ರಿಷಬ್ ಶೆಟ್ಟಿ ಮಾತ್ರವಲ್ಲದೆ ತುಳುನಾಡಿನ ಸಮಸ್ತ ಚಿತ್ರ ನಿರ್ದೇಶಕ ನಿರ್ಮಾಪಕರಿಗೆ ನನ್ನದೊಂದು ವಿನಂತಿ. ಕಾಂತಾರ ಸಿನಿಮಾದಂತಹ ಚಿತ್ರ ಮೇಲ್ನೋಟಕ್ಕೆ ಉತ್ತಮವಾಗಿ ಕಂಡು ಬಂದರೂ. ಇಂದು ಬೀದಿ ಬೀದಿಗಳಲ್ಲಿ ಕಾಂತಾರ ಸಿನಿಮಾದ ದೃಶ್ಯಗಳು ಮನರಂಜನೆಗೆ ಒಳಗಾಗಿರುವುದು ಕಂಡಾಗ ನನ್ನಂತಹ ದೈವ ಭಕ್ತರಿಗೆ ತುಂಬಾ ಬೇಸರವಾಗುವುದು ಸಹಜ. ಮೇಲಿಂದ ಮೇಲೆ ದೈವಗಳಿಗೆ ಅವಮಾನ ಆಗುತ್ತಿದ್ದರೂ ತುಳುವರು ಸಹಿಸಿಕೊಂಡಿರುವುದು ನಮ್ಮ ದುರಾದೃಷ್ಟ.
ಬೆರ್ಮರೆ ಸೃಷ್ಠಿ ! ತುಳುನಾಡಿನ ದೈವಾರಾಧನೆ ನೇಮ ಕೋಲಗಳಂತಹ ಆಚರಣೆಗಳಿಗೆ ಇರುವ ಮಹತ್ವ ಪ್ರಪಂಚದ ಬೇರೆ ಯಾವುದೇ ಆಚರಣೆಗೆ ಇಷ್ಟೊಂದು ಮಹತ್ವ ಇಲ್ಲಾ ಎಂದರೆ ತಪ್ಪಾಗಲಾರದು. ಹೇಗೆಂದರೆ ಸಿನಿಮಾದಲ್ಲಿ ಬಂದ ದೈವಗಳ ದೃಶ್ಯ ಇಂದು ದೇಶದಾದ್ಯಂತ ವೇದಿಕೆಗಳಲ್ಲಿ ಆಕರ್ಷಣೆ ಮತ್ತು ಮನರಂಜನೆಗಾಗಿ ಮೊದಲ ಆಯ್ಕೆ ಪಡೆದುಕೊಂಡಿರುವುದೇ ಇದಕ್ಕೆ ಸಾಕ್ಷಿ.
ಕಾಂತಾರ ಸಿನಿಮಾ ಒಂದು ದೈವಗಳನ್ನು ದೇಶದಾದ್ಯಂತ ಪರಿಚಯಿಸುವ ಸಿನಿಮಾ ಆದರೂ ಅದರಿಂದ ಸಾಧಕಕ್ಕಿಂತಲೂ ಬಾಧಕ ಫಲಿತಾಂಶ ದೈವಾರಾಧಕರ ಮುಂದೆ ಇರುವುದು ಸತ್ಯ ಸಂಗತಿ. ನಮ್ಮ ತುಳುನಾಡಿನ ದೈವ ಸಂಸ್ಕ್ರತಿಯನ್ನು ಹೊರಗಿನವರಿಗೆ ಪರಿಚಯಿಸುವ ಕಾರ್ಯ ಉತ್ತಮ ಕೆಲಸವಾಗಿದ್ದರೂ ಕೂಡಾ ಅದನ್ನು ಪುಸ್ತಕ ದಾಖಲೆಗಳಲ್ಲಿ ಪರಿಚಯಿಸುವುದು ಒಳ್ಳೆಯ ಹೆಜ್ಜೆ.
