತದೆ ,ನಾವು ಭಕ್ತಿಯಿಂದ ಪ್ರಾರ್ಥಿಸಿ ಹನುಮನ ನಂಬಿ ಮಾಡುವ ಪ್ರತಿಯೊಂದು ಕಾರ್ಯವು ಪಲಪ್ರದವಾಗುತ್ತದೆ,ನಮ್ಮ ಜೀವನದಲ್ಲಿ ಕೂಡ ನಾವು ಸಾರ್ಥಕತೆಯನ್ನು ಪಡೆಯಬೇಕಾದರೆ ಉತ್ತಮ ಸಂಸ್ಕಾರ, ಸತ್ಯ ಧರ್ಮ ,ಶಾಂತಿ ಸ್ನೇಹಮಯ ಜೀವನದ ದಾರಿಯಲ್ಲಿ ನಡೆಯಬೇಕು .ನಮ್ಮ ಹಿಂದೂ ಪರಂಪರೆ ಸನಾತನ ಸಂಸ್ಕ್ರತಿಯ ಮೂಲಕ ನಮ್ಮ ಸತ್ಕರ್ಮ ಪಲ ಏನಿದೆಯೋ ಅದರ ಮುಖಾಂತರ ಸುಡ್ರದ ಸಮಾಜ ನಿರ್ಮಾಣವಗಬಹುದುಎಂದರು .
ಈ ಸಂದರ್ಭದಲ್ಲಿ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಗಣೇಶ್ ಹೆಗ್ದೆ, ಬಳಗದ ಪ್ರಮುಖರಾದ ಮಾಜಿ ಅಧ್ಯಕ್ಷ ನಾರಾಯಣ ಶೆಟ್ಟಿ , ಉಪಾಧ್ಯಕ್ಷ ರಂಜಿತ್ ಶೆಟ್ಟಿ ,ಪದ್ಮನಾಭ ಶೆಟ್ಟಿ ಮಾಧವ ಶೆಟ್ಟಿ ,ಪುರಂದರ ಪೂಜಾರಿ , ಸುಧಾಕರ್ ಶೆಟ್ಟಿ ,ಅಜಿತ್ ಶೆಟ್ಟಿ ,ಸುರೇಶ್ ಶೆಟ್ಟಿ ಶಬರಿ ,ಜಗದೀಶ್ ಹೆಗ್ಡೆ ,ದಾಮೋದರ ಬಂಗೇರ ,ನಾಗರಾಜ್ ಶೆಟ್ಟಿ ,ಸುರೇಶ್ ಶೆಟ್ಟಿ ,ಸುಭಾಷ್ ಶೆಟ್ಟಿ ,ಜಯ ಶೆಟ್ಟಿ ,ಬಂಟ್ಸ್ ಅಸೋಸಿಯೇಷನ್ ಮಹಿಳಾ ವಿಬಾಗದ ಅಧ್ಯಕ್ಷೆ ಉಷಾ ಯು .ಶೆಟ್ಟಿ , ಮಾಜಿ ಅಧ್ಯಕ್ಷೆ ಸುಧಾ ಎನ್.ಶೆಟ್ಟಿ ,ದೀಪಾ ಎ .ರೈ, ವಜ್ರಮಾತೆ ಮಹಿಳಾ ವಿಕಾಸ ಕೇಂದ್ರದ ,ಶೋಭಾ ಯು .ಶೆಟ್ಟಿ ,ವೀಣಾ ಪಿ ಶೆಟ್ಟಿ ಸರೋಜಿನಿ ಡಿ. ಬಂಗೇರ .ಪ್ರೇಮ ಎಸ್.ಶೆಟ್ಟಿ ,ಪುಷ್ಪ ಪೂಜಾರಿ , ವೀಣಾ ಡಿ.ಶೆಟ್ಟಿ ,ಸರೋಜಿನಿ ಡಿ. ಬಂಗೇರ ,ಅಮಿತಾ ಪಿ .ಪೂಜಾರಿ,ಸುಜಾತ ಎ . ಶೆಟ್ಟಿ ,ಲಲಿತಾ ಪೂಜಾರಿ ಶ್ವೇತಾ ಎಚ್ ಮೂಡಬಿದ್ರಿ ,,ಮಮತಾ ಡಿ.ಶೆಟ್ಟಿ , ರಜನಿ ಹೆಗ್ಡೆ ,ಸ್ವರ್ಣಲತಾ ಜೆ ಹೆಗ್ಡೆ ,ವನಿತಾ ,ಎಸ್ .ಕರ್ಕೇರ ,ಅರ್ಚನಾ ಶೆಟ್ಟಿ ,ಉಮಾ ಶೆಟ್ಟಿ ,ಸಂದ್ಯಾ ಶೆಟ್ಟಿ ಹಾಗೂ ಹೆಚ್ಚಿನ ಗುರು ಭಕ್ತರು ಉಪಸ್ತಿತರಿದ್ದು ಹನುಮ ಕೃಪೆಗೆ ಪಾತ್ರರಾದರು, ಕಾರ್ಯದರ್ಶಿ ರೋಹಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು ,ಮಂಗಳಾರತಿ ನಂತರ ಪ್ರಸಾದ ವಿತರಣೆ ಹಾಗು ಲಘು ಉಪಾಹಾರ ನಡೆಯಿತು .
