ಗೋಲ್ಕೊಂಡ ಕೋಟೆ ಅಥವಾ ಗೊಲ್ಲಕೊಂಡ ಕೋಟೆ ಹೈದರಾಬಾದ್ ನಗರದಿಂದ 15 ಕಿಮೀ ದೂರದಲ್ಲಿದೆ. ಇದನ್ನು ಮಂಗಳಗಿರಿ ಎಂದು ಕರೆಯುತ್ತಾರೆ . ಕುರಿಗಾಹಿಗಳ ದಿಟ್ಟ ಎಂಬ ಅರ್ಥವೂ ವಿದೆ. ಇಲ್ಲಿಗೆ ಗುಂಪಿನಲ್ಲಿ ಹೋಗಿ ನೋಡಿ ಬರಬಹುದು. ಏಕಾಂಗಿಯಾಗಿ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ. ಲೂಟಿಕೊರರು, ವಂಚಕರ ತಾಣವಿದು, ಇಲ್ಲಿ ಕಾವಲುಗಾರರಿದ್ದಾರೆ ಆದರೆ ಅವರು ಬರೆ ಲೆಕ್ಕಕ್ಕೆ ಅಷ್ಟೇ. ಯಾದವ ರಾಜವಂಶದ ಅವಧಿಯಲ್ಲಿ ನಿರ್ಮಾಣವಾಗಿದ್ದ ಈ ಕೋಟೆ ಒಬ್ಬ ದನ ಕಾಯುವವನಿಗೆ ಇಲ್ಲಿ ಒಂದು ದೇವತಾ ಮೂರ್ತಿ ದೊರೆತ ಕಾರಣ ಆಗಿನ ರಾಜರು ಈ ಸ್ಥಳದಲ್ಲಿ ಮಣ್ಣಿನ ಕೋಟೆಯನ್ನು ನಿರ್ಮಾಣ ಮಾಡಿದ್ದರು. ದನ ಕಾಯುವ ಗೊಲ್ಲನಿಗೆ ಮೂರ್ತಿ ಸಿಕ್ಕಿ ಅರಮನೆ ಕಟ್ಟಲು ಕಾರಣವಾದುದಕ್ಕೆ ಈ ಕೋಟೆಗೆ ಗೊಲ್ಲಕೊಂಡ ಅಂತಲೂ ನಂತರ ಗೋಲ್ಕೊಂಡ ಕೋಟೆ ಎಂದು ಕರೆಯಲಾಯಿತು. ಈ ಅರಮನೆ 5 ಕಿ.ಮಿಗೂ ಹೆಚ್ಚಿನ ವಿಸ್ತಾರ ಹೊಂದಿದೆ. 400 ಅಡಿ ಎತ್ತರದ ಒಂದು ಗ್ರಾನೈಟ್ ಪರ್ವತದ ಮೇಲೆ 4 ಪ್ರತ್ಯೇಕವಾದ ಕೋಟೆ ಮತ್ತು ಕೋಟೆಯ ಸುತ್ತಲೂ ಅದ್ಬುತವಾದ ಪ್ರಕಾರದಿಂದ ಕಟ್ಟಲಾಗಿದೆ. 100 ಕ್ಕೂ ಹೆಚ್ಚು ಕಮಾನುಗಳು ಇದ್ದು ಈ ಕೋಟೆಗೆ ಶೋಭೆ ಹೆಚ್ಚಿಸಿವೆ. 300 ಮೆಟ್ಟಿಲುಗಳನ್ನು ಹತ್ತಿಹೋಗುವು ಒಂದು ದೊಡ್ಡ ಸಾಹಸ.
1518 ರಲ್ಲಿ ಕುಲಿಕುತುಬಾಷಾ ಬಹುಮನಿ ಸುಲ್ತಾನನ್ನು ಓಡಿಸಿ ಗೋಲ್ಕೊಂಡ ಕೋಟೆಯನ್ನು ರಾಜಧಾನಿಯಾಗಿ ಕುಲಿಕುತುಬಾಷಾಹಿ ಸಾಮ್ರಾಜ್ಯವಾಗಿ ಆಳ್ವಿಕೆ ಮಾಡಿದ. ಒಬ್ಬ ರಾಜ ದ್ರೋಹಿ ಮೊಗಲ್ ಸೈನ್ಯ ನೀಡುವ ಹಣ ಧನ ಕನಕದ ಆಸೆಗೆ ಬಿದ್ದು ಕೋಟೆಯ ರಹಸ್ಯಗಳನ್ನು ಶತ್ರು ಸೈನ್ಯಕ್ಕೆ ತಿಳಿಸಿದನು. ಹಾಗಾಗಿ ಔರಂಗಜೇಬ್ ಸುಲಭವಾಗಿ ಗೋಲ್ಕೊಂಡ ಕೋಟೆ ಯನ್ನು ವಶಪಡಿಸಿಕೊಂಡನು. ಮೊಗಲ್ ಸೈನ್ಯ ಗೋಲ್ಕೊಂಡ ಕೋಟೆಯನ್ನು ದ್ವಂಸಮಾಡಲು ಕಾರಣ ವಾಯಿತು ಎನ್ನುವ ದಾಖಲೆ ಇಲ್ಲಿ ಇದೆ. ಭಾರತದ ವಿಶ್ವ ವಿಖ್ಯಾತ ಕೊಹಿನೂರ್ ವಜ್ರ ಕೂಡ ಕುತುಬ್ ಷಾಹಿಗಳ ಕಾಲದಲ್ಲಿ ಇಲ್ಲಿ ಇತ್ತಂತೆ. ಅಷ್ಟೇ ಅಲ್ಲದೇ ಗೋಲ್ಕೊಂಡ ವಜ್ರಗಳ ವ್ಯಾಪಾರಕ್ಕೆ ಹೆಚ್ಚು ಪ್ರಸಿದ್ಧ .