ಸಿನಿಮಾ ನಾಟಕಗಳಲ್ಲಿ ದೈವ ಕಾರ್ಣಿಕಗಳನ್ನು ತಿಳಿಯ ಪಡಿಸುವ ದೃಶ್ಯಗಳನ್ನು ಮಾತ್ರ ಪ್ರದರ್ಶಿಸಬೇಕೇ ವಿನಃ. ದೈವದ ಪರಿಕರಗಳನ್ನು ಉಪಯೋಗಿಸಿ ಕೊಡಿ ಅಡಿಯಲ್ಲಿ ನಡೆಯಬೇಕಾದ ಕಟ್ಟು ಕಟ್ಟಳೆಗಳನ್ನು ಬಳಸಿ ಚಿತ್ರೀಕರಣ ಮಾಡುವುದು ಅಥವಾ ದೈವಗಳ ಬಣ್ಣ ಹಚ್ಚಿ ಅಣಿ ಗಗ್ಗರ ಜೀಟಿಗೆಗಳಂತಹ ದೈವಗಳಿಗೆ ಪ್ರಿಯವಾಗಿರುವ ಪರಿಕರಗಳನ್ನು ಹಣ ಸಂಪಾದಿಸುವ ಮತ್ತು ಅವಾರ್ಡ್ ಪಡೆಯುವ ಸಲುವಾಗಿ ಮನರಂಜನೆಗೆ ಬಳಸುವುದು ಅಕ್ಷಮ್ಯ ಅಪರಾಧ. ಮುಂದಿನ ದಿನಗಳಲ್ಲಿ ಕಾಂತಾರ 2 ಎಂಬ ಹೆಸರಿನ ಸಿನಿಮಾ ತಯಾರಾದರೂ ಇದೊಂದು ಹಣ ಸಂಪಾದಿಸುವ ಉದ್ದೇಶವೇ ಹೊರತು ದೈವಗಳನ್ನು ಪ್ರಪಂಚಕ್ಕೆ ಪರಿಚಯಿಸುವ ಉದ್ದೇಶವಂತೂ ಅಲ್ಲವೇ ಅಲ್ಲ. ಇಂತಹ ಸಿನಿಮಾಗಳು ಪುನರಾವರ್ತನೆ ಆಗದ ಹಾಗೆ ನಾವೆಲ್ಲಾ ತುಳುವರು ದೈವಾರಾಧಕರು ಕಾರ್ಯತತ್ಪರರಾಗಲೇ ಬೇಕು.
ಪ್ರಪಂಚದಾದ್ಯಂತ ಪಸರಿಸಿರುವ ತುಳುವರ ಸಂಸಾರ ದೈವದ ಬಗೆಗಿನ ಭಕ್ತಿ ಮತ್ತು ದೈವಾರಾಧನೆಯ ಅಗತ್ಯವನ್ನು ವರ್ಷಕ್ಕೊಮ್ಮೆ ತುಳುನಾಡಿನ ಪೂರ್ವಜರ ಮಣ್ಣಿಗೆ ಬಂದು ಸಕಲರನ್ನು ಕೂಡಿ ದೈವದ ಕೊಡಿ ಅಡಿಯಲ್ಲಿ ನಡೆಯುವ ನೇಮ ಕೋಲ ಆರಾಧನೆಗಳಿಗೆ ಸ್ಪಂದಿಸಿ ಸಂಭ್ರಮಿಸಿ ಜೀವನವನ್ನು ಪಾವನಗೊಳಿಸಿವುದೇ ಈ ಬೆರ್ಮೆರೆ ಸೃಷ್ಠಿ ತುಳುನಾಡಿನ ಸಂಸ್ಕ್ರತಿಯ ವೈಶಿಷ್ಟ್ಯ.
ಚಂದ್ರಕೃಷ್ಣ ಶೆಟ್ಟಿ ಬೆರ್ಮೊಟ್ಟು