ನಮ್ಮ ಹಿಂದೂ ಧರ್ಮ ಪದ್ದತಿಯಂತೆ ಸನಾತನ ಸಂಸ್ಕ್ರತಿ ಉಳಿಯಬೇಕು ,ನಮ್ಮ ಭಕ್ತಿ ಮಾರ್ಗದ ಧಾರ್ಮಿಕತೆ ಏನಿದೆಯೋ ಅದನ್ನು ಗಟ್ಟಿ ಗೊಳಿಸುವಲ್ಲಿ ಇಂತಹ ಬೇರೆ ಬೇರೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಬೇಕು ,ಇಲ್ಲಿ ಬಳಗದ ಮುಖಾಂತರ ಸುಮಾರು 22 ವರ್ಷಗಳಿಂದ ಹನುಮ ಜಯಂತಿ ಆಚರಣೆ ಬಹಳ ಶ್ರದ್ದಾ ಭಕ್ತಿಯಿಂದ ನಡೆಸಿಕೊಂಡು ಬರುತಿದ್ದಾರೆ .ಒಳ್ಳ್ಲೆಯ ಧಾರ್ಮಿಕ ಕಾರ್ಯಕ್ರಮ ಹನುಮ ಜಯಂತಿಯಲ್ಲಿ ಪಾಲ್ಗೊಂಡು ಧನ್ಯನಾದೆ -ಗಣೇಶ್ ಹೆಗ್ಡೆ ಪುಣ್ಚೂರು,ಅಧ್ಯಕ್ಷರು ಬಂಟ್ಸ್ ಅಸೋಸಿಯೇಷನ್ ,ಪುಣೆ.
ನಮ್ಮ ಹಿಂದೂ ಸಂಸ್ಕ್ರತಿಯ ಪದ್ದತಿಯಂತೆ ನಮ್ಮ ಜೀವನ ಶೈಲಿ ನಡೆಯಿತಿದೆ ,ಹನುಮ ದೇವರು ಎಂದರೆ ಅದುಭಗವಂತನ ಭಕ್ತಿಯ ಸೇವೆಯ ಪ್ರತೀಕ,ನಮ್ಮ ಸೇವಾ ಬಳಗ ಕೂಡಾ ಸ್ವಾಮಿಜಿಯವರ ಸಾಮಾಜಿಕ ಸೇವೆಗೆ ಹೊಂದಿಕೊಂಡು ಹೋಗುವ ಸಂಸ್ಥೆ ,ನಾವು ಇಲ್ಲಿ ಭಕ್ತಿ ಭಾವದಿಂದ ಆಚರಿಸುವ ಯಾವುದೇ ಧಾರ್ಮಿಕ ಕಾರ್ಯಕ್ರಮಕ್ಕೆ ಮಹತ್ವವಿದೆ ,ನಾವಿಂದು ಹನುಮ ಜಯಂತಿಯನ್ನು ಶ್ರದ್ದಾ ಭಕ್ತಿಯಿಂದ ಆಚರಿಸಿದ್ದೇವೆ ಎಲ್ಲರಿಗು ಅನುಗ್ರಹ ಸಿಗಲಿ ಎಂದು ಪ್ರಾರ್ಥಿಸುತ್ತೇನೆ -ಶ್ರೀಮತಿಜಯಲಕ್ಷ್ಮಿ ಪಿ .ಶೆಟ್ಟಿ ,ಅಧ್ಯಕ್ಷೆ ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರ ಪುಣೆ.
ಚಿತ್ರ ವರದಿ ಹರೀಶ್ ಮೂಡಬಿದ್ರಿ