ಯಾರಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸುವುದು ಇಷ್ಟವಿಲ್ಲ ಹೇಳಿ? ಈ ದಿನ, ಪುಟ್ಟ ಮಕ್ಕಳಿಗಂತೂ ಸಂಭ್ರಮ ಹೇಳತೀರದು! ಹುಟ್ಟಿದ ದಿನವನ್ನು ಹಬ್ಬವನ್ನಾಗಿ ಆಚರಿಸುವುದು ಮೊದಲಿನಿಂದಲೂ ರೂಢಿಯಲ್ಲಿದೆ. ಹಿಂದೂ ಸಂಸ್ಕೃತಿಯಲ್ಲಿ ಈ ಆಚರಣೆಯು ಧಾರ್ಮಿಕ ಪದ್ಧತಿಯಲ್ಲಿ ಆಚರಿಸಲ್ಪಡುತ್ತಿತ್ತು. ಆದರೆ ಇತ್ತೀಚೆಗೆ ಎಲ್ಲದರಂತೆ ಅದರ ಮೇಲೂ ಆಂಗ್ಲ ಸಂಸ್ಕೃತಿಯ ಹಾವಳಿ ತೀವ್ರವಾಗಿ ಆಗಿರುವುದನ್ನು ಕಾಣಬಹುದು. “ಹೆಪ್ಪಿ ಬರ್ತ್ ಡೇ..” ಎಂದು ಶುಭಾಶಯ ಹೇಳುವುದು ಸಾರ್ವತ್ರಿಕವಾಗಿ ನಡೆಯುತ್ತಿದೆ. ಕೇಕ್ ಕತ್ತರಿಸಿ, ಉರಿಯುವ ಮೇಣದ ಬತ್ತಿಯನ್ನು ಆರಿಸಿ ಸಂಭ್ರಮಿಸುವುದೇ ಹುಟ್ಟುಹಬ್ಬದ ನಿಜವಾದ ಆಚರಣೆ ಎನ್ನುವಷ್ಟು ಎಲ್ಲರ ಜೀವನದಲ್ಲಿ ಇದು ಹಾಸುಹೊಕ್ಕಾಗಿದೆ.
ಹಿಂದೂ ಪದ್ಧತಿಯಲ್ಲಿ ಹಿರಿಯರ ಜನ್ಮದಿನದ ಆಚರಣೆಯು ಬಹಳ ಅರ್ಥವತ್ತಾಗಿ ನಡೆಯುತ್ತದೆ. ಆ ದಿನ ಕಿರಿಯರೆಲ್ಲರೂ ಅವರ ಆಶೀರ್ವಾದ ಪಡೆದು, ಮನೆಯವರೆಲ್ಲರೂ ಸಿಹಿಯೂಟ ಉಂಡು ಸಂಭ್ರಮಿಸುವರು. ಕಿರಿಯರಾದರೆ, ಹೊಸಬಟ್ಟೆ ಧರಿಸಿ, ದೀಪ ಬೆಳಗಿದ ದೇವರೆದುರು ಕುಳಿತಾಗ ಆ ಮಗುವಿನ ಹೆತ್ತವರು ಆರತಿ ಬೆಳಗುವರು. ಆ ಬಳಿಕ ಹಿರಿಯರ ಆಶೀರ್ವಾದದೊಂದಿಗೆ ತಮ್ಮಿಷ್ಟದ ಉಡುಗೊರೆಗಳನ್ನು ಪಡೆದು ಸಿಹಿಯುಂಡು ನಲಿಯುವರು.
ಇಂದು ಸಮಾಜ ಸೇವಕ, ಧಾರ್ಮಿಕ ಮುಂದಾಳು, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ ಪಡುಬಿದ್ರೆ ಪೇಟೆಮನೆ ಉಮೇಶ್ ಶೆಟ್ಟಿಯವರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಉಮೇಶ್ ಶೆಟ್ಟರು ವಿದೇಶದಲ್ಲಿ ದುಡಿಯುತ್ತಿದ್ದು ತಮ್ಮ ಗಳಿಕೆಯ ಸ್ವಲ್ಪ ಅಂಶವನ್ನು ಸಮಾಜಸೇವೆಗೆ ವಿನಿಯೋಗಿಸುತ್ತಿದ್ದಾರೆ. ಜನವರಿ ತಿಂಗಳಲ್ಲಿ ಡಕ್ಕೆ ಬಲಿ ಸೇವೆಯನ್ನೂ ಯಶಸ್ವಿಯಾಗಿ ಪಡುಬಿದ್ರೆ ಬ್ರಹ್ಮಸ್ಥಾನದಲ್ಲಿ ನೆರವೇರಿಸಿದ್ದರು. ಪತ್ನಿ, ಇಬ್ಬರು ಪುತ್ರ, ಪುತ್ರಿಯೊಂದಿಗೆ ಸುಖಿ ಸಂಸಾರ ಹೊಂದಿರುವ ಉಮೇಶ್ ಶೆಟ್ಟರಿಗೆ ಸಮಸ್ತ ಬಂಟ ಸಮಾಜದ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳು.
ಜನ್ಮ ದಿನಮಿದಂ| ಐ ಪ್ರಿಯ ಸಖೇ|
ಶಂತನೋ ತು ತೇ| ಸರ್ವದಾಮುದಂ|
ಪ್ರಾರ್ಥನಾಮಹೇ| ಭವ ಶತಾಯುಷೀ|
ಈಶ್ವರ ಸದಾ| ತ್ವಾ ಚ ರಕ್ಷತು|
ಪುಣ್ಯ ಕರ್ಮಣಾ| ಕೀರ್ತಿಂ ಅರ್ಜಯ|
ಜೀವನಂ ತವಾ| ಭವತು ಸಾರ್ಥಕಂ||
ಭಾವಾರ್ಥ ಕನ್ನಡದಲ್ಲಿ:
ನಿಮ್ಮ ಈ ಹುಟ್ಟುಹಬ್ಬದ ದಿನವು ನಿಮಗೆ ಸಂಪೂರ್ಣ ಸಂತೋಷವನ್ನು ನೀಡಲಿ. ನೂರು ವರುಷಗಳ ಅತ್ಯಂತ ಸುಂದರ ಜೀವನವನ್ನು ನೀವು ಆನಂದಿಸುವಂತಾಗಲಿ ಎಂದು ದೇವರಲ್ಲಿ ಬೇಡುವೆವು. ಭಗವಂತನು ಸದಾ ನಿಮ್ಮನ್ನು ರಕ್ಷಿಸಲಿ! ಸದ್ಗುಣ ಶೀಲರಾದ ನೀವು , ನಿಮ್ಮ ಒಳ್ಳೆಯ, ಸರಿಯಾದ ಕೆಲಸಗಳಿಗಾಗಿ ಪ್ರಖ್ಯಾತಿಯನ್ನು ಹೊಂದುವಂತಾಗಲಿ. ನಿಮ್ಮ ಜೀವನವು ಪರಿಪೂರ್ಣವಾಗಿರಲಿ ಎಂದು ಹಾರೈಸುವೆವು.
ಭಾವಾರ್ಥ ಇಂಗ್ಲಿಷಲ್ಲಿ:
My dear friend, it is your Birthday. May this birthday bring you great joy and be an auspicious occasion. We pray that you enjoy a 100 beautiful years of life. And may the Almighty always protect you! May you be virtuous and earn fame for always doing the right thing. May you live a fulfilling life.