ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿಯವರ ಮಾರ್ಗದರ್ಶನದಲ್ಲಿ ಹಾಗೂ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಶಾಂತಾರಾಮ್ ಬಿ. ಶೆಟ್ಟಿಯವರ ನೇತೃತ್ವದಲ್ಲಿ ಪ್ರತೀ ವರ್ಷ ಸಮಾಜ ಕಲ್ಯಾಣ ಸಮಿತಿಯ ಆಶ್ರಯದಲ್ಲಿ ಕೊಡಲ್ಪಡುವ ಧನ ಸಹಾಯವು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಮಾಜದ ಬಂಟ ಬಂಧುಗಳ ವಿಧ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ವಾರ್ಷಿಕ ವಿಧವಾ ವೇತನ, ಮತ್ತು ಮಾನಸಿಕ ಅಸ್ವಸ್ಥೆಯಲ್ಲಿರುವ ಯಾ ವಿಕಲಾಂಗ ಚೇತನರಿಗೆ ಆರ್ಥಿಕ ಧನ ಸಹಾಯ ವಿತರಣೆಯು ಜೂನ್ ತಿಂಗಳಲ್ಲಿ ನಡೆಯಲಿದೆ.
ಈ ಪ್ರಯುಕ್ತ ಅರ್ಜಿ ವಿತರಣೆಯು ಬಂಟರ ಸಂಘ ಮುಂಬಯಿ ಇದರ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಆಶ್ರಯದಲ್ಲಿ ಕಾರ್ಯಾಧ್ಯಕ್ಷ ಶಿವಪ್ರಸಾದ್ ಶೆಟ್ಟಿಯವರ ಸಮಕ್ಷಮದಲ್ಲಿ ಹಾಗೂ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ್ ಶೆಟ್ಟಿಯವರ ಮುಂದಾಳತ್ವದಲ್ಲಿ ಇದೇ ಬರುವ ಮಾ.19ರ ಆದಿತ್ಯವಾರದಂದು ರೈ ಎಜ್ಯುಕೇಶನ್ ಟ್ರಸ್ಟ್ ನ ಸೈಂಟ್ ಅಗ್ನೇಸಿಯಸ್ ಹೈಸ್ಕೂಲ್, ಎಸ್. ಎನ್ ಕಾಲೇಜ್ ಸಮೀಪ ಶಿವಶಕ್ತಿ ನಗರ, ನವಘರ್ ರೋಡ್, ಭಯಂದರ್ (ಪೂ) ಇಲ್ಲಿ ಬೆಳಿಗ್ಗೆ 10.30 ರಿಂದ ಮದ್ಯಾಹ್ನ ಗಂ. 1.30 ತನಕ ನಡೆಯಲಿರುವುದು.
ಈ ಪ್ರಯುಕ್ತ ಇದರ ಲಾಭವನ್ನು ಪಡೆಯಲಿಚ್ಛಿಸುವ ಸಮಾಜ ಬಾಂಧವರು ಸಮಯಕ್ಕೆ ಸರಿಯಾಗಿ ಹಾಜರಿದ್ದು ಸಹಾಯ ಧನ ವಿತರಣೆಯ ಲಾಭವನ್ನು ಪಡೆದುಕೊಳ್ಳಬಹುದು. ಅರ್ಜಿಯನ್ನು ಪಡೆಯಲಿಚ್ಚಿಸುವ ಸಮಾಜ ಬಾಂಧವರು ತಮ್ಮ ಗುರುತು ಪತ್ರ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಮನೆಯ ವಿದ್ಯುತ್ ಬಿಲ್ ಪ್ರತಿ, ಮಕ್ಕಳ ಇತ್ತೀಚಿನ ಶಾಲಾ ದಾಖಲೆ (ಮಾರ್ಕ್ಸ್ ಕಾರ್ಡ್), ಭಾವ ಚಿತ್ರ, ವಿಧವಾ ವೇತನ ಮತ್ತು ವಿಕಲಾಂಗ ಚೇತನದ ಲಾಭ ಪಡೆಯಲಿಚ್ಚಿಸುವ ಸಮಾಜ ಬಾಂಧವರು ಸಂಭಂದ ಪಟ್ಟ ದಾಖಲೆಗಳನ್ನು ಕಡ್ಡಾಯವಾಗಿ ಲಗತ್ತಿಸಿರಬೇಕು. ಅರ್ಜಿ ಪಡೆಯಲಿಚ್ಚಿಸುವ ಅರ್ಜಿದಾರರು ಬಂಟರ ಸಂಘ ಮುಂಬಯಿ ಇದರ ಸದಸ್ಯತ್ವವನ್ನು ಹೊಂದಿರಬೇಕು. ಮಾತ್ರವಲ್ಲದೆ ಸದಸ್ಯತನದ ಪ್ರತಿಯನ್ನು ಅರ್ಜಿಯಲ್ಲಿ ಲಗತ್ತಿಸಿರತಕ್ಕದ್ದು. ಅರ್ಜಿಯನ್ನು ಕೇವಲ ವಿದ್ಯಾರ್ಥಿಗಳಿಗೆ, ವಿಧವೆಯವರಿಗೆ, ವಿಕಲಾಂಗ ಚೇತನರಿಗೆ ಸ್ವತಃ ಯಾ ಅವರವರ ಮಾತಾ ಪಿತೃರ ಯಾ ಪೋಷಕರಿಗೆ ಮಾತ್ರ ನೀಡಲಾಗುವುದು.
ಹೆಚ್ಚಿನ ವಿವರಗಳಿಗಾಗಿ ಮೀರಾ ಭಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ (98190 40608), ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ್ ಶೆಟ್ಟಿ (93238 35140), ಕಾರ್ಯದರ್ಶಿ ರವೀಂದ್ರ ಶೆಟ್ಟಿ ಕೊಟ್ರಪಾಡಿ ಗುತ್ತು (99673 25878) ಇವರುಗಳನ್ನು ಸಂಪರ್ಕಿಸಬಹುದು.