ಕೋಟೆ ಕಥೆ : ಅಜೀರ್ಣ ಅವಸ್ಥೆಯಲ್ಲಿರುವ ಈ ಕೋಟೆಯಲ್ಲಿ ಹುಲ್ಲು ಬೆಳೆದು ಕಸಕಡ್ಡಿ ಕಂಡ ಕಂಡಲ್ಲಿ ಕಾಣಸಿಗುತ್ತದೆ. ಶ್ರಮದಾಯಕವಾಗಿ ಕಟ್ಟಿದ ಕೋಟೆಯೊಂದು ಹಾಳು ಕೊಂಪೆಯಾದ ನಿದರ್ಶನವಿದು.
ತಾರಮತಿ ಮತ್ತು ಪ್ರೇಮಮತಿ ಎಂಬ ಇಬ್ಬರು ನರ್ತಕಿಯರು ವಾಸಿಸುತ್ತಿದ್ದು ತನ್ನ ಪ್ರೇಮ ವಿಫಲತೆಯಿಂದ ದುರ್ಮರಣಕ್ಕೆ ಒಳಗಾಗಿದ್ದು. ಇಲ್ಲಿ ಇವರ ಆತ್ಮಗಳು ಸಂಚಾರಿಸುತ್ತದೆ ಎಂಬ ವದಂತಿಗಳಿವೆ. ರಾತ್ರಿ ಇಲ್ಲಿ ಭಯಾನಕ ಶಬ್ದಗಳು ಕೇಳಿಸುತ್ತದೆ ಎನ್ನುತ್ತಾರೆ. ಅಳುವುದು, ಗೆಜ್ಜೆ ಶಬ್ದ, ಹಾಡು ಹೀಗೆ ಬೇರೆ ಬೇರೆ ಸಂಗೀತ ವಾದ್ಯ ಗಳ ಧ್ವನಿ ತೇಲಿ ಬರುತ್ತದೆ ಎಂಬ ಭಯ ಜನರಲ್ಲಿ ಇಂದಿಗೂ ಇದೆಯಂತೆ. ಅಬ್ದುಲ್ ಕುತುಬ್ ಷಾಹಿ ತಾರಮತಿ ಸೌಂದರ್ಯ ಕಂಡು ಪ್ರೇಮದಲ್ಲಿ ಬೀಳುತ್ತಾನೆ. ತಾರಮತಿ ಕೂಡ ಸುಲ್ತಾನ್ ನ ಪ್ರೇಮಕ್ಕೆಬಿದ್ದು ಅವಳಿಗೆ ಭವನಗಳನ್ನು ಕಟ್ಟಿಕೊಡುತ್ತಾನೆ. ತಾರಮತಿ ಹಾಗೂ ಸುಲ್ತಾನ್ ವಿವಾಹವಾಗುವ ಮೊದಲೆ ಆಕಸ್ಮಿಕವಾಗಿ ತಾರಮತಿ ಸಾವನ್ನಪ್ಪುತ್ತಾಳೆ. ತಾನು ಪ್ರೇಮಿಸಿದ ಭಾಗವತಿಯ ಗುರುತಿಗಾಗಿ ಭಾಗ್ಯ ನಗರವನ್ನು ನಿರ್ಮಾಣ ಮಾಡಿದ ಮಹಮ್ಮದ್ ಕುತುಬ್ ಷಾ ಮೊಮ್ಮಗನಾದ 7 ನೇ ಕುತುಬ್ ಷಾಹಿ ಸುಲ್ತಾನ್ ಅಬ್ದಲ್ ಕುತುಬ್ ಷಾ.
ಈ ಕೋಟೆ ಸಂದರ್ಶನ ಬೆಳಿಗ್ಗೆ 9 ರಿಂದ ಸಂಜೆ 5.30ರ ವರೆಗೆ ಇದೆ. ಹೈದರಾಬಾದ್ ಸಿಟಿಯಿಂದ ಬಸ್ಸುಗಳ ವ್ಯವಸ್ಥೆ ಚೆನ್ನಾಗಿದೆ. ಆದರೆ ನೋಡಬಹುದಾದ ಸುಂದರ ಕುರುಹುಗಳು ಅಳುತ್ತಿವೆ. ಮುರಿದ ಗೋಡೆಗಳ ಮಣ್ಣು, ಧೂಳು,ಹಾಳು ಮುಳಾದ ಅರಮನೆ ಉಳಿಸು ಕೊಳ್ಳುವ ಅಗತ್ಯವಿದೆ. ಪ್ರವಾಸಿ ಗಳಿಗೆ ಆಕರ್ಷಣೆ ಕೇಂದ್ರ ಬಿಂದುವಾಗುವ ಸಹಜ ಸೌಂದರ್ಯದ ಅರಮನೆ ಇದು. ಆದರೆ ದುರಾದೃಷ್ಟವಶಾತ್ ಪ್ರವಾಸಿಗರು ವೆಚ್ಚುಗೆಯ ಬದಲು ಮೂಗು ಮುರಿಯುತ್ತಾ ಇಲ್ಲಿಗೆ ಕರೆ ತಂದ ಗೈಡಿಗೆ ಶಪಿಸುತ್ತಾರೆ.
ಲತಾ ಸಂತೋಷ ಶೆಟ್ಟಿ ಮುದ್ದುಮನೆ.